ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

ಇಮೇಜ್
#CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ. -----------------  ಪೌರತ್ವ ಕಾಯಿದೆಯ ವಿರುದ್ಧ ಮೂವರು ಹಿರಿಯ ವಿಶ್ರಾಂತ ಅಧಿಕಾರಿಗಳು ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.  ಈ ಅರ್ಜಿಯ ಸಾರಾಂಶವನ್ನು ಇಲ್ಲಿ ಭಾಷಾಂತರಿಸಿದ್ದೇನೆ. ಸರಳ ಮಾತುಗಳಲ್ಲಿ ಏಕೆ ಈ ಕಾಯಿದೆ ಸರಿ ಇಲ್ಲ ಎಂದು ರಿಟ್ ಅರ್ಜಿಯಲ್ಲಿ ವಿವರಿಸಲಾಗಿದೆ.  ಬಾಂಗ್ಲಾದೇಶದಲ್ಲಿ ಭಾರತದ ಹೈಕಮಿಷನರ್ ಆಗಿದ್ದ ದೇವ್ ಮುಖರ್ಜಿ, ಸೋಮಸುಂದರ್ ಬುರ್ರಾ, ಅಮಿತಾಭಾ ಪಾಂಡೆ ಎಂಬ ಇಬ್ಬರು  ನಿವ್ರತ್ತ ಹಿರಿಯ ಐ ಎ ಎಸ್ ಅಧಿಕಾರಿಗಳು ಸಲ್ಲಿಸಿರುವ ರಿಟ್ ಅರ್ಜಿ ಇದು.  ------------------------------- ಅನುವಾದ: ರಾಜಾರಾಂ ತಲ್ಲೂರು ಶತಮಾನಗಳಿಂದ ಮನುಷ್ಯ ಧರ್ಮ ಮತ್ತು ನಂಬಿಕೆಗಳ ಹೆಸರಿನಲ್ಲಿ ದೌರ್ಜನ್ಯ, ತಾರತಮ್ಯ ಮತ್ತು ಹಿಂಸೆಗಳಿಗೆ ಬಲಿಯಾಗುತ್ತಾ  ಬಂದಿದ್ದಾನೆ. ಇದರಿಂದಾಗಿ ವ್ಯಕ್ತಿಗಳು, ಕುಟುಂಬಗಳು, ಜನಸಮುದಾಯಗಳು ತಮ್ಮ ತಾಯ್ನೆಲವನ್ನು ಬಿಟ್ಟು ಹೋಗಬೇಕಾದ ಮತ್ತು ಬೇರೆಲ್ಲೋ ಹೋಗಿ ಆಶ್ರಯ ಪಡೆಯುವ ದಾರುಣ ಪರಿಸ್ಥಿತಿ ಬಂದದ್ದಿದೆ. ಕೆಲವೊಮ್ಮೆ ಅವರಿಗೆ ಆಯ್ಕೆಗಳಿರುವುದಿಲ್ಲ. ಜಗತ್ತಿನ ಚರಿತ್ರೆ ಎಂದರೆ, ಗಂಡಸರು, ಹೆಂಗಸರು ಮತ್ತು ಮಕ್ಕಳು ತಮ್ಮದೇ ನೆಲದಲ್ಲಿ ಪರಕೀಯರಾಗುವುದರ ಮತ್ತು  ಅವರ ಆ ಅಸಹಾಯಕ ಸ್ಥತಿಯಲ್ಲಿ ಸಮಾಜಗಳು, ದೇಶಗಳು ಅವರಿಗೆ ಆಶ್ರಯ ನೀಡಿದ್ದರ...

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

ಇಮೇಜ್
ಹೌದು ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ. 2-3 ದಿನದಲ್ಲಿ ಆಗಿರುವ ಕೆಲವು ವಿಚಾರಗಳನ್ನು ಗಮನಿಸಿ 1. ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ಹಿಂದಿ ರಾಷ್ಟ್ರಭಾಷೆ ಎಂದೂ, ಹಿಂದಿ ಜ್ಞಾನದ ಭಾಷೆ, ಹಿಂದಿ ಕಲಿಯಬೇಕೆನ್ನುವಂತೆ ಹೇಳಿಕೆ ನೀಡಿದ್ದಾರೆ, ಶಿಕ್ಷಣ ಸಚಿವರಾಗಿರುವುದರಿಂದ ಈ ಹೇಳಿಕೆ ಅತ್ಯಂತ ಆತಂಕಕಾರಿಯಾಗಿದೆ 2. ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸಿಟಿ ರವಿ ರವರು, ಹಿಂದಿ ಹೇರಿಕೆಯನ್ನು ವಿರೋಧಿಸುವ ಹೋರಾಟದ ಬಗ್ಗೆ ತೀರಾ ಕೇವಲವಾಗಿ ಮಾತನಾಡಿದ್ದಾರೆ....  ಇಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕನ್ನಡ ಅನ್ನದ ಭಾಷೆಯಾಗಬೇಕು ಎನ್ನುವುದೇ ಭ್ರಮೆ ಎಂದಿದ್ದಾರೆ 3. ಕೇಂದ್ರ ಸರಕಾರ ರಾಜ್ಯ ಸರಕಾರದ ಉದ್ಯೋಗ ನೇಮಕಾತಿಯನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗುತ್ತಿದೆ..  Connecting the dots ಅಂತಾರಲ್ಲಾ.. ಹಾಗೆ ಈ ವಿಚಾರಗಳನ್ನು connect ಮಾಡಿದಾಗ ಮುಂದಿನ ದಿನದಲ್ಲಿ ಕನ್ನಡಿಗರ ಮೇಲೆ ಆಗಬಹುದಾದ ಭಾಷಾ ಹೇರಿಕೆ/ದಾಳಿ ದೊಡ್ಡದಾಗಿಯೇ ಇರುತ್ತದೆ ಎನ್ನುವುದನ್ನು ಊಹಿಸಬಹುದಾಗಿದೆ.  ಯಾವ ಕಾರಣಕ್ಕಾಗಿ ಶಿಕ್ಷಣ ಸಚಿವರು ಹಿಂದಿ ರಾಷ್ಟ್ರಭಾಷೆಯೆಂದು ಸುಳ್ಳು ಹೇಳಿದ್ದಾರೆ? ಕನ್ನಡ ಮತ್ತು ಸಂಸ್ಕೃತಿ ಸಚಿವರು, ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾಧ್ಯಮದಲ್ಲಿ ಓದಿಸಿ, ಆಡು ಭಾಷೆ ಕನ...

ಗೋವೆಯ ಸರ್ಕಾರಿ ಸಾರಿಗೆ ಹೆಸರು ಕದಂಬ!

ಇಮೇಜ್
ರ್ನಾಟಕದ ಪ್ರಮುಖ ಕನ್ನಡಿಗ ರಾಜಮನೆತನಗಳಲ್ಲಿ ಒಂದಾದ ಕದಂಬ ರಾಜವಂಶವು ಗೋವೆಯನ್ನು ಆಳಿದ ಪ್ರಮುಖ ರಾಜವಂಶವಾಗಿದೆ . ಅವರ ಆಳ್ವಿಕೆಯಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು , ತದನಂತರದ ದಿನಗಳಲ್ಲಿ ಇತರರ ಆಳ್ವಿಕೆಗೆ ಒಳಪಟ್ಟಾಗ ಕನ್ನಡದ ಭಾಷೆಯ ಬಳಕೆ ಕ್ರಮೇಣ ಕಡಿಮೆಯಾಯಿತು , ಪೋರ್ಚುಗೀಸರು ಮತ್ತು ಮರಾಠರ ಪ್ರಭಾವದಿಂದಾಗಿ ಕನ್ನಡ ಭಾಷೆಯ ಬಳಕೆ ಕ್ರಮೇಣ ಕಡಿಮೆಯಾಗಿ , ಪೋರ್ಚುಗೀಸ್ ಮತ್ತು ಮರಾಠಿ ಭಾಷೆಗಳು ಆಡಳಿತೆಯಲ್ಲಿ ವ್ಯವಹಾರ ಭಾಷೆಗಳಾಗಿ ಪರಿಣಮಿಸಿದ್ದರೂ ಸುಮಾರು 19ನೇ ಶತಮಾನದ ಅಂತ್ಯದವರೆವಿಗೂ ಕನ್ನಡ ಲಿಪಿ ಗೋವೆಯಲ್ಲಿ ಬಳಕೆಯಲ್ಲಿದ್ದುದನ್ನು ಕಾಣಬಹುದು . ಕೊಂಕಣಿ ಲಿಪಿಯಿಲ್ಲದ ಒಂದು ಭಾಷೆ , ಮೆಹರ್‌ಚಂದ್ ಮಹಜನರು ಕೊಂಕಣಿ ಒಂದು ಸ್ವತಂತ್ರ ಭಾಷೆಯೆಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ . ಕೊಂಕಣಿ ಭಾಷೆಯಲ್ಲಿರುವ ಅನೇಕ ಕಾಗದ ಪತ್ರಗಳು ಕನ್ನಡ ಲಿಪಿಯಲ್ಲಿರುವುದು ಗೋವಾ ಪತ್ರಾಗಾರದಲ್ಲಿನ ಕೆಲವು ದಾಖಲೆಗಳಿಂದ ತಿಳಿಯುತ್ತದೆ . 1975ರಲ್ಲಿ ಸೂರಿಯಾಜಿ ಆನಂದರಾವ್ ಎಂಬುವರು ಮರಾಠಿ ಭಾಷೆಯನ್ನು ಬಾಲಭೋದ ಮತ್ತು ಮೋಡಿಲಿಪಿಯಲ್ಲಿ ಮಾತ್ರವಲ್ಲದೆ “ ಕನಡಿ ' ಅಥವಾ ಕಾಂದೇವಿ ಲಿಪಿಯಲ್ಲೂ ಬರೆಯಲಾಗುತ್ತಿತ್ತು ಎಂದು ಹೇಳಿದ್ದಾರೆ . ಕನ್ನಡ ಭಾಷೆ ಮತ್ತು ಕನ್ನಡ ಲಿಪಿಗಳು ಬಹುಕಾಲದಿಂದಲೂ ಆ ಭಾಗಗಳಲ್ಲಿ ಪ್ರಚಲಿತವಿದ್ದು , ಕ್ರಮೇಣ ಕೊಂಕಣಿ , ಮರಾಠಿ ಮತ್ತು ಪೋರ್ಚುಗೀಸ್ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆ ಕಣ್ಮರೆ...

ಪರಭಾಷಿಕರ ಹೋಟ್ಲು, ಡಬ್ಬಿಂಗ್ ಮತ್ತು ಕನ್ನಡಿಗರ ಕಥೆ! ಏನಿದು ಅನ್ಕೊಂಡ್ರಾ ಮುಂದೆ ಓದೋಕೆ ಕೊಂಡಿ ಒತ್ತಿ |ಪ್ರದೀಪ್ ಕುಮಾರ್

ಇಮೇಜ್
ಕರ್ನಾಟಕದಲ್ಲಿ ಹೊರ ರಾಜ್ಯದವರೊಬ್ಬರು ಬಂದು ಒಂದು ಹೊಟೆಲ್ ತೆರೆದರು, ಒಳ್ಳೆಯ ರುಚಿಕರವಾದ ಅಹಾರವನ್ನು ನೀಡುತಿದ್ದರು, ಹೆಚ್ಚು ಹೆಚ್ಚು ಜನ ಆ ಹೊಟೆಲ್ಗೆ ಹೋಗುತಿದ್ದರು. ಆ ಹೊಟೆಲ್ನ ಬೋರ್ಡ್, ಮೆನು ಕಾರ್ಡ್, ಬಿಲ್ ಎಲ್ಲಾ ಕನ್ನಡದಲ್ಲೇ ಇತ್ತು ಮತ್ತು ಎಲ್ಲಾ ಕೆಲಸಗಾರರೂ(ಹೊರ ರಾಜ್ಯದವರು)ಕನ್ನಡದಲ್ಲೇ ವ್ಯವಹರಿಸುತಿದ್ದರು. ಆಗ ನಮ್ಮ ಹೆಮ್ಮೆಯ ಕೆಲವು ಕನ್ನಡಿಗ ಹೊಟೆಲ್ ಮಾಲೀಕರು ಮತ್ತು ಕೆಲಸಗಾರರೆಲ್ಲಾ ಸೇರಿ ಇನ್ನು ಮುಂದೆ ಹೊರ ರಾಜ್ಯದವರು ಯಾರೇ ಬಂದು ಕರ್ನಾಟಕದಲ್ಲಿ ಹೋಟೆಲ್ ತೆಗೆದರೂ ಅವರ ಬೋರ್ಡ್, ಮೆನು ಕಾರ್ಡ್, ಬಿಲ್ ಇಲ್ಲೆಲ್ಲೂ ಕನ್ನಡವನ್ನು ಬಳಸುವ ಹಾಗಿಲ್ಲ ಮತ್ತು ಯಾವ ಕಾರಣಕ್ಕೂ ಗ್ರಾಹಕರ ಜೊತೆ ಕನ್ನಡದಲ್ಲಿ ವ್ಯವಹರಿಸುವ ಹಾಗಿಲ್ಲ ಎಂಬ ನಿಯಮ ಮಾಡಿಬಿಟ್ಟರು.  ಪಾಪ ತಮ್ಮ ವ್ಯವಹಾರಕ್ಕೆ ತೊಂದರೆ ಆಗುತ್ತದೆ ಅನ್ನುವ ಕಾರಣಕ್ಕೆ ಅವರೆಲ್ಲಾ ಒಪ್ಪಿ ಕನ್ನಡವನ್ನು ತಮ್ಮ ಸೇವೆಯಿಂದ ತೆಗೆದರು.  ಆದರೆ ಬಹಳ ರುಚಿಯಾದ ಸಮೋಸ ಕೊಡುತಿದ್ದ ಹೋಟೆಲ್ನವ ಹಿಂದಿಯಲ್ಲೇ ಸೇವೆ ಕೊಡುತಿದ್ದ ಕಾರಣ ಸಮೋಸ ಪ್ರಿಯ ಕನ್ನಡಿಗರೆಲ್ಲಾ ಹಿಂದಿ ಕಲಿತು ವ್ಯವಹರಿಸತೊಡಗಿದರು, ಇಡ್ಲಿ, ದೋಸೆ ಪ್ರಿಯರು ತಮಿಳು ಕಲಿತು ತಮಿಳರಾದರು, ಬಿರಿಯಾನಿ ಪ್ರಿಯರು ತೆಲುಗರಾದರು, ಪರೋಟ ಪ್ರಿಯರು ಮಲಯಾಳಿಗಳಾದರು, ಪಿಡ್ಜ, ಕೇ.ಎಫ್.ಸಿ ಪ್ರಿಯರು ಇಂಗ್ಲೀಷರಾದರು.ಒಟ್ಟಿನಲ್ಲಿ ಹೊಟೆಲ್ನಲ್ಲಿ ತಿನ್ನುವ ಸಲುವಾಗಿ ಪರಭಾಷೆ ಕಲಿತು ಕನ್ನಡದಿಂದ ದೂರ...

ಕರ್ನಾಟಕ ಏಕೀಕರಣದ ಹೋರಾಟಕ್ಕೆ ತಿರುವು ಕೊಟ್ಟ ಹುಬ್ಬಳ್ಳಿಯ ಆ ಗಲಭೆ........!

ಇಮೇಜ್
ಕರ್ನಾಟಕ ಏಕೀಕರಣ ಚಳುವಳಿಯು ಪ್ರಮುಖ ತಿರುವು ಕಂಡದ್ದು ಹುಬ್ಬಳ್ಳಿ ಗಲಭೆಯ ಮೂಲಕ . ಆ ಮೊದಲು ವಾಂಛಿ ಸಮಿತಿಯ ಮೂಲಕ ಆಂಧ್ರ ಪ್ರದೇಶದ ರಚನೆಗೆ ಅವಕಾಶ ಲಭ್ಯವಾಗಿತ್ತಾದರೂ , ಬಳ್ಳಾರಿ ತಾಲ್ಲೂಕಿನ ಸಮಸ್ಯೆಯನ್ನು ಬಗೆಹರಿಸಲು . ೨೫ - ೩ - ೧೯೫೩ರಂದು ಲೋಕಸಭೆಯಲ್ಲಿ ಚರ್ಚೆ ನಡೆದು , ಮಿಶ್ರಾ ಸಮಿತಿಯ ನೇಮಕದ ಸುಳಿವು ದೊರೆತಿತ್ತು . ಹೀಗೇ ಮುಂದುವರಿದರೆ , ಕರ್ನಾಟಕ ಪ್ರಾಂತರಚನೆಯು ಗಗನ ಕುಸುಮ ಆಗಿಬಿಡುವ ಅತಂಕ ಕೆಲವರನ್ನಾದರೂ ಕಾಡಿತ್ತು . ಮಿಶ್ರಾ ಸಮಿತಿಯ ನೇಮಕದ ಸುಳಿವು ದೊರೆತು , ಅಸಮಾಧಾನಗೊಂಡ ಅನೇಕರ ಪೈಕಿ ಹುಬ್ಬಳ್ಳಿ ತಾಲ್ಲೂಕು ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಅದರಗುಂಚಿ ಶಂಕರಗೌಡ ಪಾಟೀಲರು ೨೮ - ೩ - ೧೯೫೩ರಿಂದ ತಮ್ಮ ಊರಿನ ಕಲ್ಲೇಶ್ವರ ದೇವಾಲಯದಲ್ಲಿ ಕರ್ನಾಟಕ ಏಕೀಕರಣ ಆಗುವ ಭರವಸೆ ಬರುವವರೆಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಮಾಡುವ ನಿರ್ಧಾರವನ್ನು ಪ್ರಕಟಿಸಿದರು . ಶಂಕರಗೌಡರ ಆಮರಣಾಂತ ಉಪವಾಸ ಸತ್ಯಾಗ್ರಹದ ವಿಷಯವು ಮೊದಲ ಎರಡು ದಿನ ಹೆಚ್ಚು ಜನರ ಗಮನ ಸೆಳೆಯಲಿಲ್ಲ . ನಂತರ ರಾಜ್ಯದ ಮಾತ್ರವಲ್ಲದೆ ರಾಷ್ಟ್ರದ ಬಹುತೇಕ ಪತ್ರಿಕೆಗಳಲ್ಲಿ ಶಂಕರಗೌಡರ ಉಪವಾಸ ಸತ್ಯಾಗ್ರಹದ ವಿಚಾರ ಪ್ರಕಟಗೊಂಡು ರಾಷ್ಟ್ರದ ಗಮನ ಸೆಳೆಯಿತು . ಉಪವಾಸವನ್ನು ಆರಂಭಿಸಿದ ಶಂಕರಗೌಡರನ್ನು ಹತ್ತಿರದಿಂದ ನೋಡುತ್ತಿದ್ದ ಜನ ಆತಂಕದಿಂದ ಸಿಟ್ಟಿಗೆದ್ದರು .  ೧೯ - ೪ - ೧೯೫೩ರಂದು ಹುಬ್ಬಳ್ಳಿಯ ಪುರಸಭಾ ಭವನದಲ್ಲಿ ಕರ್ನಾಟಕ ಪ್ರದೇಶ ಕಾ...

ಈ ಚೈನಾದವರು ತಮಿಳು ಯಾಕೆ ಕಲಿತಿದಾರೆ ? ತಮಿಳು ಸಂಸ್ಕೃತಿ ಬಗ್ಗೆ ಯಾಕೆ ಅಧ್ಯಯನ ಮಾಡ್ತಿದ್ದಾರೆ 🤔, ಇವರಿಗೆ ಕನ್ನಡವ‌ನ್ನ ಹೇಗೆ ಕಲಿಸೋದು?

ಇಮೇಜ್
ಪ್ರಬಲ ಕರ್ನಾಟಕ ಸಂಗೀತ ವಿದ್ವಾನ್ ಕವಿತಾ ರಮನನ್ ರವರಿಂದ ಚೈನೀಸ್ ಭಾಷೆಯವರಿಗಾಗಿ ನೀಡಲ್ಪಟ್ಟ ಕರ್ನಾಟಕ ಸಂಗೀತ ಕುರಿತಾದ ಒಂದು ಸೆಮಿನಾರ್.  ಬೀಜಿಂಗ್ ನಲ್ಲಿನ ಅಂತಾರಾಷ್ಟ್ರೀಯ ಭಾಷಾ ವಿಶ್ವವಿದ್ಯಾನಿಲಯದ ತಮಿಳ್ ಡೆಪಾರ್ಟ್ಮೆಂಟಲ್ಲಿ ನಡೆದದ್ದು. ಈ ಚೈನಾದವರು ತಮೀಳು ಯಾಕೆ ಕಲಿತಿದಾರೆ ? ತಮಿಳು ಸಂಸ್ಕೃತಿ ಬಗ್ಗೆ ಯಾಕೆ ಅಧ್ಯಯನ ಮಾಡ್ತಿದ್ದಾರೆ 🤔 ಸಂಸ್ಕೃತ ಕಡಿಮೆ, ಹಿಂದಿ ಮತ್ತು ತಮಿಳ್ ಕಲೀತಿದ್ದಾರೆ. ಅಂದ್ರೆ ಅವರ ಬಿಸಿನೆಸ್ ಪರ್ಪಸ್ ಗೆ. ಹಿಂದಿ ಉತ್ತರ ಭಾರತಕ್ಕೆ ಬಳಕೆಯಾದ್ರೆ ತಮಿಳ್ ತಮಿಳ್ನಾಡು, ಶ್ರೀಲಂಕಾ, ಹಾಗೂ ಸಿಂಗಪುರ್ ಮಲೇಷಿಯಾ ದಲ್ಲಿ ಮುಂದೆ ವ್ಯಾಪಾರಕ್ಕೆ ಬಳಕೆಯಾಗಬಹುದು. ಚೈನಾದ ವಸ್ತುಗಳನ್ನು ಇವರಿಗೆಲ್ಲಾ ಮಾರಬೇಕಲ್ವಾ, ಅದ್ಕೆ. ಟೋಟಲಿ ಅವರ ಉದ್ಯಮವನ್ನು ವಿಸ್ತರಿಸಲು. ಯಾಕೆಂದ್ರೆ ಚೈನಾ ವಿಶ್ವದಲ್ಲೇ ಅತೀ ದೊಡ್ಡ ಉತ್ಪಾದನಾ ದೇಶ. ಆ ಬೀಜಿಂಗ್ ಅಂತಾರಾಷ್ಟ್ರೀಯ ಭಾಷಾ ವಿಶ್ವವಿದ್ಯಾಲಯದಲ್ಲಿ ಭಾರತದ ಭಾಷೆಗಳಾದ ಹಿಂದಿ, ಬಂಗಾಳಿ, ತಮಿಳ್, ಉರ್ದು ಮುಂತಾದ ಭಾಷೆಗಳನ್ನು ಕಲಿಸಲಾಗುತ್ತಿದೆ. ಉರ್ದು ಪಾಕಿಸ್ತಾನಕ್ಕೆ, ಬಂಗಾಳಿ ಬಾಂಗ್ಲಾದೇಶಕ್ಕೆ. ಹೆಂಗಾದ್ರೂ ಮಾಡಿ ಈ ಚೈನೀಸ್ ಗಳಿಗೆ ಕನ್ನಡ ಕೂಡ ಕಲಿಸ್ಬೇಕು🙂! ಕಲಿಸಬಹುದು, ಆದ್ರೆ ನಮ್ ಜನರು ಸರಿಲ್ಲ. ನಮ್ಮವರಿಗೆ ಕರ್ನಾಟಕದ ಏಳಿಗೆ ಬಗ್ಗೆನೇ ಗೊತ್ತಿಲ್ಲ, ಮತ್ತೆಲ್ಲಿ ಕನ್ನಡದ ಏಳಿಗೆ ಬಗ್ಗೆ ಮಾತಾಡೋದು. ನಾವು/ಕನ್ನಡಿಗರು ಪ್ರತಿಯೊಂದರಲ್ಲೂ ತುಂಬಾ ಲೇಟ್. ಅದ್ಕೇ...

ಬೆಂಗಳೂರು ಯಾಕೆ ಸಿಂಗಾಪುರ ಆಗಲ್ಲ ಅಂತಂದ್ರೆ....

ಇಮೇಜ್
ಸಿಂಗಾಪುರಕ್ಕೆ ಒಮ್ಮೆ ಹೋಗಿದ್ದಾಗ ಅಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಚ್ಚುಕಟ್ಟುತನ, ಸಮಯಪಾಲನೆ, ಒಂದು ಮಗುವಿನಿಂದ ಹಿಡಿದು ಒಬ್ಬ ವಯಸ್ಸಾದವರೆಗೆ ಎಲ್ಲರಿಗೂ ಅನುಕೂಲ ಕಲ್ಪಿಸುವ ಯೋಚನೆ ಕಂಡು ಬೆರಗಾಗಿದ್ದೆ. ಅಲ್ಲಿನ ರಸ್ತೆಗಳಲ್ಲಿ ಖಾಸಗಿ ವಾಹನಗಳನ್ನು ಓಡಿಸುವುದು ಬಹು ಖರ್ಚಿನ ಬಾಬತ್ತಾಗಿಸಿದ್ದ ಸರ್ಕಾರ ಪ್ರತಿಯೊಬ್ಬರು ಸಾರ್ವಜನಿಕ ಸಾರಿಗೆಯನ್ನು ಬಯಸಿ ಬಳಸುವಂತೆ ಏರ್ಪಾಡುಗಳನ್ನು ಕಟ್ಟಿದೆ. ಅಲ್ಲಿ ವರ್ಷಕ್ಕೆ ಸಾವಿರ ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಸಬಹುದು, ಕಾರೆನೋ ಕೊಳ್ಳಬಹುದು, ಆದರೆ ಅದರ ರೆಜಿಸ್ಟ್ರೇಶನ್ ಮಾಡಿಸಲು ಪರ್ಮಿಟ್ ಅನ್ನು ಹರಾಜಿನಲ್ಲಿ ಕೊಳ್ಳಬೇಕು. ಅಲ್ಲಿಗೆ ಹತ್ತು ಲಕ್ಷದ ಕಾರು ಕೊಂಡು ರಸ್ತೆಗೆ ತರಲು ಒಂದು ಕೋಟಿ ಖರ್ಚು ಅಂತ ಕೇಳ್ಪಟ್ಟೆ. ಒಟ್ಟಾರೆ ಜನರನ್ನು ಖಾಸಗಿ ವಾಹನದ ಮಾಲಿಕತ್ವದಿಂದ ದೂರ ಇಡಬೇಕು ಅನ್ನುವುದು ಅಲ್ಲಿನ ಸರ್ಕಾರದ ಆಲೋಚನೆ.  ಬೆಂಗಳೂರಲ್ಲಿ ರಸ್ತೆಯ ಕ್ಯಾಪಾಸಿಟಿ ಇರೋದು 7.5 ಲಕ್ಷ ವಾಹನಗಳಿಗೆ, ಆದರೆ ರಸ್ತೆಯ ಮೇಲಿರೋದು 70 ಲಕ್ಷಕ್ಕೂ ಹೆಚ್ಚು ವಾಹನಗಳು. ಸಾರ್ವಜನಿಕ ಸಾರಿಗೆಯನ್ನು ಅತ್ಯದ್ಭುತವಾಗಿ ಕಟ್ಟಬೇಕು, ಖಾಸಗಿ ವಾಹನಗಳ ಬಳಕೆ ಕಡಿಮೆಯಾಗಿಸಬೇಕು, ಆ ಮೂಲಕ ಮಾಲಿನ್ಯ, ಟ್ರಾಫಿಕ್ ಕಡಿಮೆ ಮಾಡಬೇಕು ಅನ್ನುವ ಆಸಕ್ತಿ ಹಿಂದಿನಿಂದ ಇಂದಿನ ಯಾವ ಸರ್ಕಾರಗಳಿಗೂ ಇಲ್ಲ. ಅದಕ್ಕೆ ಒಂದು ಮುಖ್ಯ ಕಾರಣ ವಾಹನ ನೊಂದಾವಣೆಯಿಂದ ಸರ್ಕಾರಕ್ಕೆ ಬರುವ ತೆರಿಗೆ ಆದಾಯ. ಭಾರತದ ಒ...

ಮಾಲ್ಗುಡಿ ನಿವಾಸಿಗಳು ಕನ್ನಡದಲ್ಲಿ ಮಾತಾಡ್ತಾಯಿದ್ದ 8 ಸಂಚಿಕೆಗಳನ್ನ ನೋಡಿ ಸಂತಸದಿಂದ ಎದೆ ತುಂಬಿ ಬಂತು ! - ಮಹೇಂದ್ರ

ಇಮೇಜ್
ಮೂವತ್ತು  ವರ್ಷಗಳನಂತರ ಮತ್ತೆ ಮಾಲ್ಗುಡಿ ಡೇಸ್ ಧಾರಾವಾಹಿಯ season 4 ಅಲ್ಲಿ ಬಂದ Vendor of sweets ಅನ್ನು ಅಮೆಜಾನ್ ಪ್ರೈಮಲ್ಲಿ ಮನೆಯವರ ಜೊತೆ ನೋಡಿದೆ. ಮಾಲ್ಗುಡಿ ನಿವಾಸಿಗಳು ಮತ್ತೆ ಕನ್ನಡದಲ್ಲಿ ಮಾತಾಡ್ತಾಯಿದ್ದ 8 ಸಂಚಿಕೆಗಳು ನೋಡಿ ಸಂತಸದಿಂದ ಎದೆ ತುಂಬಿ ಬಂತು ! ಹೌದು ಸ್ನೇಹಿತರೆ -ಅಮೆಜಾನ್ ಪ್ರೈಮಲ್ಲಿ  ಆಡಿಯೋ ಸೆಟ್ಟಿಂಗ್ಸ್ ಅಲ್ಲಿ ಹಿಂದಿ ಜೊತೆ ಕನ್ನಡ ಆಯ್ಕೆ ಸಹ ಕಂಡು ಬರತ್ತೆ. ಆ ಆಯ್ಕೆಯನ್ನು ಸ್ವೀಕರಿಸಿ ಮಾಲ್ಗುಡಿ ಡೇಸ್ ಕನ್ನಡದಲ್ಲಿ ನೋಡಲು ಸಾದ್ಯ ! ಸದ್ಯಕ್ಕೆ ಬರಿ season 4 ಸಂಚಿಕೆಗಳು ಕನ್ನಡೀಕರಣ ಆಗಿ ಕನ್ನಡದಲ್ಲಿ ಬಂದಿವೆ.  ಸೈರಾ ನರಸಿಂಹ ರೆಡ್ಡಿ ದೊಡ್ಡ ಮಟ್ಟದಲ್ಲಿ ಕನ್ನಡದಲ್ಲೂ ಬಿಡುಗಡೆ ಆದನಂತರ ಇದೆ ತಿಂಗಳಲ್ಲಿ ಮಾಲ್ಗುಡಿ ಡೇಸ್ ಕನ್ನಡದಲ್ಲಿ ನೋಡಲು ಅವಕಾಶ ಸಿಕ್ಕಿದ್ದು ಈ ಡಬ್ಬಿಂಗ್ ಹೋರಾಟದ ಪಯಣದಲ್ಲಿ ಒಂದು ದೊಡ್ದು ಮೈಲಿಗಲ್ಲು !  ಇವೆಲ್ಲರ  ಬಿಡುಗಡೆ ನಮ್ಮ ನಾಡಹಬ್ಬ ದಸರಾ ಸಮಯದಲ್ಲಾಗಿದ್ದು  ಹಾಗು ಕಂಡ ವಿಜಯ ನೋಡಿದಮೇಲೆ ಇದು  ಕನ್ನಡೀಕರಣದ ಪಯಣದಲ್ಲಿ ಕಂಡ ಒಂದು ಶಾಶ್ವತವಾದ ಬೆಳ್ವಣಿಗೆ ! ಸೈರಾ ನರಸಿಂಹದಲ್ಲಿ ಸುದೀಪ್ ಅವರು ಕನ್ನಡದಲ್ಲಿ ಅವ್ರೆ ಡಬ್ ಮಾಡಿದ್ದು ಹಾಗು ಮಾಲ್ಗುಡಿ ಡೇಸ್ ಅಲ್ಲಿ ಅನಂತ್ ನಾಗ್ ಅವರ ಧ್ವನಿ ಮತ್ತೆ ಕನ್ನಡದಲ್ಲಿ ಕೇಳಿದ್ದು ಈ ಒಂದು ಬದ್ಲಾವಣೆಯ ಸಂಕೇತ.   ಮೂವತ್ತು ವರ್ಷಗಳ ಹಿಂದೆ ಈ ಮಾಲ್ಗುಡಿ ...

ಎಲ್ಲಿಗೆ ಬಂತು ನೆರೆ ಪರಿಹಾರ! ಕಣ್ಣು ಮುಚ್ಚಿ ಕುಳಿತ ಕೇಂದ್ರ ಮತ್ತು ರಾಜ್ಯ ಸರಕಾರ

ಇಮೇಜ್
ನೆರೆ ಬಂದು ತಿಂಗಳುಗಳೇ ಕಳೆದವು. ನೆರೆಯಲ್ಲಿ ನೊಂದವರ ಕುರಿತ ಚರ್ಚೆ ಆಗಲೇ ತೆರೆಮರೆಗೆ ಸರಿಯುತ್ತಿದೆ. ಕೇಂದ್ರದಿಂದ ಪರಿಹಾರ ಕನ್ನಡಿಯೊಳಗಿನ ಗಂಟಾಗಿಯೇ ಉಳಿದಿದೆ. ಎಲ್ಲಿಂದ ಪರಿಹಾರ ತರಲಿ ಅಂತ ದಾರಿ ಕಾಣದ ರಾಜ್ಯ ಸರ್ಕಾರ ಎಲ್ಲ ಇಲಾಖೆಗಳ ಇರುವ ಬರುವ ರಿಸರ್ವ್ ನಿಧಿಯನ್ನೆಲ್ಲ ಬಳಸಿಕೊಳ್ಳುವ ಪ್ರಯತ್ನದಲ್ಲಿದೆ. ಇನ್ನೊಂದೆಡೆ ವಿದ್ಯಾರ್ಥಿಗಳು ಚಂದಾ ಸಂಗ್ರಹಿಸಲಿ, ಕ್ರಿಕೆಟ್ ಮ್ಯಾಚ್ ಅಲ್ಲಿ ಸಹಾಯ ಕೇಳೊಣ, ಕೋಟ್ಯಾಧಿಪತಿ ಆಟ ಆಡಿ ಸಂಗ್ರಹಿಸೋಣ ಅನ್ನುವ ಪ್ರಯತ್ನಗಳು ನಡೆಯುತ್ತಿವೆಯೇ ಹೊರತು ದೆಹಲಿಯಲ್ಲಿ ಲಾಬಿ ಮಾಡಿ ಪರಿಹಾರ ತರುವ ಧೈರ್ಯ ಕಾಣುತ್ತಿಲ್ಲ. ಕರ್ನಾಟಕದ ರಾಜಕೀಯ ನಾಯಕತ್ವ ತನ್ನನ್ನು ತಾನೇ ಎಷ್ಟು ಬಲಹೀನವಾಗಿಸಿಕೊಂಡಿದೆ ಅನ್ನುವುದು ಸ್ಪಷ್ಟವಾಗಿ ಕಾಣುತ್ತಿದೆ. ವಿರೋಧ ಪಕ್ಷಗಳೂ ಒಂದು ನಿರ್ಣಾಯಕವಾದ ರೀತಿಯ ಹೋರಾಟದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ಸೋತಿವೆ. ಈ ಹೊತ್ತಲ್ಲಿ ಬಂದೆರಗಿರುವ ಉಪಚುನಾವಣೆ ಮೂರೂ ಪಕ್ಷಗಳ ಫೋಕಸ್ ಅನ್ನು ಇನ್ನೊಂದು ತಿಂಗಳು ಚುನಾವಣೆಯತ್ತ ಎಳೆಯುವುದರಿಂದ ಅಲ್ಲಿಯವರೆಗೆ ಸೂರು ಕಳೆದುಕೊಂಡವರು, ತಿನ್ನಲು ಏನೂ ಸಿಗದವರು ಎಲ್ಲಿದ್ದಾರೋ ಅಲ್ಲೇ  ಅಡ್ಜಸ್ಟ್ ಮಾಡಿಕೊಳ್ಳಬೇಕು. ಬೆಂಗಳೂರಿನ ಉತ್ತರ ಕರ್ನಾಟಕ ಸಂಘಗಳೆಲ್ಲ ಮಲಗಿ ನಿದ್ದೆ ಹೋಗಿವೆ. ಮಹದಾಯಿ ಹೊತ್ತಲ್ಲಿ ಎಷ್ಟೆಲ್ಲ ಪ್ರತಿಭಟನೆ ಹಮ್ಮಿಕೊಂಡಿದ್ದ, ಪ್ರತ್ಯೇಕ ರಾಜ್ಯದ ಕೂಗೂ ಎಬ್ಬಿಸಿದ್ದವರೆಲ...

ತಮ್ಮ ಉದ್ಯೋಗವನ್ನು ಬೇರೆಯವರಿಗೆ ಬಿಟ್ಟುಕೊಟ್ಟು! ಬೀದಿಗೆ ಬರಲು ತಯಾರಾಗಿರುವ ಕನ್ನಡಿಗರು!

ಇಮೇಜ್
ಕನ್ನಡಿಗರ   ಕೈ ತಪ್ಪುತ್ತಿವೆ  ಬ್ಯಾಂಕ್  ಉದ್ಯೋಗಗಳು....... ಅರವತ್ತು ಮತ್ತು ಎಪ್ಪತ್ತರ  ದಶಕಗಳಲ್ಲಿ, ಎಲ್ಲಿ  ನೋಡಿದರೂ ಬ್ಯಾಂಕ್‍ಗ¼ಲ್ಲಿ  ಕನ್ನಡಿಗರದೇ ಪಾರುಪತ್ಯ. ಒಂದೆರಡು ದಶಕಗಳ  ಕಾಲ ಇದು ಮುಂದುವರಿಯಿತು. ದಕ್ಷಿಣ ಭಾರತದ  ತುದಿಯಿಂದ  ಭಾರತದ  ಉದ್ದಗಲಕ್ಕೂ  ವಿವಿಧ ಬ್ಯಾಂಕ್‍ಗಳಲ್ಲಿ ಕನ್ನಡಿಗರು ಕಾಣಸಿಗುತ್ತಿದ್ದರು.  ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಬ್ಯಾಂಕ್‍ಗಳು ದೇಶದ ಮೂಲೆ ಮೂಲೆಯಲ್ಲೂ ತಮ್ಮ ಶಾಖೆಗಳನ್ನು  ತೆರೆದು ವಿಸ್ತರಣೆಗೆ  ಮುಂದಾದಾಗ  ಸೇವಾ ಜೇಷ್ಠತೆಯ ಆಧಾರದ ಮೇಲೆ  ಹಲವೆಡೆ ಕನ್ನಡಿಗ ಸಿಬ್ಬಂದಿಗಳನ್ನೇ ವರ್ಗಾವಣೆ ಮಾಡಲಾಗಿತ್ತು. ಬ್ಯಾಂಕ್ ರಾಷ್ಟ್ರೀಕರಣದ ಉದ್ದೇಶಗಳಲ್ಲಿ  ದೇಶದ  ಮೂಲೆ ಮೂಲೆಗೂ ಬ್ಯಾಂಕಿಂಗ್  ಸೌಲಭ್ಯ ವಿಸ್ತರಿಸುವುದು ಪ್ರಮುಖವಾಗಿತ್ತು. ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳು  ತಮ್ಮ ಪ್ರಾದೇಶಿಕ  ವ್ಯಾಪ್ತಿಯನ್ನು ಮೀರಿ ಶಾಖಾ  ವಿಸ್ತರಣೆಗೆ  ಮುಂದಾದವು. ಸೀಮಿತ ವರ್ಗದವರಿಗೆ  ಸಿಗುತ್ತಿದ್ದ ಬ್ಯಾಂಕ್ ಸೌಲಭ್ಯವನ್ನು  ಬಳಸಲು ಜನಸಾಮಾನ್ಯರೂ ಮುಂದಾದಾಗ  ಸ್ಥಳೀಯರ  ಭಾಷೆಯಲ್ಲಿ  ವ್ಯವಹರಿಸುವುದು ಬ್ಯಾಂಕ್‍ಗಳಿಗೆ  ಅನಿವಾರ್ಯವಾಯಿತು. ಹೀಗಾಗಿ ರಾಜ್ಯವಾರು ನೇಮಕಾತಿ ಪ್ರಕ್ರಿಯೆಗೆ  ಚಾಲನೆ ಸಿ...

ಜನಸಂಖ್ಯಾ ಸ್ಪೋಟ್ ಹಿಂದಿ ರಾಜ್ಯಗಳ ಸಮಸ್ಯೆ, ಅದನ್ನ ದಕ್ಷಿಣದವರ ತಲೆಗೆ ಕಟ್ಟಬೇಡಿ!!!

ಇಮೇಜ್
#ಐಡಿಯಾ_ಆಫ್_ಹಿಂದಿಯಾ  ಭಾರತಕ್ಕೆ ಜನಸಂಖ್ಯಾ ಸ್ಪೋಟದ ಸಮಸ್ಯೆ ಇಲ್ಲ.  ಮುಂದಿನ ಬಾರಿ ಯಾರಾದರೂ "ಭಾರತದ" ಜನಸಂಖ್ಯಾ ಸಮಸ್ಯೆ ಬಗ್ಗೆ ಮಾತನಾಡಿದರೆ, ಅವರಿಗೆ  ಈ ಕೆಳಗಿನಂತೆ ವಿವರಿಸಿ  ಹೇಳಿ.  1) ಪಶ್ಚಿಮ ಬಂಗಾಳದ ಒಟ್ಟು ಹೆರುವಣಿಕೆ ದರ 1.64 - ನೆದರ್‌ಲ್ಯಾಂಡ್ಸ್, ಕೆನಡಾ ಮತ್ತು ಡೆನ್ಮಾರ್ಕ್‌ನಂತೆಯೇ.  2) ದ್ರಾವಿಡ ನುಡಿಗಳ ತಾಯ್ನಾಡಿನಲ್ಲಿ  ಜನಸಂಖ್ಯೆಯ ಸಮಸ್ಯೆ ಇಲ್ಲ.  3) ತಮಿಳುನಾಡು ಮತ್ತು ಕೇರಳ ಪಶ್ಚಿಮ ಬಂಗಾಳಕ್ಕೆ ಸುಮಾರು 1.7 ರಷ್ಟಿದೆ.  4) ಆಂಧ್ರಪ್ರದೇಶ (ತೆಲಂಗಾಣ ಸೇರಿದಂತೆ), ಕರ್ನಾಟಕ ಮತ್ತು ಮಹಾರಾಷ್ಟ್ರಗಳು ಸುಮಾರು 1.8 ರಷ್ಟಿದ್ದು, ಬೆಲ್ಜಿಯಂ, ಫೈಂಡ್‌ಲ್ಯಾಂಡ್ ಮತ್ತು ನಾರ್ವೆಗೆ ಹೋಲಿಸಬಹುದು.ಯುಎಸ್ಎ ಮತ್ತು ಯುಕೆಗಿಂತ ಇವೆಲ್ಲವೂ ಉತ್ತಮವಾಗಿವೆ. ಆದರೆ, ಭಾರತ ಒಕ್ಕೂಟದ ಒಟ್ಟು ಹೆರುವಣಿಕೆ ದರ 2.34 ಆಗಿದೆ.  ಭಾರತೀಯ ಒಕ್ಕೂಟದ 6 ರಾಜ್ಯಗಳು ಮಾತ್ರ ಒಟ್ಟು ಹೆರುವಣಿಕೆ ದರವನ್ನು 2.34 ಕ್ಕಿಂತ ಹೆಚ್ಚು ಹೊಂದಿವೆ. ಅವು -ಛತ್ತೀಸ್ ಘಡ್, ಜಾರ್ಖಂಡ್, ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ. (BIMARU States)            ನಿಮ್ಮ ಸಮಸ್ಯೆಗಳನ್ನು ಸಾಮಾನ್ಯೀಕರಿಸಲು "ಭಾರತದ ಕಲ್ಪನೆಯನ್ನು" ಬಳಸಬೇಡಿ ಮತ್ತು ನಾವು ಮಸೂದೆಯನ್ನು ಒಪ್ಪಿಕೊಳ್ಳುತ್ತೇವೆ ಎಂದು ನಿರೀಕ್ಷಿಸ ಬೇಡಿ....

ಕಪ್ಪೆ, ಬಿಸಿನೀರಿನ ಪಾತ್ರೆ ಮತ್ತು ಕನ್ನಡಿಗರು! ಏನಿದು ಅಂತಿರಾ! ಮುಂದೆ ಓದಿ!

ಇಮೇಜ್
ಏನಿದು ಕಪ್ಪೆ ಮತ್ತು ಕನ್ನಡಿಗರ ಕಥೆ ಅನ್ಕೊತಿದೀರಾ ಹಾಗಾದ್ರೆ ಮುಂದೆ ಓದಿ...... ಕಪ್ಪೆ ಮತ್ತು ಬಿಸಿನೀರಿನ ಪಾತ್ರೆಯ ಕತೆ ನೀವು ಕೇಳಿರುತ್ತೀರಿ. ಬಿಸಿ ನೀರಿನ ಪಾತ್ರೆಗೆ ಕಪ್ಪೆಯನ್ನು ಹಾಕಿದರೆ ಅದು ಕೂಡಲೇ ಅಲ್ಲಿಂದ ಹೊರಕ್ಕೆ ಹಾರುತ್ತದೆ, ಆದರೆ ತಣ್ಣನೆಯ ನೀರಿನ ಪಾತ್ರೆಗೆ ಕಪ್ಪೆಯೊಂದನ್ನು ಹಾಕಿ, ಆ ಪಾತ್ರೆಯನ್ನು ಮೆಲ್ಲಗೆ ಬಿಸಿ ಮಾಡಲು ಶುರು ಮಾಡಿದರೆ ಕಪ್ಪೆ ಏನೂ ಮಾಡದೇ ಕೊನೆಯಲ್ಲಿ ನೀರು ಚೆನ್ನಾಗಿ ಬಿಸಿಯಾದಾಗಲೂ ಹೊರಕ್ಕೆ ಹಾರಲಾಗದೇ ಅದರಲ್ಲೇ ಪ್ರಾಣ ಬಿಡುತ್ತೆ. ಕನ್ನಡಿಗರ ಸ್ಥಿತಿಯೂ ಒಂದು ರೀತಿಯಲ್ಲಿ ಹೀಗೆಯೇ ಇದೆ ಇವತ್ತು. ಧರ್ಮ, ಜಾತಿಯ ಕಲಹದಲ್ಲಿ ಕಳೆದುಹೋಗಿರುವ ಕನ್ನಡಿಗರಿಗೆ ಪಾತ್ರೆ ಮೆಲ್ಲಗೆ ಬಿಸಿಯಾಗುತ್ತಿರುವುದರ ಬಗ್ಗೆ ಯಾವುದೇ ಅರಿವೂ ಇಲ್ಲ, ಚಿಂತೆಯೂ ಇಲ್ಲ ಅನ್ನುವಂತೆ ಇದ್ದಾರೆ. ಇಂದು ಕರ್ನಾಟಕದ ಹಳ್ಳಿ ಹಳ್ಳಿಯಲ್ಲಿನ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗವೂ ಇಲ್ಲ, ಕನ್ನಡದಲ್ಲಿ ಸೇವೆಯೂ ಇಲ್ಲ ಅನ್ನುವ ಸ್ಥಿತಿ ಬಂದಿದೆ, ನೀಟ್ ತರದ ಪರೀಕ್ಷೆಯ ಮೂಲಕ ಸಣ್ಣಪುಟ್ಟ ಊರುಗಳ, ಹಳ್ಳಿಗಾಡಿನ, ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳ ವೈದ್ಯರಾಗುವ ಕನಸಿಗೆ ಶಾಶ್ವತ ತಡೆಬಿದ್ದಿದೆ, ಜಿ.ಎಸ್.ಟಿ ತರದ ಕಾಯ್ದೆಯ ಮೂಲಕ ರಾಜ್ಯ ಸರ್ಕಾರಕ್ಕಿದ್ದ ತೆರಿಗೆ ವಿಧಿಸುವ ಹಕ್ಕುಗಳಲ್ಲಿ ಬಹುತೇಕ ಮೊಟಕಾಗಿದೆ, ಮಹದಾಯಿ ತರದ ವಿಚಾರದಲ್ಲಿ ಪುಟ್ಟ ರಾಜ್ಯ ಗೋವಾವನ್ನು ಒಲಿಸಿಯೋ, ಮಣಿಸಿಯೋ ಕುಡಿಯುವ ನೀರು ತರಲಾಗದ ಹೀನಾಯ ಸ್ಥ...

ನಮ್ಮ ನಾಡಿನ ತುಳು ನುಡಿಯ ಲಿಪಿ ಮತ್ತು ತಿಗಳಾರಿ ಲಿಪಿಯ ಬಗ್ಗೆ ತಿಳಿಯಬೇಕಿರುವ ಮಾಹಿತಿ

ಇಮೇಜ್
ತುಳು ಲಿಪಿ   ಕರ್ನಾಟಕದ ಪಶ್ಚಿಮ ಕರಾವಳಿಯ ದಕ್ಷಿಣಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡಿನ ವರೆಗೆ ಇರುವ ಪ್ರದೇಶದಲ್ಲಿ ತುಳುವರು ವಾಸಿಸುತ್ತಾರೆ . ತುಳು ಭಾಷೆಯಲ್ಲಿ ಮೊದಲು ಸಿಕ್ಕಿರುವ ತುಳು ವರ್ಣಮಾಲೆ ಕೃತಿಯು ಕ್ರಿ . ಶ . ಸು . ೧೬೩೦ರಲ್ಲಿ ಬರೆದ ' ಶ್ರೀ ಭಾಗವತೋ ' ಗ್ರಂಥವಾಗಿದೆ . ಇದನ್ನು ಬರೆದವನು ವಿಷ್ಣುತುಂಗ ಎಂಬುವವನು . ಸಾಮಾನ್ಯವಾಗಿ ಈ ಪ್ರದೇಶದಲ್ಲಿ ರಚಿತವಾಗಿರುವ ಕೃತಿಗಳ ಭಾಷೆ ಯಾವುದಾದರೂ ಲಿಪಿ ಸಾಮಾನ್ಯವಾಗಿ ಕನ್ನಡ ಅಥವಾ ತಿಗಳಾರಿ ಬಳಕೆಯಾಗಿದೆ . ಆದರೆ ವಿಮತುಂಗನು ಬರೆದಿರುವ ಭಾಗವತದ ಹಸ್ತಪ್ರತಿ ತುಳು ಭಾಷೆ ಮತ್ತು ಲಿಪಿಯಲ್ಲಿದೆಯೆಂದು ಹಾಗೂ ಈ ಕೃತಿಯನ್ನು ಪ್ರತಿ ಮಾಡಿದ ಕಾಲ ಕ್ರಿ . ಶ . ೧೮೭೦ ಇರಬಹುದೆಂದು ಕೃತಿಯ ಸಂಪಾದಕರು ಊಹಿಸಿರುತ್ತಾರೆ . ಲೇಖಕರು ಈ ಲಿಪಿಯನ್ನು ತುಳು ಲಿಪಿ ಎಂದು ಕರೆದಿದ್ದರೂ ಈ ಲಿಪಿಯು ತಮಿಳುನಾಡಿನಲ್ಲಿ ಬಳಕೆಯಲ್ಲಿದ್ದ ಗ್ರಂಥಲಿಪಿಯ ಇನ್ನೊಂದು ರೂಪವಾದ ಆರ್ಯಎಳುತ್ತು ' ಲಿಪಿಯು ಅಲ್ಪ ಸ್ವಲ್ಪ ಬದಲಾವಣೆಯೇ ಆಗಿದೆ . ಕ್ರಿ . ಶ . ೧೩೮೯ರಲ್ಲಿ ಬರೆದ ದೂತವಾಕ್ಯವೇ ಆರಎಳುತ್ತಿನ ಪ್ರಾಚೀನ ತಾಳೆಗರಿ ಗ್ರಂಥ . ಮುಂದೆ ಕ್ರಿ . ಶ . ೧೬೭೮ ರಿಂದ ೧೭೦೩ರ ಮಧ್ಯ ಹಾಲೆಂಡ್‌ನಲ್ಲಿ ಆರ್ಯ ಎತ್ತಿನಲ್ಲಿ ಪುಸ್ತಕವನ್ನು ಮುದ್ರಿಸಲಾಯಿತು . ಮುಂದೆ ಕೇರಳದಲ್ಲಿ ೧೯ನೆಯ ಶತಮಾನದಲ್ಲಿ ಸಾರ್ವತ್ರಿಕವಾಗಿ ಈ ಲಿಪಿಯ ಬಳಕೆಯಾಗಿ ಉಳಿದ ಲಿಪಿಗಳನ್ನು ಬಿಡಲಾಯಿತು . ಕೇ...

ಕುಡಿತವನ್ನು ನಮಗೆ ಅರಿವಿಲ್ಲದೆ "ಪರವಾಗಿಲ್ಲ ಬಿಡಿ, ಈಗೆಲ್ಲ ನಡಿಯುತ್ತೆ" ಅನ್ನಿಸುವಂತೆ ಮಾಡುವ ಕನ್ನಡ ಸಿನಿಮಾ ಹಾಡುಗಳು

ಇಮೇಜ್
ಕನ್ನಡ ಸಿನೆಮಾಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕುಡಿತವನ್ನು ನಾರ್ಮಲೈಸ್ ಮಾಡುವ ಎಷ್ಟೊಂದು ಹಾಡುಗಳು ಬರುತ್ತಿವೆ.  ಕೆಲವು ಜನಪ್ರಿಯ ಹಾಡುಗಳು: ೧> ಎಣ್ಣೆ ನಮ್ಮದು ಊಟ ನಿಮ್ಮದು ೨> ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ಎಣ್ಣೆ ಹೊಡೆದವು ಉಳಿತಾವ ೩> ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು ೪> ನಾವು ಮನೆಗೆ ಹೋಗೊದಿಲ್ಲ. ೫> ಒಪನ್ ದಿ ಬಾಟಲ್ ೬> ಎಣ್ಣೆನೂ ಸೋಡಾನೂ ಎಂತಹ ಒಳ್ಳೆ ಫ್ರೆಂಡು ಯುಟ್ಯೂಬ್ ಅಲ್ಲಿ ಈ ಎಲ್ಲ ಹಾಡುಗಳಿಗೂ ಲಕ್ಷಗಟ್ಟಲೇ ನೋಟಗಳಿವೆ. ಚಿಕ್ಕ ಚಿಕ್ಕ ಮಕ್ಕಳಿಗೂ ಈ ಹಾಡುಗಳು ಪರಿಚಿತವಾಗಿವೆ. ಆದರೆ ಆಳದಲ್ಲಿ ಇವೆಲ್ಲವೂ ಕುಡಿಯುವುದು very desirable, very normal ಅನ್ನುವ ಸಂದೇಶವನ್ನು ಬಹಳ subtle ಆಗಿ ತುಂಬುತ್ತಿವೆ ಅಂತ ನನಗೆ ಅನ್ನಿಸುತ್ತೆ. ಕುಡಿತ ನಿಷೇಧಿಸಬೇಕು ಅನ್ನುವ ನಿಲುವು ನನ್ನದಲ್ಲ. ಅದನ್ನು ಮಾಡಿದ ತಕ್ಷಣ ಅದು ಕಳ್ಳಭಟ್ಟಿ ಮಾಡುವುದಕ್ಕೂ, ಹೊರ ರಾಜ್ಯಗಳಿಂದ ಕದ್ದು ಮಾರಾಟಕ್ಕೂ,  ಕಳ್ಳಭಟ್ಟಿಯ ದುರಂತಗಳಿಗೂ ಕಾರಣವಾಗುತ್ತೆ. ಸರ್ಕಾರಕ್ಕೆ ಅಬಕಾರಿಯಿಂದ ಬರುವ ಹದಿನೆಂಟು ಸಾವಿರ ಕೋಟಿ ಆದಾಯಕ್ಕೂ ಹೊಡೆತ ಬೀಳುತ್ತೆ. ರಾಜ್ಯ ಸರ್ಕಾರದ ಕೈಯಲ್ಲಿ ತನ್ನದೇ ಆದಾಯಕ್ಕೆ ಅಂತ ಇರುವ ಮೂಲಗಳೇ ಕಡಿಮೆ, ಇರುವ ಕೆಲವು ಮೂಲಗಳು ಜಿ.ಎಸ್.ಟಿ ಹೆಸರಲ್ಲಿ ಕಿತ್ತುಕೊಳ್ಳಲಾಗಿದೆ.  ಅದರಲ್ಲಿ ಅಬಕಾರಿಯ ಆದಾಯವೂ ಹೊರಟರೆ ಸರ್ಕಾರ ನಡೆಸುವುದೇ ಕಷ್ಟವಾಗುತ್ತೆ. ಕುಡಿತ...

ದೇಶಕ್ಕೊಂದು ಭಾಷೆ ಬೇಕು ಮತ್ತದು ಹಿಂದಿಯೇ ಆಗಬೇಕು ಅಂತೆಲ್ಲ ಹಾರಡುವ ಮೂರ್ಖ ಮಠ್ಠಾಳರಿಗೆ ಕಿವಿ ಮಾತು!

ಇಮೇಜ್
"ಭಾರತದ ನಾಗರೀಕತೆ ಐದು ಸಾವಿರ ವರ್ಷ ಹಳೆಯದಾದದ್ದು ಅಂತ ಅಂದಾಗ ಆ ಐದು ಸಾವಿರ ವರ್ಷಗಳ ಕಾಲವೂ ಅದು ಯಾವುದೇ ಲಿಂಕ್ ಲ್ಯಾಂಗ್ವೇಜ್ ಇರದೇ, ಯಾವುದೋ ಒಂದು ಭಾಷೆಯ ಮೂಲಕ ಬೆಳೆದು ಬಂದ ನಾಗರೀಕತೆ ಅಲ್ಲ ಅನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಇಷ್ಟು ನೆನಪಿಟ್ಟುಕೊಂಡರೆ ದೇಶಕ್ಕೊಂದು ಭಾಷೆ ಬೇಕು ಮತ್ತದು ಹಿಂದಿಯೇ ಆಗಬೇಕು ಅಂತೆಲ್ಲ ಹೊರಡುವುದು ಮೂರ್ಖತನ ಅಂತ ಅರ್ಥ ಆಗಬಹುದು. ದೇಶಕ್ಕೊಂದು ಭಾಷೆ ಬೇಕು ಅಂತಲೇ ಆದರೆ ಅದು ಎಲ್ಲ ಭಾಷಿಕರಿಗೂ ಸಮಾನ ದೂರವಿರುವ, ಸಮಾನ ಅನುಕೂಲ ಮತ್ತು ಅನಾನುಕೂಲ ಕಲ್ಪಿಸುವ ಭಾಷೆಯೇ ಆಗಬೇಕು. ಆಗ ಮಾತ್ರ ಯಾವುದೋ ಒಂದು ಭಾಷಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿ ಉಳಿದವರಿಗೆ ಅನ್ಯಾಯ ಮಾಡುವಂತಹ ಆಡಳಿತ, ಉದ್ಯೋಗ ಮತ್ತು ಕಲಿಕೆಯ ವ್ಯವಸ್ಥೆ ಏರ್ಪಡುವುದಿಲ್ಲ. ಇವತ್ತಿನ ದಿನ ಅಂತಹ ಯೋಗ್ಯತೆ ಯಾರು ಒಪ್ಪಲಿ, ಬಿಡಲಿ ಇಂಗ್ಲಿಷೇ ಪಡೆದುಕೊಳ್ಳುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಾ ಅಂತ ಕೇಳಿದರೆ ಇಲ್ಲ ಅಂತಲೇ ನನ್ನ ಉತ್ತರ. ಇಂಗ್ಲಿಷ್ ಪಡೆಯುವ ಸ್ಥಾನವನ್ನು ಭಾರತದ ಭಾಷೆಗಳು ಪಡೆದುಕೊಳ್ಳುವಂತಹ ಬೆಳವಣಿಗೆ ಆಗಬೇಕು, ಆದರೆ ಅದಕ್ಕೆ ಬೇಕಾದ ಕೆಲಸವನ್ನು ಮಾಡದೇ ಬರೀ ಹಾರೈಸುವುದರಿಂದ ಅದು ಸಾಧ್ಯವಾಗದು. https://m.facebook.com/story.php?story_fbid=2311953505564363&id=1313513028741754 ಎಲ್ಲ ಭಾರತದ ಭಾಷೆಗಳಿಗೂ ಕೇಂದ್ರದ ಅಧಿಕೃತ ಭಾಷೆಯ ಸ್ಥಾನಮಾನ ಕೊಟ್ಟು, ಆಯಾ ರಾಜ್ಯದಲ್ಲಿ ಜನರಿಗಾಗ...

ಭಾರತವೆಂದರೆ ಹಿಂದಿ , ಇಂಗ್ಲಿಶ್ ಎರಡೇ ಅಲ್ಲ : ಭಾಷಾ ನೀತಿ ಬದಲಾಗಲಿ

ಇಮೇಜ್
ಭಾ ರತಕ್ಕೆ ಬ್ರಿಟಿಷರಿಂದ ಬಿಡುಗಡೆ ಸಿಕ್ಕಿದ ಹೊತ್ತಿನಲ್ಲಿ ಮತ್ತು ತದನಂತರವೂ ಅತ್ಯಂತ ಕಾವಿನ ಚರ್ಚೆಗೊಳಗಾದ ವಿಷಯ ಭಾರತದಂತಹ ಹಲನುಡಿಗಳ ಒಕ್ಕೂಟಕ್ಕೆ ಎಂತಹ ಭಾಷಾನೀತಿ ಇರಬೇಕು ಎಂಬುದು . ಇಷ್ಟೊಂದು ವೈವಿಧ್ಯತೆ ಇರುವ ಈ ದೇಶಕ್ಕೆ ಒಂದು ಸಾಮಾನ್ಯ ನುಡಿ ಬೇಕು ಮತ್ತದು ದಾಸ್ಯದ ಸಂಕೇತವಾದ ಇಂಗ್ಲಿಶ್ ಆಗಿರಬಾರದು ಅನ್ನುವ ನಿಲುವಿನಿಂದಾಗಿ ಇಂಗ್ಲಿಶ್ ಮತ್ತು ದೇಶದ ಇತರೆಲ್ಲ ಭಾಷೆಗಳನ್ನು ಕೈಬಿಟ್ಟು ಕೇವಲ ಹಿಂದಿಗೆ ಮನ್ನಣೆ ನೀಡುವ ಪ್ರಯತ್ನ 60ರ ದಶಕದಲ್ಲಿ ನಡೆಯಿತು . ಇದರಿಂದ ಆಡಳಿತ , ಉದ್ಯೋಗ , ಕಲಿಕೆಯ ಅವಕಾಶಗಳಲ್ಲಿ ಹಿಂದಿ ಭಾಷಿಕರಿಗೆ ಹೆಚ್ಚಿನ ಅನುಕೂಲ ದೊರೆತು ಇತರರು ವಂಚಿತರಾಗುವ ಸಂದರ್ಭ ಕಾಣಿಸಿದಾಗ ದೊಡ್ಡ ಮಟ್ಟದಲ್ಲಿ ಹಿಂದಿಯೇತರ ಭಾಷಿಕರ ವಿರೋಧದಿಂದಾಗಿ ಇಂಗ್ಲಿಶ್ ಅನ್ನು ಹಿಂದಿಯ ಜೊತೆ ಇರಿಸಿಕೊಂಡ ನೀತಿ ಕೇಂದ್ರ ಸರ್ಕಾರದ ಅಧಿಕೃತ ಭಾಷಾ ನೀತಿಯಾಯಿತು . ಆದರೆ ಈ ನೀತಿ ನಿಜಕ್ಕೂ ಪ್ರಜಾಪ್ರಭುತ್ವದ ಪರವಾಗಿದೆಯೇ ? ವ್ಯವಸ್ಥೆಗೂ ಜನರಿಗೂ ಇರುವ ಅಂತರವನ್ನು ಕಡಿಮೆ ಮಾಡುವುದೇ ಪ್ರಜಾಪ್ರಭುತ್ವದ ಗೆಲುವಿಗೆ ಇರುವ ಹಾದಿ ಅಂತಾದರೆ ಈಗಿರುವ ಭಾಷಾನೀತಿ ಆ ಕೆಲಸ ಮಾಡಲಾಗುವಂತದ್ದೇ ಎಂದು ಗಮನಿಸಿದಾಗ ಭಾರತದ ಭಾಷಾ ನೀತಿ ಬದಲಾಗಬೇಕಾದ ಅಗತ್ಯ ಮನವರಿಕೆಯಾಗುತ್ತದೆ . - - : : . : ಕೇಂದಕ್ಕೆ ಇಂಗ್ಲಿಶ್ , ಹಿಂದಿ ಸಾಕಾಗಲ್ವಾ ? ಆಯಾ ರಾಜ್ಯಗಳಿಗೆ ಅವರ ಭಾಷೆಯಲ್ಲಿ ಆಡಳಿತದ ಅವಕಾಶವಿದೆ ಹಾಗೆ ಕೇಂದ್ರ ಇಂಗ್ಲಿಶ್ , ಹಿಂದಿಯಲ್ಲಿ...

ರಾಜಕೀಯ ಪ್ರೇರಿತ ಐಟಿ ದಾಳಿ ಅಂದ್ರೇನು? ಚುನಾವಣೆಗೆ ಮುನ್ನ ಈ ಐಟಿ ದಾಳಿಗಳು ಹೇಗೆ ಮತದಾರರನ್ನು ಪ್ರಭಾವಿಸಬಹುದು? ಮುಂದೆ ಓದಿ

ಇಮೇಜ್
ರಾಜಕೀಯ ಪ್ರೇರಿತ ಐಟಿ ದಾಳಿ ಅಂದ್ರೇನು? ಅವರು ಮೂರು ತಿಂಗಳು ಮಾಹಿತಿ ಸಂಗ್ರಹಿಸಿ ದಾಳಿ ಮಾಡ್ತಾರೆ.. ಅಷ್ಟಕ್ಕೂ ನೀವು ಪ್ರಾಮಾಣಿಕ ವ್ಯಕ್ತಿಯಾದರೆ ಯಾಕೆ ಭಯ ಪಡಬೇಕು? ಅಂತೆಲ್ಲಾ ಪ್ರಶ್ನೆ ಎತ್ತುತ್ತಿದ್ದಾರೆ.. ಜನ ಸಾಮಾನ್ಯರಿಗೆ ಹೌದಲ್ವಾ ಅನ್ನಿಸೋದು ಸಹಜ.. ವಾಸ್ತವ ಏನೆಂದರೆ... ಜನಸಾಮಾನ್ಯರಲ್ಲಿ ಯಾರದ್ದೇ ಮನೆಗೆ ಐಟಿ ದಾಳಿ ನಡೆದಿದೆ ಎಂದೊಡನೆ ಅಂತಹ ವ್ಯಕ್ತಿಯ ಬಗ್ಗೆ "ಅವನು ಕಳ್ಳ" ಅನ್ನುವ ಭಾವನೆ ಹುಟ್ಟಿಕೊಳ್ಳುತ್ತದೆ.. ಇದು ಮತದಾರನ ಮನಸ್ಸಿನ ಮೇಲೆ ಆಗುವ ಅತಿದೊಡ್ಡ ಪರಿಣಾಮ.. ಇದಕ್ಕೆ ನೀರು ಎರೆಯುವಂತೆ ಸುವರ್ಣ ನ್ಯೂಸ್ ತರಹದ ವಾಹಿನಿಗಳು ಒಂದಷ್ಟು ದುಡ್ಡಿನ ಬಂಡಲ್ ವೀಡಿಯೋ ತೋರಿಸಿ, ಇದು ಐಟಿ ದಾಳಿಯಲ್ಲಿ ವಶಪಡಿಸಿಕೊಂಡ ಹಣ ಅಂತಾ ಸುಳ್ಳು ಪ್ರಚಾರ ಮಾಡುತ್ತವೆ. ಯಾವ ಐಟಿ ದಾಳಿಯಲ್ಲೂ ಹೀಗೆ ಮಾಧ್ಯಮಗಳಿಗೆ ವಶಪಡಿಸಿಕೊಂಡ ಸ್ವತ್ತನ್ನು ಪ್ರದರ್ಶನ ಮಾಡುವ ಹಾಗಿಲ್ಲ.. ಮತ್ತು ಅಧಿಕಾರಿಗಳು ಹಾಗೆ ಮಾಡುವುದೂ ಇಲ್ಲ.. ಆದರೆ ಮತದಾರರ ಮನಸ್ಸಿನ ಮೇಲೆ ಈ ಅಭ್ಯರ್ಥಿ ಕಳ್ಳ ಎನ್ನುವ ಅಭಿಪ್ರಾಯವನ್ನು ಢಾಳಾಗಿ ಮೂಡಿಸಲಾಗುತ್ತದೆ. ಇನ್ನು ಆಗುವ ತೊಂದರೆ ಏನೆಂದರೆ ದಾಳಿಗೆ ಒಳಗಾದವರು ವಿವರಣೆ ಕೊಡಬೇಕಾದ ಕಾರಣಕ್ಕಾಗಿ ಐಟಿ ಇಲಾಖೆಗೆ ಅಲೆದಾಡಬೇಕಾಗುತ್ತದೆ.. ಹಾಗಾಗಿ ಮಾನಸಿಕ ಒತ್ತಡ ಮತ್ತು ಓಡಾಟದ ಕಾರಣದಿಂದ ಕ್ಷೇತ್ರದಲ್ಲಿ ಪ್ರಚಾರದ ಕೆಲಸಕ್ಕೆ ಗಮನ ಕೊಡಲು ಆಗಲ್ಲ.. ಇದೇ ಐಟಿ ದಾಳಿ ಮಾಡಿಸುವವರ ಉದ್ದೇಶ.. ...

ಈ ಚುನಾವಣೆ ಸೈದ್ಧಾಂತಿಕ ಚುನಾವಣೆ. ಈ ಚುನಾವಣೆಯಲ್ಲಿ ನಿಲುವು ತೆಗೆದುಕೊಳ್ಳದಿದ್ದರೆ ಮುಂದೆ ಹೋರಾಡಲು ಕನ್ನಡವೂ ಇರುವುದಿಲ್ಲ, ಕರ್ನಾಟಕವೂ ಇರುವುದಿಲ್ಲ.

ಇಮೇಜ್
ಈ ಚುನಾವಣೆ ಸೈದ್ಧಾಂತಿಕ ಚುನಾವಣೆ. ಈ ಚುನಾವಣೆಯಲ್ಲಿ ನಿಲುವು ತೆಗೆದುಕೊಳ್ಳದಿದ್ದರೆ ಮುಂದೆ ಹೋರಾಡಲು ಕನ್ನಡವೂ ಇರುವುದಿಲ್ಲ, ಕರ್ನಾಟಕವೂ ಇರುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲೇ ನಂಬಿಕೆ ಇಲ್ಲದ, ಭಾಷಾವಾರು ಪ್ರಾಂತ್ಯಗಳ ಬಗ್ಗೆ ನಂಬಿಕೆ ಇಲ್ಲದ, ಹಿಂದಿ ಹಾಗು ಸಂಸ್ಕೃತದ ಮೇಲರಿಮೆ ಕನ್ನಡವೆಂದರೆ ಕೀಳು ಎಂಬ ಮೌಢ್ಯ ತುಂಬಿರುವ ಒಂದು ಸಿದ್ಧಾಂತವಿರುವ ಪಕ್ಷಕ್ಕೆ ಮತ್ತೊಮ್ಮೆ ಬಹುಮತ ಬಂದರೆ ಮುಗಿಯಿತು. ಇವತ್ತಿನ ಸ್ವರೂಪದ ಕರ್ನಾಟಕವೂ ಇರುವುದಿಲ್ಲ, ಕನ್ನಡವಂತೂ ಅಡುಗೆ ಮನೆ ಭಾಷೆಯಾಗಿ ಹಿಂದಿ ಸಂಸ್ಕೃತಗಳ ಅಡಿಯಾಳಾಗಿ ಉಳಿಯುವುದು ಖಂಡಿತ. ಅದಕ್ಕೆ ಈ ಚುನಾವಣೆಯ ಸಂದರ್ಭದಲ್ಲಿ ನಾನು ಬಹಳ ಸ್ಪಷ್ಟವಾಗಿ ರಾಜಕೀಯ ನಿಲುವುಗಳನ್ನ ವ್ಯಕ್ತಪಡಿಸುತ್ತಿರುವುದು. ನಮ್ಮ ಮೆಟ್ರೋ ಹಿಂದಿ ಬೇಡ ಹೋರಾಟದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕನ್ನಡದ ಸಾರ್ವಭೌಮತ್ವದ ಅವಶ್ಯಕತೆಯನ್ನೇ ಪ್ರಶ್ನೆ ಮಾಡಿದ ವ್ಯಕ್ತಿ ತೇಜಸ್ವಿ ಸೂರ್ಯ. ಕನ್ನಡದಷ್ಟೇ ಸ್ಥಾನ ಹಿಂದಿಗೂ ಕೊಡಿ ಬೆಂಗಳೂರಿನಲ್ಲಿ ಎಂದು ಪ್ರತಿಪಾದನೆ ಮಾಡಿದ ವ್ಯಕ್ತಿ ಇವನು. ಕನ್ನಡಕ್ಕೆ ಕನ್ನಡಿಗರಿಗೆ ಇದರಿಂದಾಗುವ ತೊಂದರೆಗಳ ಬಗ್ಗೆ ಅರಿವು ಇಲ್ಲದವ ನಿಮ್ಮ ಬಾಗಿಲಿಗೆ ವೋಟ್ ಕೇಳಲು ಬರಲಿದ್ದಾನೆ. ಬಿಡಬೇಡಿ ಪ್ರಶ್ನೆ ಮಾಡಿ. ನಾನು ಕನ್ನಡಿಗ ಹಾಗಾಗಿ ಭಾರತೀಯ, ಕರ್ನಾಟಕದಿಂದ ಭಾರತ ಎಂದು ನಂಬಿರುವ ಲಕ್ಷಾಂತರ ಕನ್ನಡಿಗರ ಆಶಯ ಕನ್ನಡ ಬಾವುಟವಾಗಿತ್ತು. ಕನ್ನಡಿಗರ ಕನ್ನಡದ ಐಡೆಂಟಿಟಿ ಬ...

ತಮಿಳಿನ 'ವಿಶ್ವಾಸಂ'ನ ಕನ್ನಡ ಅವತರಣಿಕೆ 'ಜಗಮಲ್ಲ' ಚಿತ್ರದ 'ಓ ನನ್ನ ಕಣ್ಣೇ' ಹಾಡು ಮೂಡಿಬಂದದ್ದು ಹೀಗೇ.....

ಇಮೇಜ್
ಓ ನನ್ನ ಕಣ್ಣೇ... ಮೂಲ ತಮಿಳಿನ ಹಾಡು ಹೊರಬಂದು, ಅದು ಸಾಕಷ್ಟು    ಮಂದಿಮೆಚ್ಚುಗೆ ಗಳಿಸುತ್ತಿತ್ತು. ಇದನ್ನು ಕನ್ನಡದಲ್ಲಿ ಡಬ್ ಮಾಡುವ ಹೊಣೆಗಾರಿಕೆ ನಮ್ಮ ಮೇಲಿತ್ತು. ಮುದ್ದಾದ, ಚೆಂದದ, ಆಳವಾದ  ಪದಗಳನ್ನು ಪೋಣಿಸುವ ಜವಾಬ್ದಾರಿಯನ್ನು ಹೃದಯ ಶಿವ ಅವರ ಹೆಗಲ ಮೇಲಿತ್ತು. ಹಾಡಿನ ಸಾಲುಗಳು ಚೆನ್ನಾಗಿ ಮೂಡಿಬರುತ್ತವೆ ಎಂಬುದರ ಮೇಲೆ ನನಗೆ ಯಾವ ಅನುಮಾನ ಇರಲಿಲ್ಲ. ಆದರೆ ಗೊಂದಲ ಇದ್ದದ್ದು ಯಾರಿಂದ ಹಾಡಿಸುವುದು ಎಂದು. ಹಲವಾರು ಹೆಸರುಗಳು ತಲೆಗೆ ಬಂದು ಹೋದವು. ಹುಡುಕಾಟ ಶುರುವಾಗಿತ್ತು. ಸಿನೆಮಾದ ಗೆಳೆಯರು ಹರಿಹರನ್, ಸಿದ್ ಶ್ರಿರಾಮ್, ಸೊನು ನಿಗಮ್ ಎಂದು ದೊಡ್ಡ ಪಟ್ಟಿಯನ್ನೇ ಕಣ್ಣೆದುರಿಗೆ ಇಟ್ಟರು. ಆದರೆ ಭೀಮಸೇನ್ ಜೋಶಿ ಸಂಗೀತ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದ ಸಿದ್ಧಾರ್ಥ್ ಬೆಳ್ಮಣ್ಣು ಅವರ ವೀಡಿಯೋ ಒಂದು ಯೂಟ್ಯೂಬಿನಲ್ಲಿ ನನ್ನ ಕಣ್ಣಿಗೆ ಬಿದ್ದಿತ್ತು.  ಜಗಮಲ್ಲ ಚಿತ್ರದ ಓ ನನ್ನ ಕಣ್ಣೇ ಹಾಡು ಅದ್ಯಾಕೋ ಈ ದನಿಯನ್ನೇ ಓ ನನ್ನ ಕಣ್ಣೇ ಹಾಡಿಗೆ ಬೇಕೆನಿಸಿತು. ಅದೇ ಯೋಚನೆಯಲ್ಲಿದ್ದಾಗ ತಂಡದ ಗೆಳೆಯರೂ ಆ ಹೆಸರು ಸೂಚಿಸಿದರು, ಟಗರು, ಪುಷ್ಪಕ‌ವಿಮಾನದ ಹಾಡುಗಳನ್ನು ನೆನಪಿಸಿದರು. ಅಲ್ಲಿಗೆ ನನ್ನ ತೀರ್ಮಾನವನ್ನು ಗಟ್ಟಿಮಾಡಿಕೊಂಡೆ.  ಹಾಡನ್ನು ಹಾಡಿಸಲು ಇನ್ನು ಒಂದು‌ ಗಂಟೆ ಇದೇ ಅನ್ನುವವರೆಗೂ ಸಿದ್ಧಾರ್ಥ್ ಬಂದು ಎರಡು ಸಾಲು ಹಾಡುವವರೆಗೂ ನನಗೆ ಕೊಂಚ ದಿಗಿಲಿತ್ತು....

ಯಾವನೋ ಬಾಲಿವುಡ್ ನಟನನ್ನು ಕೆಜಿಎಫ್ ಎರಡನೇ ಅಧ್ಯಾಯಕ್ಕೆ ಹಾಕಿಕೊಳ್ಳೊ ಅವಶ್ಯಕತೆ ಇತ್ತಾ?

ಇಮೇಜ್
ಯಾವನೋ ಬಾಲಿವುಡ್ ನಟನನ್ನು ಎರಡನೇ ಅಧ್ಯಾಯಕ್ಕೆ ಹಾಕಿಕೊಳ್ಳೊ ಅವಶ್ಯಕತೆ ಇತ್ತಾ? ಕೇವಲ ಕನ್ನಡನಟರೇ ಅಭಿನಯಿಸಿದ ಕೆಜಿಎಫ್ ಚಿತ್ರ ವಿಶ್ವಾದ್ಯಂತ ಹೆಸರು ದುಡ್ಡು ಎರಡು ಮಾಡಿತ್ತು! ಕೆಜಿಎಫ್ ೨ನೇ ಅಧ್ಯಾಯಕ್ಕೆ ಬೇಕಾಗೋ ಗಟ್ಟಿ ಅಡಿಪಾಯ ಕೆಜಿಎಫ್ ೧ನೇ ಅಧ್ಯಾಯ ಭದ್ರವಾಗೇ ಹಾಕಿದೆ! ಅದು ಅಲ್ಲದೇ ೧ನೇ ಅಧ್ಯಾಯ ಯಾವುದೇ ಬಾಲಿವುಡ್ ನಟನ ಮುಲಾಜಿಲ್ಲದೇನೆ ಉತ್ತರ ಭಾರತೀಯರನ್ನು ರಂಜಿಸಿದೆ ಹಾಗೂ ಮೆಚ್ಚಿಸಿದೇ ಕೂಡ! ಹೀಗಿದ್ದಾಗ ಯಾವನೋ ಬಾಲಿವುಡ್ ನಟನನ್ನು ಎರಡನೇ ಅಧ್ಯಾಯಕ್ಕೆ ಹಾಕಿಕೊಳ್ಳೊ ಅವಶ್ಯಕತೆ ಇತ್ತಾ? ಪ್ರಶಾಂತ ನೀಲ್‌ಗೆ ಇರೋ ಟ್ಯಾಲೆಂಟ್‌ಗೆ! ಕನ್ನಡದಲ್ಲೇ ಸಂಜಯ್ ದತ್ತನನ್ನ ಮೀರಿಸೋ ಕನ್ನಡದ ಹೊಸ ಕಲಾವಿದರನ್ನ ಹುಡುಕೋ ಚಾಣಕ್ಷತೆ ಪ್ರಶಾಂತ್ ನೀಲ್‌ರಿಗಿದೆ! ಭಾರತದ್ಯಾಂತ ಕೆಜಿಎಫ್ ೨ ಸೂಪರ್ ಡೂಪರ್ ಹಿಟ್ ಆಗೋದಂತು ಖಂಡಿತ! ಸುಮ್ಮನೆ ಸಂಜಯ ದತ್ತಗೆ ಸಕ್ಸಸ್ ಕ್ರೆಡಿಟ್ ಕೊಡೊದುಬೇಕಾ? ಸಂಜಯ ದತ್ ೨ನೇ ಅಧ್ಯಾಯದಲ್ಲಿ ನಟಿಸೊದ್ರಿಂದ ಸಂಜಯಗೆ  ಒಂದು ಹೆಸರು ಬರುತ್ತದೇಯೆ ಹೊರತು ಚಿತ್ರಕ್ಕೆ ಆಗಬೇಕಾಗಿರೋದು ಏನು ಇಲ್ಲ! -ಷಡ್ಯಂತ್ರಿ ಶಕುನಿ #ಕನ್ನಡಿಗ

ಕಲಿಕೆಯೆಂದರೆ ಇಂಗ್ಲೀಶ್ ಮಾಧ್ಯಮದ ಕಲಿಕೆ ಎಂಬ ತಪ್ಪುನಂಬಿಕೆ

ಇಮೇಜ್
ಪ್ರತಿಯೊಬ್ಬ ತಂದೆ-ತಾಯಂದಿರೂ ತಮ್ಮ ಮಗುವಿಗೆ ಅತ್ಯತ್ತಮವಾದುದೇ ಸಿಗಲಿ ಎಂದು ಬಯಸುತ್ತಾರೆ. ಕಲಿಕೆಯ ವಿಷಯದಲ್ಲೂ ಹಾಗೆಯೇ, ತಮ್ಮ ಮಗುವಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಸಿಕ್ಕಲಿ ಎಂಬ ಬಯಕೆ ಪ್ರತಿಯೊ...