ಕರ್ನಾಟಕ ದಖನ್ ಪ್ರಸ್ಥಭೂಮಿಯ ಪಶ್ಚಿಮ ಭಾಗದ ಬಹುಭಾಗ ಪ್ರದೇಶವನ್ನೊಳಗೊಂಡಿದೆ . ಇದರ ಉತ್ತರ ಅಕ್ಷಾಂಶ ( North Lattitude ) 11³ 31 ' ( ಹನ್ನೊಂದು ಡಿಗ್ರಿ ಮೂವತ್ತೊಂದು ನಿಮಿಷ ) ದಿಂದ 18 48 ಡಿಗ್ರಿ ಮತ್ತು ಪೂರ್ವ ರೇಖಾಂಶ ( East Longitude ) 74° 12 ' ದಿಂದ 78° 40ನಿಮಿಷ , ಉತ್ತರದಲ್ಲಿ ಮಹಾರಾಷ್ಟ್ರ ಮತ್ತು ಗೋವ , ದಕ್ಷಿಣದಲ್ಲಿ ತಮಿಳುನಾಡು ಮತ್ತು ಕೇರಳ , ಪೂರ್ವದಲ್ಲಿ ಆಂಧ್ರಪ್ರದೇಶ ಮತ್ತು ಪಶ್ಚಿಮದಲ್ಲಿ ಸುಮಾರು 350 ಮೈಲಿಗಳಷ್ಟು , ಅರಬ್ಬಿಸಮುದ್ರ ತೀರಪ್ರದೇಶದಿಂದ ಆವೃತವಾಗಿದೆ . ಸಮುದ್ರಮಟ್ಟಕ್ಕಿಂತ 2000 ಅಡಿಗಳಿಗೂ ಹೆಚ್ಚು ಎತ್ತರವಿದೆ . ( ದಕ್ಷಿಣೋತ್ತರ 480 ಮೈಲಿ , ಪೂರ್ವ - ಪಶ್ಚಿಮ 250 ಮೈಲಿ ಇದೆ ) . ಭಾರತದಲ್ಲಿ ಬೇರಾವ ರಾಜ್ಯವೂ ಇಷ್ಟು ಎತ್ತರದಲ್ಲಿಲ್ಲ . ಇಂದಿನ ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ಸು . 1 , 91 , 757³ ಚದರ ಕಿಲೋಮೀಟರುಗಳು ( ಅಥವಾ 74 , 04 ) ಚದರ ಮೈಲು . ) . ಅಮೋಘವರ್ಷ ನೃಪತುಂಗನ ಕವಿರಾಜಮಾರ್ಗ ಗ್ರಂಥದ ಪ್ರಕಾರ ಪ್ರಾಚೀನ ಕರ್ನಾಟಕ ರಾಜ್ಯದ ಎಲೆ ಅಥವಾ ವಿಸ್ತೀರ್ಣ ಉತ್ತರದಲ್ಲಿ ಗೋದಾವರಿ ನದಿಯಿಂದ ದಕ್ಷಿಣದಲ್ಲಿ ಕಾವೇರಿ ನದಿಯವರೆಗೂ ವಿಸ್ತರಿಸಿದ್ದಿತು . ಕರ್ನಾಟಕದಲ್ಲಿ 2015ರ ಅಂಕಿ - ಅಂಶದ ಪ್ರಕಾರ 30 ಜಿಲ್ಲೆಗಳೂ , 227 ತಾಲ್ಲೂಕೂಗಳೂ 338 ಪಟ್ಟಣಗಳೂ 25880ಹಳ್ಳಿಗಳೂ ಇವೆ . ಪ್ರಾಕೃತಿಕವಾಗಿ ಕರ್ನಾಟಕವನ್ನು ಈ ರೀತಿ ಆರು ಭಾಗಗಳಾಗಿ ವಿಂಗಡ...