ಹತ್ತು ಹಲವು ಪಂಗಡಗಳಲ್ಲಿ ಒಡೆದು ಹೋಗಿರುವ ಕನ್ನಡಿಗರು!!!



ಕನ್ನಡಿಗರನ್ನೆಲ್ಲಾ ಒಂದುಗೂಡಿಸಲು ಕನ್ನಡ ಭಾಷೆ, ಕನ್ನಡತನ, ಕನ್ನಡಾಭಿಮಾನಗಳನ್ನಷ್ಟೇ ಮುಖ್ಯವಾಗಿಟ್ಟುಕೊಂಡು ಕನ್ನಡಿಗ ಅನ್ನೊ ಪೇಜ್ ಸೃಷ್ಟಿಸಿರೊ ನಮಗೆ ಸದಾ ಕಾಡುವ ಒಂದು ಪ್ರಶ್ನೆ ಏನೆಂದರೆ ಈ ಕನ್ನಡಿಗ ಅಂದರೆ ಯಾರು ಅನ್ನೋದು!. ಕರ್ನಾಟಕದಲ್ಲಿ ಕನ್ನಡ ಮಾತನಾಡುವ ಜನರಲ್ಲಿ ಕನ್ನಡಿಗ ಅನ್ನುವ ಪದಕ್ಕೆ ಹಲವು ತೆರೆನಾದ ವ್ಯಾಖ್ಯಾನ ಸಿಗುತ್ತದೆ...ಇವೆಲ್ಲವನ್ನು ಮೀರಿ ನಿಜವಾದ ಕನ್ನಡಿಗನನ್ನು ಹುಡುಕ ಹೊರಟರೆ ನಮಗೆ ಹಲವು ಬಗೆಯ ಕನ್ನಡಿಗರ ದರ್ಶನವಾಗುತ್ತಾ ಹೋಯಿತು...

ರಾಜಕೀಯವಾಗಿ ಒಡೆದಿರುವ ಕನ್ನಡಿಗರು:

ಮೊದಲಿಗೆ ರಾಜಕೀಯ ಹಿತಾಸಕ್ತಿಗಳಿಗಾಗಿ ಒಡೆದು ಹೋದ ಕನ್ನಡಿಗರು ಬಿಜೆಪಿ-ಕನ್ನಡಿಗರು, ಕಾಂಗ್ರೆಸ್ ಕನ್ನಡಿಗರು, ಜೇಡಿಎಸ್ ಕನ್ನಡಿಗರು. ರಾಜಕೀಯ ಸಿದ್ದಾಂತಗಳು, ರಾಜಕೀಯ ನಾಯಕರುಗಳ ಮೇಲಿನ ಅಭಿಮಾನ ಇವುಗಳಿಗೆ ಬಲಿಯಾದ ಕನ್ನಡತನವನ್ನು ಇಲ್ಲಿ ಕಾಣಬಹುದು.....

ಉತ್ತರ - ದಕ್ಷಿಣ ಕನ್ನಡಿಗರು

ಇನ್ನು ಮುಂದುವರಿದರೆ ಬಹಳ ಬಿಸಿ ಬಿಸಿ ಚರ್ಚೆಯಾಗುವ, "ದಕ್ಷಿಣ ಕರ್ನಾಟಕದ ಜಿಲ್ಲೆಗಳನ್ನು  ಅಭಿವೃದ್ದಿ  ಮಾಡಿ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ದ್ರೋಹವೆಸಗಲಾಗಿದೆ" ಎನ್ನುವ ಉತ್ತರ ಕರ್ನಾಟಕದ ಕನ್ನಡಿಗ ಹಾಗು 'ಮಂಡ್ಯ' 'ಮೈಸೂರ'ನ್ನಷ್ಟೆ ಕರ್ನಾಟಕ ಎಂದು ನಂಬಿರುವ ದಕ್ಷಿಣ ಕರ್ನಾಟಕದ ಕನ್ನಡಿಗ‌...

ಸಿನಿಮಾ ಕನ್ನಡಿಗರು
ಮುಂದೆ ನೋಡಿದರೆ ಸಿನಿಮಾ ಅನ್ನೋದು ಕೂಡ ನಮ್ಮ ಭಾಷಾಸಂಸ್ಕೃತಿಯ ಒಂದು ಭಾಗವಾಗಿರುವುದರಿಂದ ಈ ಸಿನಿಮಾ ನಾಯಕರುಗಳ ಮೇಲಿನ ಅಭಿಮಾನ ಕನ್ನಡಿಗರನ್ನು ಗುಂಪುಗಳಾಗಿ ಪಂಗಡಗಳಾಗಿ ವಿಭಜಿಜನೆಗೊಳಗಾಗಿಸಿದೆ......

ಜಾತಿ ಜಾತಿಗಳಲ್ಲಿ ಒಡೆದು ಹೋಗಿರುವ ಕನ್ನಡಿಗರು
ಜಾತಿ ಅನ್ನೋದು ಭಾರತದಂತ ದೇಶದ ಪ್ರತಿಯೊಬ್ಬ ನಾಗರೀಕನ ಒಂದು ಗುರುತು ಎಂದರೆ ತಪ್ಪಾಗಲಾರದು. ದುರಂತವೆಂದರೆ ಇಡೀ ಪ್ರಪಂಚಕ್ಕೆ ವಿಶ್ವ ಮಾನವ ಸಂದೇಶವನ್ನು ಕೊಟ್ಟ ರಾಷ್ಟ್ರಕವಿ ಕುವೆಂಪು ಜನ್ಮಭೂಮಿ ಇಂದು ಜಾತಿ ಧರ್ಮಗಳ ಮೇಲಾಟಕ್ಕೆ ಸಿಕ್ಕಿ ನಲುಗುತ್ತಿರುವುದು.
ಇದರಲ್ಲಿ ಬಹುತೇಕ ಪಾಲು ರಾಜಕೀಯ ಪಕ್ಷಗಳಿಗೆ ಸಲ್ಲಬೇಕು, ಮಠಮಾನ್ಯಗಳು ತಕ್ಕ ಮಟ್ಟಿಗೆ ಪಾಲನ್ನು ಪಡೆಯುತ್ತವೆ.

ಮೇಲ್ವರ್ಗದ ಕನ್ನಡಿಗ, ಅಹಿಂದ ಕನ್ನಡಿಗ ಎಂಬ ಹುಚ್ಚಾಟ!...
ಹೀಗೆ ಮುಂದೆ ಯೋಚಿಸಿದರೆ ನಮಗೆ ಕಂಡುಬರುವ ವಿಭಜನೆಗೆ ಕಾರಣವಾದ ಅಂಶ ಆರ್ಥಿಕ ಪರಿಸ್ಥಿತಿ ಕನ್ನಡಿಗ ಬಡವ , ಮದ್ಯಮವರ್ಗದ ಕನ್ನಡಿಗ ,ಶ್ರೀಮಂತ ಕನ್ನಡಿಗ ಇವು ಹತ್ತು ಹಲವು ಸಿದ್ದಾಂತಗಳಿಗೆ ಕನ್ನಡಿಗರು ತಲೆ ಕೊಡುವಂತೆ  ಮಾಡಿದೆ, ಎಡ ಬಲ ಮದ್ಯಮ ಅನ್ನೊ ತಲೆತಿರುಕ ರಾಜಕೀಯ ಸಿದ್ದಾಂತಗಳಿಗೆ ಆರ್ಥಿಕ  ಕಾರಣ..
ಇತ್ತೀಚೆಗೆ ಕನ್ನಡದ ಕಡೆಗೆ ಅತಿಯಾದ ವ್ಯಾಮೋಹ ತೋರುತ್ತಿರುವ ನಮ್ಮ ಮುಖ್ಯ ಮಂತ್ರಿಗಳನ್ನು ನೋಡುತ್ತಿದ್ದರೆ(ಕನ್ನಡ ಮಾದ್ಯಮದ ವಿದ್ಯಾರ್ಥಿಗಳಿಗೆ ಮೀಸಲಾತಿ) ಕನ್ನಡ ಮಾದ್ಯಮದ ಕನ್ನಡಿಗರು  - ಇಂಗ್ಲಿಷ್ ಮಾದ್ಯಮದ ಕನ್ನಡಿಗರು ಅನ್ನುವ ಒಂದು ಗಂಭೀರವಾದ ವ್ಯತ್ಯಾಸ ಮೂಡಿದೆ...
ಕನ್ನಡ ಮಾದ್ಯಮ ಎಂಬ ಗ್ರಾಮೀಣ ಭಾಗದ ಕಲಿಕೆ ಇಂಗ್ಲಿಷ್ ಮಾದ್ಯಮ ಎಂಬ ದೂರದ ನುಣ್ಣಗಿನ ಬೆಟ್ಟಗಳ ನೆಡುವಿನ ವ್ಯತ್ಯಾಸ ಕನ್ನಡಿಗರನ್ನು ವಿಭಜಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.....
ಹೀಗೆ  ಹತ್ತು ಹಲವು ಬಗೆಯಲ್ಲಿ ಒಡೆದು ಹೋದ ಕನ್ನಡಿಗರ ಮದ್ಯೆ ನಿಜವಾದ ಕನ್ನಡಿಗರನ್ನು ಹುಡುಕುವುದಾದರು ಎಲ್ಲಿ. ಎಲ್ಲಾ ತರಹದ ವ್ಯತ್ಯಾಸಗಳನ್ನು ಮೀರಿದ ನಿಷ್ಪಕ್ಷಪಾತವಾದ ಕನ್ನಡತನವನ್ನು ಮೈಗೂಡಿಸಿಕೊಂಡ ಕನ್ನಡತನವನ್ನು ಎಲ್ಲಿ ಹುಡುಕಲು ಸಾದ್ಯ?
ಇಂತಹ ಎಲ್ಲಾ ತರಹದ ತರೆವಾರಿ ಗುಣಲಕ್ಷಣಗಳನ್ನು ಮೀರಿದ ಕನ್ನಡಿಗರನ್ನು ಹುಡುಕುವುದಾದರು ಎಲ್ಲಿ?
ಎಲ್ಲಿದ್ದೀರಾ ಕನ್ನಡತನವೊಂದನ್ನೆ ಉಸಿರಾಗಿಸಿಕೊಂಡ ನಿಜವಾದ ಕನ್ನಡಿಗರೆ ಏಳಿ ಎದ್ದು ಬನ್ನಿ ನಿಮ್ಮ ಅವಶ್ಯಕತೆ, ಅನಿವಾರ್ಯತೆ ಕನ್ನಡ ತಾಯಿಗೆ ಇದೆ, ನಿಮ್ನನ್ನು ಕಟ್ಟಿ ಹಾಕಿರುವ ಎಲ್ಲಾ ಬೇಲಿಗಳನ್ನು ಕಿತ್ತು ಬನ್ನಿ , ಸಿದ್ದ ಸೇವೆಗಾಗಿ ಎದ್ದು ಬನ್ನಿ.
ಕನ್ನಡಿಗರೇ ನಿಜವಾದ ಕನ್ನಡಿಗರಾಗಿ ಬನ್ನಿ, ನಿಮ್ಮ ಒಣ ಸಿದ್ದಾಂತಗಳನ್ನು ಒದ್ದು, ಕನ್ನಡಮ್ಮನ ಸೇವೆಗೆ ಎದ್ದು ಬನ್ನಿ!
- ಇಂತಿ ನಿಮ್ಮ ಕನ್ನಡಿಗ (ಪ್ರದೀಪ್ ಕುಮಾರ್)
೨೦೧೭

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States