ಒಂಚೂರು ನಮ್ ಇತಿಹಾಸ : ಮೌರ್ಯರ ಕಾಲದ ಕರ್ನಾಟಕ

ಮೌರ್ಯರ ಕಾಲದ ಕರ್ನಾಟಕ



ಪ್ರಾಚೀನ ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯವೇ ಮಗಧ ಸಾಮ್ರಾಜ್ಯ , ಇದು ಕ್ರಿ . ಪೂ . ನಾಲ್ಕನೆಯ ಶತಮಾನದಲ್ಲಿ ನಂದರ ಆಳ್ವಿಕೆಯಲ್ಲಿ ದಕ್ಷಿಣ ಭಾರತದಲ್ಲೂ ವಿಸ್ತರಿಸಿತು . ನಂದರು ಕುಂತಳದಲ್ಲಿ ಆಳಿದರೆಂಬುದನ್ನು ಹನ್ನೊಂದನೆಯ ಶತಮಾನದ ಕೆಲವು ಕನ್ನಡ ಶಾಸನಗಳು ತಿಳಿಸುತ್ತವೆ . ಕ್ರಿ . ಪೂ . 322ರಲ್ಲಿ ನಂದರನ್ನು ಮೂಲೆಗೊತ್ತಿದ ನಂತರ ಉತ್ತರದಲ್ಲಿ ಆಳ್ವಿಕೆ ನಡೆಸಿದ ಮೌರ್ಯರು ಕರ್ನಾಟಕವನ್ನು ಆಳಿದರೇ ಇಲ್ಲವೇ ಎಂಬ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯ ಗಳಿವೆ . ಚಂದ್ರಗುಪ್ತಮೌರ್ಯನಾಗಲಿ ಅಥವಾ ಅಶೋಕನ ತಂದೆ ಬಿಂದುಸಾರನಾಗಲಿ ದಕ್ಷಿಣ ಭಾರತವನ್ನು ಗೆದ್ದಂತಿಲ್ಲ . ಕರ್ನಾಟಕದ ಕೆಲವು ಭಾಗ ಅಶೋಕನ ಕಾಲದಲ್ಲಿ ಮೌರ್ಯ ಸಾಮ್ರಾಜ್ಯ ಸೇರಿದ್ದಿತೆಂಬುದಕ್ಕೆ ರಾಯಚೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ದೊರೆತಿರುವ ಶಾಸನಗಳು ಸಾಕ್ಷಿಯಾಗಿವೆ

ಚಂದ್ರಗುಪ್ತಮೌರ್ಯ ದಕ್ಷಿಣ ಭಾರತವನ್ನು ಸ್ವತಃ ಗೆದ್ದ ನಂತರ ಆಳಿಕೆಗೊಳಪಟ್ಟ ಈ ಭಾಗಗಳೂ ಚಂದ್ರಗುಪ್ತನಿಗೆ ಅವರ ಪತನಾನಂತರ ಪ್ರಾಪ್ತವಾದುವು . ಚಂದ್ರಗುಪ್ತಮೌರ್ಯ ( 320 - 300 ಕ್ರಿ . ಪೂ . ) ಚಂದ್ರಗುಪ್ತಮೌರ್ಯ ಕರ್ನಾಟಕದ ಶ್ರವಣಬೆಳಗೊಳದಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದನೆಂಬುದಕ್ಕೆ ಜೈನ ಸಾಹಿತ್ಯದಲ್ಲಿ ನಂಬಲರ್ಹವಾದ ಕೆಲವು ಪುರಾವೆಗಳಿವೆ . 

ಶ್ರೀರಂಗಪಟ್ಟಣ ಮತ್ತು ಶ್ರವಣಬೆಳಗೊಳದಲ್ಲಿ ದೊರೆತ ಕ್ರಿ . ಶ . 9 , 12 , 15ನೇ ಶತಮಾನದ ಶಾಸನಗಳಲ್ಲಿ ಜೈನಮುನಿ ಭದ್ರಬಾಹು ಮತ್ತು ಚಂದ್ರಗುಪ್ತಮೌರರು ಶ್ರವಣಬೆಳಗೊಳದಲ್ಲಿದ್ದರೆಂಬುದನ್ನು ಪ್ರಸ್ತಾಪಿಸಲಾಗಿದೆ . ಇದೇ ಅಂಶ ಜಿನಸೇನನ ' ಹರಿವಂಶ ' ಮತ್ತು ಹರಿಷೇಣುನ , ' ಬೃಹತ್ಕಥಾ ಕೋಶ ' ದಿಂದಲೂ ವೇದ್ಯವಾಗುತ್ತದೆ . ಚಂದ್ರಗುಪ್ತಮೌಲ್ಯ ಚೈನಧರ್ಮಾವಲಂಬಿಯಾಗಿ ಶ್ರವಣ ಬೆಳಗೊಳಕ್ಕೆ ( ಕಾಧವಪುರಿ ) ಬರಲು ಜೈನಮುನಿ ಭದ್ರಬಾಹುವ ಕಾರಣ , ಈತನು ಚಂದ್ರಗುಪ್ತ ಮೌನ ಸಾಮ್ರಾಜ್ಯದಲ್ಲಿ ಸಂಭವಿಸಬಹುದಾದ ಸುಮಾರು ಹನ್ನೆರಡು ವರ್ಷಗಳ ಭೀಕರ ಕಾಮದ ಬಗ್ಗೆ ಭವಿಷ್ಯ ನುಡಿದನೆಂದೂ , ಅದರಿಂದ ಜಿಗುಪ್ಸೆಗೊಂಡ ಚಂದ್ರಗುಪ್ತ ಮೌರ್ಯ ಸಿಂಹಾಸನ ತ್ಯಜಿಸಿ ಭದ್ರಬಾಹುವಿನೊಂದಿಗೆ ಅನೇಕ ಜೈನಸಂಘಸ್ಥರೂಡಗೂಡಿ ಕರ್ನಾಟಕದ ಶ್ರವಣಬೆಳಗೊಳಕ್ಕೆ ಬಂದನು , ಇಲ್ಲಿ ನೆಲಸಿದ ಚಂದ್ರಗುಪ್ತಮೌರ್ಯ ಜೈನ ಸಂಪ್ರದಾಯದ ರೀತ್ಯ ಸಲ್ಲೇಖನವ್ರತ ( ಉಪವಾಸ ) ಕೈಗೊಂಡು ನಿರ್ವಾಣ ( ಮುಕ್ತಿ ) ಹೊಂದಿದನೆಂದು ಹೇಳ ಲಾಗಿದೆ . 

ಶ್ರವಣಬೆಳಗೊಳದ ಚಂದ್ರಗಿರಿಯಲ್ಲಿ ಇರುವ ಶಾಂತಿನಾಥ ಪಾರ್ಶ್ವನಾಥ ಚಂದ್ರಗುಪ್ತ ಬಸದಿಗಳು , ಭದ್ರಬಾಹುವಿನ ಗುಹೆ ಇತ್ಯಾದಿ ಶ್ರವಣಬೆಳಗೊಳದಲ್ಲಿ ಚಂದ್ರಗುಪ್ತ ಮತ್ತು ಭದ್ರಬಾಹು ನೆಲಸಿದ್ದರೆಂಬುದನ್ನು ಸಮರ್ಥಿಸುತ್ತವೆ . 

ಚಂದ್ರಗುಪ್ತ ಮೌರ್ಯನ ನಂತರ ಕ್ರಿ . ಪೂ 298ರಲ್ಲಿ ಅಧಿಕಾರಕ್ಕೆ ಬಂದ ಅವನ ಮಗ ಬಿಂದುಸಾರ ಸು . 24 ವರ್ಷಗಳು ಅಳಿಕೆ ನಡೆಸಿದನು . ಬಿಂದುಸಾರ ತನ್ನ ತಂದೆಯಿಂದ ಪಡೆದ ಸಾಮ್ರಾಜ್ಯಕ್ಕೆ ಯಾವ ಧಕ್ಕೆಯ ಬಾರದಂತೆ ನೋಡಿಕೊಂಡ.




ಅಶೋಕ ( ಕ್ರಿ . ಪೂ . 273 - 233 )

ಅಶೋಕನ ಬಗ್ಗೆ ತಿಳಿಯಲು ನಮಗೆ ಅವನ ಶಾಸನಗಳು ಆಧಾರವಾಗಿವೆ . ದಕ್ಷಿಣ ಭಾರತದಲ್ಲಿ ಅಶೋಕನ ಪ್ರವೇಶ ಕಳಿಂಗ ಯುದ್ಧದಿಂದ ಆರಂಭವಾಯಿತು . ಇದೇ ಅವನ ಪ್ರಥಮ ಹಾಗೂ ಕೊನೆಯ ಯುದ್ದವೂ ಆಯಿತು . ಅನಂತರ ಧರ್ಮಭೀರುವಾದವನು ಮುದ್ರವನ್ನು ತ್ಯಜಿಸಿ ಪ್ರಜೆಗಳಲ್ಲಿ ಧಾರ್ಮಿಕ ನೀತಿನಿಯಮಗಳ ಮಾನವೀಯ ಮೌಲ್ಯಗಳನ್ನು ಹರಡತೊಡಗಿದನು . ಕರ್ನಾಟಕವೂ ಅವನ ಸಾಮಾಜ್ಯದ ಧಾರ್ಮಿಕ ಆಂದೋಲನದಲ್ಲಿ ಸೇರಿತ್ತೆಂಬುದಕ್ಕೆ ಶಾಸನಗಳ ನಿದರ್ಶನಗಳಿವೆ .

ಕರ್ನಾಟಕದ ಈ ಕೆಳಕಂಡ ಸ್ಥಳಗಳಲ್ಲಿ ಅಶೋಕನ 17 ಶಾಸನಗಳು ದೂರತಿವೆ : 

ರಾಯಚೂರು ಜಿಲ್ಲೆ : ( 1 ) ಮಸ್ಕಿ ( 2 ) ಕೊಪ್ಪಳ - ಗವಿಮಠ ( 3 ) ಪಾಲಿಗುಂಡ . 

ಬಳ್ಳಾರಿ ಜಿಲ್ಲೆ ( 4 ) ಮಸ್ಕಿ ( 5 ) - ನಿಟ್ಟೂರು ( 6 ) ಮತ್ತು ( 7 ) - ಉದೇಗೊಳ್ಳಂ . 

ಚಿತ್ರದುರ್ಗ ಜಿಲ್ಲೆ : ( 8 & 9 ) ಬ್ರಹ್ಮಗಿರಿ , ( 10 & 11 ) ಅಶೋಕ ಸಿದ್ದಾಪುರ , - ( 12 & 13 ) ಜಟಿಂಗ ರಾಮೇಶ್ವರ , 

ಗುಲ್ಬರ್ಗ ಜಿಲ್ಲೆಯ : ( 14 , 15 , 16 & 17 ) ಸನ್ನತಿ ( 1989ರಲ್ಲಿ ಪತ್ತೆ ) . 

ಇದರಿಂದ ಕರ್ನಾಟಕದ ಬಹುಭಾಗ ಅಶೋಕನ ಆಳಿಕೆಗೊಳಪಟ್ಟಿತ್ತೆಂಬುದು ವೇದ್ಯವಾಗುತ್ತದೆ . ತನ್ನ ಪ್ರಜೆಗಳು ಇಹಲೋಕದಲ್ಲಲ್ಲದೆ ಪರಲೋಕದಲ್ಲೂ ಉತ್ತಮ ಜೀವನ ಪಡೆಯಬೇಕೆಂಬ ಮಹದಾರಾಂಕ್ಷೆ ಅಶೋಕನಿಗಿದ್ದಿತು . ಅದರ ಸಾಧನೆಗೆ ಇಂದಿನ ಜೀವನದಲ್ಲಿ ಪರಿಪಾಲಿಸಬೇಕಾದ ಮಮೌಲ್ಯಗಳ ಬಗ್ಗೆ ತನ್ನ ಶಾಸನಗಳಲ್ಲಿ ಒತ್ತಿ ಹೇಳಿದ್ದಾನೆ .

ಪ್ರಾಂತಾಧಿಕಾರಿಗಳಾದ ಧರ್ಮಮಹಾಮಾತ್ರರು ಅವನ್ನು ಜನರಲ್ಲಿ ಹರಡಬೇಕಿತ್ತು , ಕಲ್ಕ ತ್ಪಾದ ಶಾಸನವನ್ನು ಬಿಟ್ಟರೆ ಅಶೋಕನ " ದೇವನಾಂಪ್ರಿಯ ಅಶೋಕನ ' ಎಂಬುದಾಗಿ ಉಲ್ಲೇಖಿಸಿರುವುದು ಮಸ್ಕಿ ಶಾಸನದಲ್ಲಿ ಮಾತ್ರವೇ . ಉಳಿದವುಗಳಲ್ಲಿ ಅಶೋಕನನ್ನು " ದೇವನಾಂಪ್ರಿಯ " ( ದೇವರಿಗೆ ಪ್ರಿಯನಾದವನು ) ಎಂದು ಸಂಬೋಧಿಸಲಾಗಿದೆ . ಮಸ್ಕಿ ಶಾಸನ ಪತ್ತೆ ಹಚ್ಚಿದವನು ಆಂಗ್ಲ ಅಧಿಕಾರಿ ಚಾರ್ಲ್ಸ್ ಬೇಡನ್ ಈ ಶಾಸನಗಳ ಭಾಷೆ ಪಾಲಿ , ಲಿಪಿಗಾರ ಚಪಡ . - ಶಾಸನದಲ್ಲಿ ಉಕ್ತವಾಗಿರುವ ಅಶೋಕನ ದಕ್ಷಿಣ ಪ್ರಾಂತದ ಕೇಂದ್ರ ' ಸುವರ್ಣಗಿರಿ " . ಮಾಸ್ತಿಯ ಬಳಿಯ ಕನಕಗಿರಿಯೆ ಆಗಿರಬೇಕು . ದಕ್ಷಿಣದಲ್ಲಿನ ಅಂತಹ ಮತ್ತೊಂದು ಪ್ರಾಂತ್ಯ ಇಸಿಲ , ಬಹುಶಃ ಬ್ರಹ್ಮಗಿರಿ ಇರಬೇಕು . ಇವುಗಳ ಅಧಿಕಾರಿಗಳು ಧರ್ಮಮಹಾಮಾತ್ರರು 


#ಒಂಚೂರು_ನಮ್_ಇತಿಹಾಸ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States