ಒಂಚೂರು ನಮ್ ಇತಿಹಾಸ : ಕರ್ನಾಟಕದಲ್ಲಿ ಶಾತವಾಹನರು


ಶಾತವಾಹನರು ( ಕ್ರಿ . ಪೂ . 230 ಕ್ರಿ . ಶ . 225 )
(ರಾಜಧಾನಿ : ಪ್ರತಿಷ್ಠಾನ )
 


ಮೌರ್ಯರ ಪತನಾನಂತರ ಭಾರತದಲ್ಲಿ ಅನೇಕ ಸಣ್ಣಪುಟ್ಟ ರಾಜ್ಯಗಳು ತಲೆ ಎತ್ತಿದವು . ಅವುಗಳಲ್ಲಿ ಕೆಲವು ಮೌರ್ಯರ ಸಾಮಂತವಾಗಿದ್ದು ಅನಂತರ ಸ್ವತಂತ್ರವಾದುವುಗಳು . ದಕ್ಷಿಣದಲ್ಲಿ ಏಳಿಗೆಗೆ ಬಂದ ಶಾತವಾಹನರೂ ಒಮ್ಮೆ ಮೌರ್ಯರ ಸಾಮಂತರಾಗಿದ್ದವರು . ಮೊತ್ತಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಅವರು ಸಾಧಿಸಿದ ರಾಜಕೀಯ ಸಂಘಟನೆ ಅವರ ಸಾಧನೆಗಳಲಿ ಪ್ರಮುಖವಾದುದು . ಸಾಹಸಿಗಳೂ , ಸಮರ್ಥ ಆಡಳಿತಗಾರರೂ , ಕಲೆ ಮತ್ತು ಸಾಹಿತ್ಯ ಪ್ರೇಮಿ ಗಳೂ ಹಾಗೂ ಧಾರ್ಮಿಕಸಹಿಷ್ಣುಗಳೂ ಆದ ಇವರು ಭಾರತದ ಸಂಸ್ಕೃತಿಗೆ ತಮ್ಮದೇ ಆದ ಕಾಣಿಕೆ ಸಲ್ಲಿಸಿದ್ದಾರೆ . ಆ ಮೂಲಕ ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ . ನೂತನ ಶಾಲಿವಾಹನ ಶಕೆಯನ್ನು ಆರಂಭಿಸಿದವರೂ ಇವರೇ ಎಂಬುದಾಗಿ ನಂಬಲಾಗಿದೆ .

ಶಾತವಾಹನರ ಮೂಲ
ಶಾತವಾಹನರ ಮೂಲದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿವೆ . ಶಾಸನಗಳು ಇವರನ್ನು ಶಾತವಾಹನ , ಶಾತಕರ್ಣಿಗಳೆಂದೂ , ನಾಣ್ಯಗಳು ಆಂಧ್ರರು ಅಥವಾ ನೃತ್ಯರೆಂದೂ ವರ್ಣಿಸು ಇವೆ . ಶಾತವಾಹನರ ರಾಜಧಾನಿ ' ಪೈತ್ತಾನ ' ( ಪ್ರತಿಷ್ಠಾನ ) ಅಥವಾ ಪೈಠಾಣ್ ಹೈದರಾಬಾದಿನ ಔರಂಗಾಬಾದ್ ಜಿಲ್ಲೆಯ ಗೋದಾವರಿ ನದೀತೀರದಲ್ಲಿದೆ .

ಮೌರ್ಯರ ಪ್ರಾಬಲ್ಯ ಅಳಿದಂತೆ ಕ್ರಿ . ಪೂ . 230ರಿಂದ ಸುಮಾರು ನಾಲ್ಕು ಶತಮಾನಗಳವರೆಗೆ ಶಾತವಾಹನರು ಆಳಿದರು . ಇದು ಡಾ . ಗೋಪಾಲಾಚಾರಿಯವರ ಅಭಿಪ್ರಾಯ . ಅಲ್ಲದೆ ರಾಜಶೇಖರನ ' ಕಾವ್ಯಮೀಮಾಂಸೆ ' ಯಲ್ಲಿ ಶಕುಂತಲದ ದೊರೆ ಶಾತವಾಹನನೆಂಬ ಉಲ್ಲೇಖವಿದೆ .

ಶಾತವಾಹನರ ಏಳಿಗೆ

ಶಾತವಾಹನ ರಾಜ್ಯಸ್ಥಾಪಕ ಸಿಮುಕ , ಜೈನ ಸಾಹಿತ್ಯದಲ್ಲಿ ಇವನನ್ನು ಶಾತವಾಹನನೆಂಬು ದಾಗಿ ಉಲ್ಲೇಖಿಸಿದೆ . ಸಿಮುಕ ಕ್ರಿ . ಪೂ . 230ರಿಂದ212ರ ವರೆಗೆ ಮೌರ್ಯ ಸಾಮಂತನಾಗಿ ಆಳಿಕೆ ನಡೆಸಿದ ಗೋದಾವರಿ ನದಿ ಸಮೀಪದ ಔರಂಗಾಬಾದ್ ಸಮೀಪದ ಪಠಾನ್ ಇವನ ರಾಜಧಾನಿ ಯಾಗಿತ್ತು . ನಂತರ ಅಧಿಕಾರಕ್ಕೆ ಬಂದವನು ಕಮ್ಮ ( ಕೃಷ್ಣ ) , ಸಿಮುಕನ ಸೋದರನಾದ ಇವನು ಅಶೋಕನ ಸಮಕಾಲೀನ ಬೌದ್ಧಧರ್ಮದ ಬಗ್ಗೆ ಆಸ್ಥೆ ತಳದ ಕನ್ಯ ನಾಸಿಕದಲ್ಲಿ ಬೌದ್ಧ ಗುಹಾಲಯವನ್ನು ನಿರ್ಮಿಸಿದನು . ಇವನ ಅನಂತರ ಅಧಿಕಾರಕ್ಕೆ ಬಂದವರಲ್ಲಿ ಎರಡನೇ ಶಾತಕರ್ಣಿ ಪ್ರಮುಖ . ಇವನು ಕ್ರಿ . ಪೂ . 184ರಿಂದ 128ರ ವರೆಗೆ ಆಳಿದ .

ಇಲ್ಲಿಯವರೆಗೂ ಚಿಕ್ಕದಾಗಿಯೇ ಇದ್ದ ಶಾತವಾಹನ ರಾಜ್ಯವನ್ನು ಎರಡನೇ ಶಾತಕರ್ಣಿ ವಿಂಧ್ಯಪರ್ವತದಿಂದ ಕೊಂಕಣದವರೆಗೂ ವಿಸ್ತರಿಸಿದ ನಂತರ ನಮಗೆ ಕಂಡುಬರುವ ಅರಸ ಹಾಲ . ಇವನು ಶಾತವಾಹನ ಅರಸರಲ್ಲಿ ಹದಿನೇಳನೆಯವನು . ಹಾಲ ಕ್ರಿ . ಶ . 20ರಿಂದ ನಾಲ್ಕು ವರ್ಷಗಳು ಮಾತ್ರ ಅಧಿಕಾರದಲ್ಲಿದ್ದ . ಶಾಂತಿಪ್ರಿಯನಾದ ಈತ ಘನ ವಿದ್ವಾಂಸನಾಗಿದ್ದ . ಸಪ್ಪಸಕ ( ಏಳು ಶತಕಗಳು ) ಎಂಬುದು ಇವನ ಕೃತಿಗಳಲ್ಲೆಲ್ಲ ಮುಖ್ಯವಾದುದು . ನಂತರದ ಅರಸರು ಪುಲುಮಾಯಿ ಪ್ರಮುಖ . ( ಇವನ ಕಾಲದಲ್ಲಿ ಶಾತವಾಹನರ ಸಾಮ್ರಾಜ್ಯ ಮತ್ತಷ್ಟು ಬಲಗೊಂಡಿತು .

ಗೌತಮೀಪುತ್ರ ಶಾತಕರ್ಣಿ 
(ಕ್ರಿ.ಶ .70 - 95 - ಶಾಲಿವಾಹನ ಶಕೆ ಆರಂಭ )

ಗೌತಮೀಪುತ್ರ ಶಾತಕರ್ಣಿಯು ಶಾತವಾಹನ ಅರಸರಲ್ಲಿ ಪ್ರಸಿದ್ಧನಾದವನು. ಇವನು ಅಧಿಕಾರಕ್ಕೆ ಬರುವ ಮುನ್ನ ಉತ್ತರಭಾರತವನ್ನು ಆಕ್ರಮಿಸಿದ ಪಲ್ಲವರು ಶಾತವಾಹನರ ಗಡಿಗಳನ್ನ ಆಕ್ರಮಿಸಿದರು. ಇದರಿಂದ ಸಿಡಿದೆದ್ದ ಗೌತಮೀಪುತ್ರ ಶಾತಕರ್ಣಿ ಶಕರ ನಹಪಾನವನ್ನು ಸದೆಬಡಿದನು , ಅದರ ನೆನಪಿಗಾಗಿ ಹೊಸ ಶಾಲಿವಾಹನ ಶಕೆಯನ್ನು ಆರಂಭಿಸಿ ಶಕಪುರುಷನಾದನು . ಇವನ ತಾಯಿ ಗೌತಮೀ ಬಾಲಶ್ರೀಯು ಹೊರಡಿಸಿರುವ ಒಂದು ಶಾಸನ ನಮಗೆ ನಾಸಿಕದ ಬಳಿ ಪ್ರಾಪ್ತವಾಗಿದೆ . ಅದು ಗೌತಮೀಪುತ್ರ ಶಾತಕರ್ಣಿಯ ದಿಗ್ವಿಜಯವನ್ನು ಕುರಿತುದಾಗಿದೆ.

ಇವನ ದಿಗ್ವಿಜಯದ ಪರಿಣಾಮವಾಗಿ ಶಾತವಾಹನ ಸಾಮಾಜ್ಯ ಋಷಿಕ ( ಕೃಷ್ಣಾನದಿ ದಂಡ ) , ಅಸ್ಮಾಕ ( ಹೈದರಾಬಾದ್ ) , ಸೌರಾಷ್ಟ್ರ ( ಗುಜರಾತ್ ಸಮೀಪ ) , ಮುಲಕ ( ಗೋದಾವರಿ ನದೀ ಪ್ರದೇಶ ) , ವಿದರ್ಭ ( ಬಿರಾರ್ ) , ಅವಂತಿ ( ಮಾಳವದ ಪಶ್ಚಿಮಭಾಗ ) ಮುಂತಾದ ಪ್ರದೇಶಗಳ ವರೆಗೂ ವ್ಯಾಪಿಸಿತು .

ದಕ್ಷಿಣದಲ್ಲಿ ಕೃಷ್ಣಾ ನದಿಯಿಂದ ಹಿಡಿದು ಉತ್ತರದಲ್ಲಿ ಮಾಳ್ವ ಮತ್ತು ಕಾಥೇವಾಡದವರೆಗೂ , ಪೂರ್ವದಲ್ಲಿ ಬೀರಾರ್‌ನಿಂದ ವಿದರ್ಭದವರೆಗೂ , ಪಶ್ಚಿಮದಲ್ಲಿ ಕೊಂಕಣ ದವರಗೂ ವಿಸ್ತರಿಸಿದ್ದ ವಿಶಾಲ ಸಾಮ್ರಾಜ್ಯವನ್ನು ಆಳಿದ ಗೌತಮೀಪುತ್ರ ಶಾತಕರ್ಣಿ ' ತ್ರೈ ಸಮುದ್ರ ತೋಯಪಿತವಾಹನ ' ( tri - samudra - toya - pithavahana ) ಎಂಬ ಬಿರುದನ್ನು ಪಡೆದನು . ' ಅಂದರೆ ಮೂರು ಸಮುದ್ರಗಳಲ್ಲಿ ಮಿಂದ ಪೀತಾಂಬರದಿಂದ ಅಲಂಕೃತವಾದ ಕುದುರೆಗಳನ್ನು ವಾಹನವನ್ನಾಗಿ ಹೊಂದಿದವನು .

ಇವನ ಸಾಮ್ರಾಜ್ಯ ಉತ್ತರದಲ್ಲಿ ವಿಂಧ್ಯಪರ್ವತದವರೆಗೂ ಇನ್ನುಳಿದ ಮೂರು ಕಡೆ ಸಮುದ್ರದಿಂದ ( ಪಶ್ಚಿಮದಲ್ಲಿ ಅರಬ್ಬಿಸಮುದ್ರ , ಪೂರ್ವದಲ್ಲಿ ಬಂಗಾಳ ಕೊಲ್ಲಿ , ದಕ್ಷಿಣದಲ್ಲಿ ಹಿಂದೂ ಮಹಾಸಾಗರ ) ಆವೃತವಾಗಿದ್ದಿತು .

ಗೌತಮೀಪುತ್ರ ಶಾತಕರ್ಣಿಯ ಉತ್ತರಾಧಿಕಾರಿ ಎರಡನೇ ಪುಲುಮಾಯಿಇವನು ಕ್ರಿ . ಶ . 130ರಿಂದ 154ರ ವರೆಗೆ ಆಳಿಕ ನಡೆಸಿದನು . ಉಚ್ಚನಿಯ ರುದ್ರದಾಮನ ಮಗಳನ್ನು ವಿವಾಹವಾಗಿ ಶಕಸಾಪರೊಡನೆ ಸಂಬಂಧ ಕಲ್ಪಿಸಿಕೊಂಡನು . ಇಷ್ಟಾದರೂ ಅವರ ನಡುವೆ ಕದನಗಳೇನೂ ನಿಲ್ಲಲಿಲ್ಲ .

ನಂತರ ಅಧಿಕಾರಕ್ಕೆ ಬಂದವರು ಕರ್ಣ , ಕುಂಭ ರುದ್ರಶಾತಕರ್ಣಿ ಮುಂತಾದವರು . ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ . ಕ್ರಿ . ಶ . 166ರಿಂದ 174ರ ( ಕೆಲವು ವಿದ್ವಾಂಸರ ಪ್ರಕಾರ ಕ್ರಿ . ಶ . 130 - 160 ) ವರಗೆ ಮೂರನೇ ಪುಲುಮಾಯಿ ಆಳಿದನು . ಕ್ರಿ . ಶ . 175ರಿಂದ 205ರ ವರೆಗೆ ಆಳಿದ ಯಜ್ಞಶಾತಕರ್ಣಿಯನ್ನು ಬಿಟ್ಟರೆ ನಮಗ ಶಾತವಾಹನರ ಮುಂದಿನ ಇತಿಹಾಸ ಅಸ್ಪಷ್ಟವಾಗಿದೆ . ಈ ಮಧ್ಯೆ ಮಹಾರಾಷ್ಟ್ರದಲ್ಲಿ ಅಭಿಹಾರರು , ಕರ್ನಾಟಕದಲ್ಲಿ ಕದಂಬರು ಮತ್ತು ಗಂಗರು , ದಕ್ಷಿಣದಲ್ಲಿ ಪಲ್ಲವರು , ಇಕ್ಷ್ವಾಕರು ಏಳಿಗೆಗೆ ಬಂದು ಶಾತವಾಹನ ಸಾಮ್ರಾಜ್ಯ ಪೂರ್ಣ ನಶಿಸಿ ಹೋಯಿತು.

ಶಾತವಾಹನರ ಆಡಳಿತ

ಶಾತವಾಹನರ ಆಡಳಿತಕ್ರಮದಲ್ಲಿ ಅರಸನೇ ರಾಜ್ಯದ ಮುಖ್ಯಸ್ಥ . ಆಡಳಿತ ಸೌಕರ್ಯಕಾರಿ . ರಾಜ್ಯವನ್ನು ಜನಪದ ( ಡಿವಿಷನ್ ) , " ವಿಷಯ ( ಜಿಲ್ಲೆ ) ಮತ್ತು ಸೀಮ ( ತಾಲ್ಲೂಕು ) ಗಳನಾಗಿ , ವಿಂಗಡಿಸಲಾಗಿತ್ತು . ಗೋವರ್ಧನಗಿರಿ , ಬನವಾಸಿ , ಕೊಲ್ಲಾಪುರ , ಕಲ್ಯಾಣ , ನಾಸಿಕ , ಅಜಂತ , ತಂಗರಪುರ , ಕರಹಾಡ , ಬೊಧನ , ಸೋಂಪಾರ ಮೊದಲಾದವು ಪ್ರಸಿದ್ದ ಪಟ್ಟಣಗಳಾಗಿದ ಅಮಾತ್ಯ ಮತ್ತು ಮಹಾಸೇನಾಪತಿಗಳು ರಾಜ್ಯದ ಮುಖ್ಯಾಧಿಕಾರಿಗಳಾಗಿದ್ದರು . ಮಹಾಮಾತ್ರರು, ಭಂಡಾರಿಕರು ವಿವಿಧ ಶಾಖೆಗಳ ಮುಖ್ಯಸ್ಥರಾಗಿದ್ದರು . ಈ ಅಧಿಕಾರಿಗಳ ಸಹಾಯಕ್ಕೆ ಲೆಕ್ಕಿಗ ಅಥವಾ ಲೇಖಕರಿರುತ್ತಿದ್ದರು.

ಆರ್ಥಿಕ ಸ್ಥಿತಿ 
ಈ ಕಾಲದಲ್ಲಿ ಆರ್ಥಿಕವಾಗಿ ದಕ್ಷಿಣ ಭಾರತ ಉನ್ನತ ಸ್ಥಿತಿಯಲ್ಲಿತ್ತು . ದಕ್ಷಿಣಭಾರತ ಮತ್ತು ಯೂರೋಪಗಳ ನಡುವೆ ನಡೆಯುತ್ತಿದ್ದ ವ್ಯಾಪಾರವನ್ನು ತಿಳಿಯಲು ಅಂದಿನ ಗ್ರೀಕ್ ಗ್ರಂಥಗಳು ಸಹಾಯಕವಾಗಿವೆ . ಗ್ರೀಕ್ ಅನಾಮಧೇಯ ವಿರಚಿತ , ' ಪೆರಿಪ್ಲಸ್ ಆಫ್ ದಿ ಎರಿತ್ರಿ ಯನ್ ಸೀ ' ಎಂಬ ಗ್ರಂಥದಲ್ಲಿ ಪಶ್ಚಿಮತೀರದ ಬರುಕ್ಷಕ , ಸ್ವವಾದಕ , ಕಲ್ಯಾಣ ( ಬಹುಮಟ್ಟಿಗೆ ಮುಂಬಯಿ ) , ನೇತ್ರ , ಬನವಾಸಿ , ಭಟ್ಕಳ ಮೊದಲಾದ ಪಟ್ಟಣಗಳ ಬಗ್ಗೆ ಉಲ್ಲೇಖವಿದೆ . ರೋಮ್ ಚಕ್ರಾಧಿಪತ್ಯಕ್ಕೆ ದಕ್ಷಿಣಭಾರತದಿಂದ ಪಚ್ಚೆ ( ರತ್ನ ) , ವಜ್ರ , ಚಿನ್ನ ಬೆಳ್ಳಿಯ ಆಭರಣಗಳು , ಮಸ್ಲಿನ್ ಬಟ್ಟೆ , ಮೆಣಸು , ಏಲಕ್ಕಿ , ಶ್ರೀಗಂಧ ಮೊದಲಾದ ಸಾಮಗ್ರಿಗಳು ರಫ್ತಾಗುತಿತ್ತೆಂದು ತಿಳಿದುಬಂದಿದೆ . ರೋಮನ್ ಚಕ್ರವರ್ತಿಗಳ ನಾಣ್ಯಗಳು ಚಂದ್ರವಳ್ಳಿ ಮೊದಲಾದ ಕಡೆ ದೊರೆತಿವೆ . ಹಲವು ಬಗೆಯ ಕೈಗಾರಿಕಾ ಶ್ರೇಣಿಗಳಿದ್ದವು . ನಾಸಿಕ ಶಾಸನದಲ್ಲಿ ದಂತುವಾಯು ( ಹೆಂಡ ಇಳಿಸುವುದು ) , ಕುಂಭಕಾರ , ವಂಚಕಾರ ಬಂದ್ಯಾಂತಕ ( Water Trrigation Engineer } , ಚರ್ಮಕಾರ ಮೊದಲಾದ ಶ್ರೇಣಿಗಳು ( guilds } ಬೌದ್ಧ ಭಿಕ್ಷುಗಳಿಗೆ ದಾನಮಾಡಿದ ಉಲ್ಲೇಖವಿದೆ . ಸುವರ್ಣ , ದೀನಾರ ಎಂಬುವು ಆಗಿನ ಕಾಲದ ಚಿನ್ನದ ನಾಣ್ಯಗಳಾಗಿದ್ದುವು . ಕುಷಣ ಎಂಬ ಬೆಳ್ಳಿಯ ನಾಣ್ಯವಿತ್ತು . 1/2 , 3/4 , 1 1/2 , ಇಂಚಿನ ವ್ಯಾಸದ ನಾಣ್ಯಗಳು ಆನೆ ಕುದುರೆ , ಸಿಂಹ , ಬಾಣ , ಚಿನ್ನೆಗಳನ್ನೂ ಹೊಂದಿದ್ದವು . ಈ ರೀತಿ ಮೌರ್ಯರ ಪತನಾನಂತರ ಭಾರತದ ಸಂಸ್ಕೃತಿಯನ್ನು ಬೆಳಗಿಸಿದ ರಾಜಮನೆತನಗಳಲ್ಲಿ ಶಾತವಾಹನರಿಗೆ ಆಗ್ರಸ್ಥಾನ ದೊರೆತಿದೆ .

ಸಾಂಸ್ಕೃತಿಕ ಕೊಡುಗೆಗಳು
ಭಾರತೀಯ ಸಂಸ್ಕೃತಿಯ ಶ್ರೀಮಂತಿಕೆಗೆ ಅನೇಕ ಅರಸುಮನೆತನಗಳು ಅವಿರತವಾಗಿ ಶ್ರಮಿಸಿವೆ . ಅವುಗಳಲ್ಲಿ ದಕ್ಷಿಣಭಾರತದಲ್ಲಿ ಆಳಿದ ಅರಸುಮನೆತನಗಳಲ್ಲಿ ಮೊದಲನೆಯದು ಶಾತವಾಹನ ಮನೆತನ , ಮೌರ್ಯರ ಪತನಾನಂತರ ಉತ್ತರಭಾರತ ರಾಜಕೀಯ ಬಿಕ್ಕಟ್ಟಿನ ಗೊಂದಲದಲ್ಲಿ ಸಿಲುಕಿ ತೊಳಲುವಾಗ ದಕ್ಷಿಣದಲ್ಲಿ ಮೊತ್ತಮೊದಲಿಗೆ ರಾಜಕೀಯ ಸಂಘಟನೆ ಮಾಡಿ ಸುಭದ್ರ ಸರಕಾರ ಸ್ಥಾಪಿಸಿ ಏಕತೆಯನ್ನು ತಂದ ಕೀರ್ತಿ ಶಾತವಾಹನರದು : ಶಕ ಮುಂತಾದ ವಿದೇಶೀಯರ ದಾಳಿಗಳನ್ನು ತಡೆಗಟ್ಟಿದ ಇವರು ರಾಜ್ಯಾದ್ಯಂತ ಶಾಂತಿ ಸ್ಥಾಪಿಸುವಲ್ಲಿ ಯಶಸ್ವಿಯಾದರು . ಆರ್ಥಿಕ ಅಭಿವೃದ್ಧಿ ಸಾಧಿಸಿ ಸಾಹಿತ್ಯ , ಕಲೆ ಮತ್ತು ವಾಸ್ತುಶಿಲ್ಪ ಹಾಗೂ ಚಿತ್ರಕಲೆಗೆ ಅಪಾರ ಪ್ರೋತ್ಸಾಹ ನೀಡಿದರು . ಎಲ್ಲಕ್ಕಿಂತ ಮಿಗಿಲಾಗಿ ಉತ್ತರ ಮತ್ತು ದಕ್ಷಿಣ ಭಾರತದ ಸಂಸ್ಕೃತಿಯ ಏಕೀಕರಣಕ್ಕೆ ತಳಪಾಯ ಹಾಕಿದರು . ಗುಪ್ತರ ಮತ್ತು ಚೋಳರ ಕಾಲದ ' ಬೃಹತ್ ಭಾರತ " ( Greaters India ) ಸಾಧನೆಗೆ ನಾಂದಿ ಹಾಡಿದವರೇ ಶಾತವಾಹನರು ,

ಸಾಹಿತ್ಯ

ಶಾತವಾಹನರ ಕಾಲದಲ್ಲಿ ಸಂಸ್ಕೃತ ಭಾಷೆ ಉಚ್ಚಾಯಸ್ಥಿತಿಯಲ್ಲಿತ್ತು . ಶಾತವಾಹನ ಅರಸರ ಹದಿನೇಳನೆಯವನಾದ ಪಾಲರಾಜನು ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿಯುಳ್ಳವನಾಗಿದ್ದನು . ಪ್ರಾಕೃತ ಭಾಷೆಯಲ್ಲಿ ' ಗಾಥಾಸಪ್ತಶತಿ ' ಎಂಬ ಶೃಂಗಾರಪೂರ್ಣ ಗ್ರಂಥವನ್ನು ರಚಿಸಿದ್ದಾನೆ . ಗುಣಾಢ್ಯನ ' ಬೃಹತ್ಕಥೆ ' ಇವರ ಕಾಲದಲ್ಲೇ ರಚಿಸಲ್ಪಟ್ಟಿತು . ' ಕಾತಂತ್ರ ' ಎಂಬ ಸಂಸ್ಕೃತ ವ್ಯಾಕರಣ ಗ್ರಂಥಕರ್ತೃ ಸರ್ವವರ್ಮ ಇದೇ ಕಾಲದವನು .

#ಈ_ಕಾಲದ_ಪ್ರಮುಖ

ಕವಿಗಳು                             ಕೃತಿಗಳು                                  ಭಾಷೆ
ಹಲ ( ಹಾಲರಾಜ )               ಗಾಥಾಸಪ್ತಶತಿ                          ಪ್ರಾಕೃತ
ಸರ್ವವರ್ಮ                         ಕಾತಂತ್ರ ವ್ಯಾಕರಣ                   ಸಂಸ್ಕೃತ
ಗುಣಾತ್ಮ                             ವಡ್ಡಕಥಾ(ಬೃಹತ್ಕಥಾ)               ಪ್ರಾಕೃತ
ನಾಗಾರ್ಜುನ                        ಶತಸಹಸ್ರಕ                            ಸಂಸ್ಕೃತ
                                          ಪ್ರಜ್ಞಾಪಾರಮಿತ                      ಸಂಸ್ಕೃತ
                                          ಮಾಧ್ಯಮಿಕ ಸೂತ್ರ                  ಸಂಸ್ಕೃತ

ಕಲೆ ಮತ್ತು ವಾಸ್ತುಶಿಲ್ಪ

ಶಾತವಾಹನರು ಲಲಿತಕಲೆಗಳಿಗೆ ಪ್ರೋತ್ಸಾಹ ನೀಡಿದ್ದರು . ಲೋಕವಿಖ್ಯಾತವಾದ ಅಜಂತ ಗುಹಾಂತರ ದೇವಾಲಯಗಳು ಶಾತವಾಹನರ ಕಾಲದಿಂದಲೇ ಪ್ರಾರಂಭವಾದವು . ಅಜಂತ , ಅಮರಾವತಿ , ನಾಗಾರ್ಜುನ ಮೊದಲಾದ ಕಡೆಗಳಲ್ಲಿ ಇರುವ ಬೌದ್ಧವಿಹಾರಗಳು , ಚಿತ್ರಗಳು , ಶಾತವಾಹನರ ಕಾಲದ ಸುಪ್ರಸಿದ್ದ ವಾಸ್ತುಶಿಲ್ಪ ಕೇಂದ್ರಗಳಾಗಿದ್ದವು . ಆಂಧ್ರದ ಅಮರಾವತಿ , ನಾಗಾರ್ಜುನಕೊಂಡ , ಗುಮ್ಮಡಿ , ಜೋಗಯ್ಯಪೇಟೆ , ಅಲ್ಲೂರು ಮೊದಲಾದ ಸ್ಥಳಗಳು ಬೌದ್ಧ ಶಿಲ್ಪಕಲೆಗೆ ಪ್ರಸಿದ್ಧವಾಗಿವೆ . ಇಲ್ಲಿ ನಿರ್ಮಿಸಲಾದ ಚೈತ್ಯಗಳು , ಸ್ಕೂಪಗಳು ಮತ್ತು ವಿಹಾರಗಳು ಅದ್ಭುತವಾಗಿವೆ . 1954 - 60ರ ಅವಧಿಯಲ್ಲಿ ನಾಗಾರ್ಜುನ ಅಣೆಕಟ್ಟನ್ನು ನಿರ್ಮಿಸಲಾಗಿ ಇಲ್ಲಿ ಅನೇಕ ಸ್ಮಾರಕಗಳನ್ನು ನಾಗಾರ್ಜುನ ಬೆಟ್ಟ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು . ಬುದ್ಧನ ಜೀವನ ಚರಿತ್ರೆಗೆ ಸಂಬಂಧಪಟ್ಟ ಚಾತಕಕಥೆಗಳನ್ನು ಕಲ್ಲಿನಲ್ಲಿ ಕಡೆದು ತೋರಿಸುವ ಚಮತ್ಕಾರವನ್ನು ಅಮರಾವತಿಯಲ್ಲಿ ಇಂದಿಗೂ ಉಳಿದಿರುವ ಭವ್ಯಕೃತಿಗಳಲ್ಲಿ ಕಾಣಬಹುದಾಗಿದೆ . ನಾಸಿಕ , ಕಾರ್ಲೆ , ಕನ್ಹೇರಿ ಮುಂತಾದ ಕಡೆ ಗುಹಾಂತರ ದೇವಾಲಯಗಳನ್ನು ನಿರ್ಮಿಸಿದರು . ಅವುಗಳ ( ವರ್ಣಚಿತ್ರಗಳು ಅಂದಿನ ಕಲಾಕೌಶಲ್ಯ ಹಾಗೂ ಧಾರ್ಮಿಕ ಜೀವನಕ್ಕೆ ಕನ್ನಡಿಯಂತಿವೆ .

ಧಾರ್ಮಿಕ ಮತ್ತು ಸಾಮಾಜಿಕ ಜೀವ

ಅಂದಿನ ಧಾರ್ಮಿಕ ಮತ್ತು ಸಾಮಾಜಿಕ ಜೀವನವನ್ನು ತಿಳಿಯಲು ಶಾಸನಗಳು ಮತ್ತು ಗ್ರಂಥಗಳು ಸಹಾಯಕವಾಗಿವೆ . ಈ ಕಾಲದಲ್ಲಿ ವರ್ಣಾಶ್ರಮಪದ್ದತಿ ಸಮಾಜದ ತಳಹದಿ ಯಾಗಿತ್ತು . ರಾಜರು ವೈದಿಕಮತದವರಾದರೂ ಜೈನ ಮತ್ತು ಬೌದ್ಧ ಮತಗಳಿಗೆ ಪ್ರೋತ್ಸಾಹ ನೀಡಿದ್ದರು . ಇದು ಅವರ ಪರಮತಸಹಿಷ್ಣುತೆಗೆ ಒಂದು ಉದಾಹರಣೆಯಾಗಿದೆ . ಸಮಾಜ ಸ್ತ್ರೀಯರಿಗೆ ಉನ್ನತ ಸ್ಥಾನವಿತ್ತು . ವರ್ಣಭೇದವಿರಲಿಲ್ಲ . ಯಾವ ವೃತ್ತಿಯನ್ನು ಬೇಕಾದರೂ ಅನುಸರಿಸಬಹುದಾಗಿತ್ತು . ವೃತ್ತಿಗನುಸಾರವಾಗಿ ಸಮಾಜದಲ್ಲಿ ನಾಲ್ಕು ವರ್ಗಗಳಿದ್ದವು . ಮಹಾರತಿ , ಮಹಾಭೋಜಕ , ಸೇನಾಪತಿ ಮುಂತಾದವರು ರಾಜಕೀಯ ಕಾರ್ಯಗಳಲ್ಲಿ ಮಗ್ನ ರಾಗಿದ್ದು ಮೊದಲನೇ ವರ್ಗದವರೆನಿಸಿಕೊಂಡರು . ಮಹಾಮಾತ್ಯ , ಅಮಾತ್ಯ , ಭಂಡಾರಿಕ , ನೈಗಾಮ ( ವರ್ತಕ ) , ಶ್ರೇಷ್ಠಿ ( ವ್ಯಾಪಾರ ಸಂಘಗಳ ಮುಖ್ಯಸ್ಥ ) ಮೊದಲಾದವರು ದ್ವಿತೀಯ ವರ್ಗಕ್ಕೆ ಸೇರಿದವರಾಗಿದ್ದರು . ಸುವರ್ಣಕಾರ ( Goldsmith ) , ಗ್ರಂಧಿಕ ( Druggist ) , ಹಾಲಕೀಯ ( Cultivator ) , ವೈದ್ಯ , ಲೇಖಕ ಮುಂತಾದವರು ಮೂರನೇ ವರ್ಗಕ್ಕೂ , ವರ್ಧಕಿ ( Carpenter ) , ಮಲಾಕಾರ ( Gardener ) , ಲೋಹವನಿಜ ( Blacksmith ) , ದಸಕ ( Fisherman ) ಮೊದಲಾದವರು ನಾಲ್ಕನೇ ವರ್ಗಕ್ಕೂ ಸೇರಿದವರಾಗಿದ್ದರು .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States