ಪೋಸ್ಟ್‌ಗಳು

ಫೆಬ್ರವರಿ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಯಾವನೋ ಬಾಲಿವುಡ್ ನಟನನ್ನು ಕೆಜಿಎಫ್ ಎರಡನೇ ಅಧ್ಯಾಯಕ್ಕೆ ಹಾಕಿಕೊಳ್ಳೊ ಅವಶ್ಯಕತೆ ಇತ್ತಾ?

ಇಮೇಜ್
ಯಾವನೋ ಬಾಲಿವುಡ್ ನಟನನ್ನು ಎರಡನೇ ಅಧ್ಯಾಯಕ್ಕೆ ಹಾಕಿಕೊಳ್ಳೊ ಅವಶ್ಯಕತೆ ಇತ್ತಾ? ಕೇವಲ ಕನ್ನಡನಟರೇ ಅಭಿನಯಿಸಿದ ಕೆಜಿಎಫ್ ಚಿತ್ರ ವಿಶ್ವಾದ್ಯಂತ ಹೆಸರು ದುಡ್ಡು ಎರಡು ಮಾಡಿತ್ತು! ಕೆಜಿಎಫ್ ೨ನೇ ಅಧ್ಯಾಯಕ್ಕೆ ಬೇಕಾಗೋ ಗಟ್ಟಿ ಅಡಿಪಾಯ ಕೆಜಿಎಫ್ ೧ನೇ ಅಧ್ಯಾಯ ಭದ್ರವಾಗೇ ಹಾಕಿದೆ! ಅದು ಅಲ್ಲದೇ ೧ನೇ ಅಧ್ಯಾಯ ಯಾವುದೇ ಬಾಲಿವುಡ್ ನಟನ ಮುಲಾಜಿಲ್ಲದೇನೆ ಉತ್ತರ ಭಾರತೀಯರನ್ನು ರಂಜಿಸಿದೆ ಹಾಗೂ ಮೆಚ್ಚಿಸಿದೇ ಕೂಡ! ಹೀಗಿದ್ದಾಗ ಯಾವನೋ ಬಾಲಿವುಡ್ ನಟನನ್ನು ಎರಡನೇ ಅಧ್ಯಾಯಕ್ಕೆ ಹಾಕಿಕೊಳ್ಳೊ ಅವಶ್ಯಕತೆ ಇತ್ತಾ? ಪ್ರಶಾಂತ ನೀಲ್‌ಗೆ ಇರೋ ಟ್ಯಾಲೆಂಟ್‌ಗೆ! ಕನ್ನಡದಲ್ಲೇ ಸಂಜಯ್ ದತ್ತನನ್ನ ಮೀರಿಸೋ ಕನ್ನಡದ ಹೊಸ ಕಲಾವಿದರನ್ನ ಹುಡುಕೋ ಚಾಣಕ್ಷತೆ ಪ್ರಶಾಂತ್ ನೀಲ್‌ರಿಗಿದೆ! ಭಾರತದ್ಯಾಂತ ಕೆಜಿಎಫ್ ೨ ಸೂಪರ್ ಡೂಪರ್ ಹಿಟ್ ಆಗೋದಂತು ಖಂಡಿತ! ಸುಮ್ಮನೆ ಸಂಜಯ ದತ್ತಗೆ ಸಕ್ಸಸ್ ಕ್ರೆಡಿಟ್ ಕೊಡೊದುಬೇಕಾ? ಸಂಜಯ ದತ್ ೨ನೇ ಅಧ್ಯಾಯದಲ್ಲಿ ನಟಿಸೊದ್ರಿಂದ ಸಂಜಯಗೆ  ಒಂದು ಹೆಸರು ಬರುತ್ತದೇಯೆ ಹೊರತು ಚಿತ್ರಕ್ಕೆ ಆಗಬೇಕಾಗಿರೋದು ಏನು ಇಲ್ಲ! -ಷಡ್ಯಂತ್ರಿ ಶಕುನಿ #ಕನ್ನಡಿಗ