ಪೋಸ್ಟ್‌ಗಳು

ಮಾರ್ಚ್, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಜಕೀಯ ಪ್ರೇರಿತ ಐಟಿ ದಾಳಿ ಅಂದ್ರೇನು? ಚುನಾವಣೆಗೆ ಮುನ್ನ ಈ ಐಟಿ ದಾಳಿಗಳು ಹೇಗೆ ಮತದಾರರನ್ನು ಪ್ರಭಾವಿಸಬಹುದು? ಮುಂದೆ ಓದಿ

ಇಮೇಜ್
ರಾಜಕೀಯ ಪ್ರೇರಿತ ಐಟಿ ದಾಳಿ ಅಂದ್ರೇನು? ಅವರು ಮೂರು ತಿಂಗಳು ಮಾಹಿತಿ ಸಂಗ್ರಹಿಸಿ ದಾಳಿ ಮಾಡ್ತಾರೆ.. ಅಷ್ಟಕ್ಕೂ ನೀವು ಪ್ರಾಮಾಣಿಕ ವ್ಯಕ್ತಿಯಾದರೆ ಯಾಕೆ ಭಯ ಪಡಬೇಕು? ಅಂತೆಲ್ಲಾ ಪ್ರಶ್ನೆ ಎತ್ತುತ್ತಿದ್ದಾರೆ.. ಜನ ಸಾಮಾನ್ಯರಿಗೆ ಹೌದಲ್ವಾ ಅನ್ನಿಸೋದು ಸಹಜ.. ವಾಸ್ತವ ಏನೆಂದರೆ... ಜನಸಾಮಾನ್ಯರಲ್ಲಿ ಯಾರದ್ದೇ ಮನೆಗೆ ಐಟಿ ದಾಳಿ ನಡೆದಿದೆ ಎಂದೊಡನೆ ಅಂತಹ ವ್ಯಕ್ತಿಯ ಬಗ್ಗೆ "ಅವನು ಕಳ್ಳ" ಅನ್ನುವ ಭಾವನೆ ಹುಟ್ಟಿಕೊಳ್ಳುತ್ತದೆ.. ಇದು ಮತದಾರನ ಮನಸ್ಸಿನ ಮೇಲೆ ಆಗುವ ಅತಿದೊಡ್ಡ ಪರಿಣಾಮ.. ಇದಕ್ಕೆ ನೀರು ಎರೆಯುವಂತೆ ಸುವರ್ಣ ನ್ಯೂಸ್ ತರಹದ ವಾಹಿನಿಗಳು ಒಂದಷ್ಟು ದುಡ್ಡಿನ ಬಂಡಲ್ ವೀಡಿಯೋ ತೋರಿಸಿ, ಇದು ಐಟಿ ದಾಳಿಯಲ್ಲಿ ವಶಪಡಿಸಿಕೊಂಡ ಹಣ ಅಂತಾ ಸುಳ್ಳು ಪ್ರಚಾರ ಮಾಡುತ್ತವೆ. ಯಾವ ಐಟಿ ದಾಳಿಯಲ್ಲೂ ಹೀಗೆ ಮಾಧ್ಯಮಗಳಿಗೆ ವಶಪಡಿಸಿಕೊಂಡ ಸ್ವತ್ತನ್ನು ಪ್ರದರ್ಶನ ಮಾಡುವ ಹಾಗಿಲ್ಲ.. ಮತ್ತು ಅಧಿಕಾರಿಗಳು ಹಾಗೆ ಮಾಡುವುದೂ ಇಲ್ಲ.. ಆದರೆ ಮತದಾರರ ಮನಸ್ಸಿನ ಮೇಲೆ ಈ ಅಭ್ಯರ್ಥಿ ಕಳ್ಳ ಎನ್ನುವ ಅಭಿಪ್ರಾಯವನ್ನು ಢಾಳಾಗಿ ಮೂಡಿಸಲಾಗುತ್ತದೆ. ಇನ್ನು ಆಗುವ ತೊಂದರೆ ಏನೆಂದರೆ ದಾಳಿಗೆ ಒಳಗಾದವರು ವಿವರಣೆ ಕೊಡಬೇಕಾದ ಕಾರಣಕ್ಕಾಗಿ ಐಟಿ ಇಲಾಖೆಗೆ ಅಲೆದಾಡಬೇಕಾಗುತ್ತದೆ.. ಹಾಗಾಗಿ ಮಾನಸಿಕ ಒತ್ತಡ ಮತ್ತು ಓಡಾಟದ ಕಾರಣದಿಂದ ಕ್ಷೇತ್ರದಲ್ಲಿ ಪ್ರಚಾರದ ಕೆಲಸಕ್ಕೆ ಗಮನ ಕೊಡಲು ಆಗಲ್ಲ.. ಇದೇ ಐಟಿ ದಾಳಿ ಮಾಡಿಸುವವರ ಉದ್ದೇಶ.. ...

ಈ ಚುನಾವಣೆ ಸೈದ್ಧಾಂತಿಕ ಚುನಾವಣೆ. ಈ ಚುನಾವಣೆಯಲ್ಲಿ ನಿಲುವು ತೆಗೆದುಕೊಳ್ಳದಿದ್ದರೆ ಮುಂದೆ ಹೋರಾಡಲು ಕನ್ನಡವೂ ಇರುವುದಿಲ್ಲ, ಕರ್ನಾಟಕವೂ ಇರುವುದಿಲ್ಲ.

ಇಮೇಜ್
ಈ ಚುನಾವಣೆ ಸೈದ್ಧಾಂತಿಕ ಚುನಾವಣೆ. ಈ ಚುನಾವಣೆಯಲ್ಲಿ ನಿಲುವು ತೆಗೆದುಕೊಳ್ಳದಿದ್ದರೆ ಮುಂದೆ ಹೋರಾಡಲು ಕನ್ನಡವೂ ಇರುವುದಿಲ್ಲ, ಕರ್ನಾಟಕವೂ ಇರುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲೇ ನಂಬಿಕೆ ಇಲ್ಲದ, ಭಾಷಾವಾರು ಪ್ರಾಂತ್ಯಗಳ ಬಗ್ಗೆ ನಂಬಿಕೆ ಇಲ್ಲದ, ಹಿಂದಿ ಹಾಗು ಸಂಸ್ಕೃತದ ಮೇಲರಿಮೆ ಕನ್ನಡವೆಂದರೆ ಕೀಳು ಎಂಬ ಮೌಢ್ಯ ತುಂಬಿರುವ ಒಂದು ಸಿದ್ಧಾಂತವಿರುವ ಪಕ್ಷಕ್ಕೆ ಮತ್ತೊಮ್ಮೆ ಬಹುಮತ ಬಂದರೆ ಮುಗಿಯಿತು. ಇವತ್ತಿನ ಸ್ವರೂಪದ ಕರ್ನಾಟಕವೂ ಇರುವುದಿಲ್ಲ, ಕನ್ನಡವಂತೂ ಅಡುಗೆ ಮನೆ ಭಾಷೆಯಾಗಿ ಹಿಂದಿ ಸಂಸ್ಕೃತಗಳ ಅಡಿಯಾಳಾಗಿ ಉಳಿಯುವುದು ಖಂಡಿತ. ಅದಕ್ಕೆ ಈ ಚುನಾವಣೆಯ ಸಂದರ್ಭದಲ್ಲಿ ನಾನು ಬಹಳ ಸ್ಪಷ್ಟವಾಗಿ ರಾಜಕೀಯ ನಿಲುವುಗಳನ್ನ ವ್ಯಕ್ತಪಡಿಸುತ್ತಿರುವುದು. ನಮ್ಮ ಮೆಟ್ರೋ ಹಿಂದಿ ಬೇಡ ಹೋರಾಟದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಕನ್ನಡದ ಸಾರ್ವಭೌಮತ್ವದ ಅವಶ್ಯಕತೆಯನ್ನೇ ಪ್ರಶ್ನೆ ಮಾಡಿದ ವ್ಯಕ್ತಿ ತೇಜಸ್ವಿ ಸೂರ್ಯ. ಕನ್ನಡದಷ್ಟೇ ಸ್ಥಾನ ಹಿಂದಿಗೂ ಕೊಡಿ ಬೆಂಗಳೂರಿನಲ್ಲಿ ಎಂದು ಪ್ರತಿಪಾದನೆ ಮಾಡಿದ ವ್ಯಕ್ತಿ ಇವನು. ಕನ್ನಡಕ್ಕೆ ಕನ್ನಡಿಗರಿಗೆ ಇದರಿಂದಾಗುವ ತೊಂದರೆಗಳ ಬಗ್ಗೆ ಅರಿವು ಇಲ್ಲದವ ನಿಮ್ಮ ಬಾಗಿಲಿಗೆ ವೋಟ್ ಕೇಳಲು ಬರಲಿದ್ದಾನೆ. ಬಿಡಬೇಡಿ ಪ್ರಶ್ನೆ ಮಾಡಿ. ನಾನು ಕನ್ನಡಿಗ ಹಾಗಾಗಿ ಭಾರತೀಯ, ಕರ್ನಾಟಕದಿಂದ ಭಾರತ ಎಂದು ನಂಬಿರುವ ಲಕ್ಷಾಂತರ ಕನ್ನಡಿಗರ ಆಶಯ ಕನ್ನಡ ಬಾವುಟವಾಗಿತ್ತು. ಕನ್ನಡಿಗರ ಕನ್ನಡದ ಐಡೆಂಟಿಟಿ ಬ...

ತಮಿಳಿನ 'ವಿಶ್ವಾಸಂ'ನ ಕನ್ನಡ ಅವತರಣಿಕೆ 'ಜಗಮಲ್ಲ' ಚಿತ್ರದ 'ಓ ನನ್ನ ಕಣ್ಣೇ' ಹಾಡು ಮೂಡಿಬಂದದ್ದು ಹೀಗೇ.....

ಇಮೇಜ್
ಓ ನನ್ನ ಕಣ್ಣೇ... ಮೂಲ ತಮಿಳಿನ ಹಾಡು ಹೊರಬಂದು, ಅದು ಸಾಕಷ್ಟು    ಮಂದಿಮೆಚ್ಚುಗೆ ಗಳಿಸುತ್ತಿತ್ತು. ಇದನ್ನು ಕನ್ನಡದಲ್ಲಿ ಡಬ್ ಮಾಡುವ ಹೊಣೆಗಾರಿಕೆ ನಮ್ಮ ಮೇಲಿತ್ತು. ಮುದ್ದಾದ, ಚೆಂದದ, ಆಳವಾದ  ಪದಗಳನ್ನು ಪೋಣಿಸುವ ಜವಾಬ್ದಾರಿಯನ್ನು ಹೃದಯ ಶಿವ ಅವರ ಹೆಗಲ ಮೇಲಿತ್ತು. ಹಾಡಿನ ಸಾಲುಗಳು ಚೆನ್ನಾಗಿ ಮೂಡಿಬರುತ್ತವೆ ಎಂಬುದರ ಮೇಲೆ ನನಗೆ ಯಾವ ಅನುಮಾನ ಇರಲಿಲ್ಲ. ಆದರೆ ಗೊಂದಲ ಇದ್ದದ್ದು ಯಾರಿಂದ ಹಾಡಿಸುವುದು ಎಂದು. ಹಲವಾರು ಹೆಸರುಗಳು ತಲೆಗೆ ಬಂದು ಹೋದವು. ಹುಡುಕಾಟ ಶುರುವಾಗಿತ್ತು. ಸಿನೆಮಾದ ಗೆಳೆಯರು ಹರಿಹರನ್, ಸಿದ್ ಶ್ರಿರಾಮ್, ಸೊನು ನಿಗಮ್ ಎಂದು ದೊಡ್ಡ ಪಟ್ಟಿಯನ್ನೇ ಕಣ್ಣೆದುರಿಗೆ ಇಟ್ಟರು. ಆದರೆ ಭೀಮಸೇನ್ ಜೋಶಿ ಸಂಗೀತ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದ ಸಿದ್ಧಾರ್ಥ್ ಬೆಳ್ಮಣ್ಣು ಅವರ ವೀಡಿಯೋ ಒಂದು ಯೂಟ್ಯೂಬಿನಲ್ಲಿ ನನ್ನ ಕಣ್ಣಿಗೆ ಬಿದ್ದಿತ್ತು.  ಜಗಮಲ್ಲ ಚಿತ್ರದ ಓ ನನ್ನ ಕಣ್ಣೇ ಹಾಡು ಅದ್ಯಾಕೋ ಈ ದನಿಯನ್ನೇ ಓ ನನ್ನ ಕಣ್ಣೇ ಹಾಡಿಗೆ ಬೇಕೆನಿಸಿತು. ಅದೇ ಯೋಚನೆಯಲ್ಲಿದ್ದಾಗ ತಂಡದ ಗೆಳೆಯರೂ ಆ ಹೆಸರು ಸೂಚಿಸಿದರು, ಟಗರು, ಪುಷ್ಪಕ‌ವಿಮಾನದ ಹಾಡುಗಳನ್ನು ನೆನಪಿಸಿದರು. ಅಲ್ಲಿಗೆ ನನ್ನ ತೀರ್ಮಾನವನ್ನು ಗಟ್ಟಿಮಾಡಿಕೊಂಡೆ.  ಹಾಡನ್ನು ಹಾಡಿಸಲು ಇನ್ನು ಒಂದು‌ ಗಂಟೆ ಇದೇ ಅನ್ನುವವರೆಗೂ ಸಿದ್ಧಾರ್ಥ್ ಬಂದು ಎರಡು ಸಾಲು ಹಾಡುವವರೆಗೂ ನನಗೆ ಕೊಂಚ ದಿಗಿಲಿತ್ತು....