ತಮಿಳಿನ 'ವಿಶ್ವಾಸಂ'ನ ಕನ್ನಡ ಅವತರಣಿಕೆ 'ಜಗಮಲ್ಲ' ಚಿತ್ರದ 'ಓ ನನ್ನ ಕಣ್ಣೇ' ಹಾಡು ಮೂಡಿಬಂದದ್ದು ಹೀಗೇ.....
ಓ ನನ್ನ ಕಣ್ಣೇ...
ಮೂಲ ತಮಿಳಿನ ಹಾಡು ಹೊರಬಂದು, ಅದು ಸಾಕಷ್ಟು ಮಂದಿಮೆಚ್ಚುಗೆ ಗಳಿಸುತ್ತಿತ್ತು. ಇದನ್ನು ಕನ್ನಡದಲ್ಲಿ ಡಬ್ ಮಾಡುವ ಹೊಣೆಗಾರಿಕೆ ನಮ್ಮ ಮೇಲಿತ್ತು. ಮುದ್ದಾದ, ಚೆಂದದ, ಆಳವಾದ ಪದಗಳನ್ನು ಪೋಣಿಸುವ ಜವಾಬ್ದಾರಿಯನ್ನು ಹೃದಯ ಶಿವ ಅವರ ಹೆಗಲ ಮೇಲಿತ್ತು. ಹಾಡಿನ ಸಾಲುಗಳು ಚೆನ್ನಾಗಿ ಮೂಡಿಬರುತ್ತವೆ ಎಂಬುದರ ಮೇಲೆ ನನಗೆ ಯಾವ ಅನುಮಾನ ಇರಲಿಲ್ಲ. ಆದರೆ ಗೊಂದಲ ಇದ್ದದ್ದು ಯಾರಿಂದ ಹಾಡಿಸುವುದು ಎಂದು. ಹಲವಾರು ಹೆಸರುಗಳು ತಲೆಗೆ ಬಂದು ಹೋದವು. ಹುಡುಕಾಟ ಶುರುವಾಗಿತ್ತು. ಸಿನೆಮಾದ ಗೆಳೆಯರು ಹರಿಹರನ್, ಸಿದ್ ಶ್ರಿರಾಮ್, ಸೊನು ನಿಗಮ್ ಎಂದು ದೊಡ್ಡ ಪಟ್ಟಿಯನ್ನೇ ಕಣ್ಣೆದುರಿಗೆ ಇಟ್ಟರು. ಆದರೆ ಭೀಮಸೇನ್ ಜೋಶಿ ಸಂಗೀತ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದ ಸಿದ್ಧಾರ್ಥ್ ಬೆಳ್ಮಣ್ಣು ಅವರ ವೀಡಿಯೋ ಒಂದು ಯೂಟ್ಯೂಬಿನಲ್ಲಿ ನನ್ನ ಕಣ್ಣಿಗೆ ಬಿದ್ದಿತ್ತು.
ಅದ್ಯಾಕೋ ಈ ದನಿಯನ್ನೇ ಓ ನನ್ನ ಕಣ್ಣೇ ಹಾಡಿಗೆ ಬೇಕೆನಿಸಿತು. ಅದೇ ಯೋಚನೆಯಲ್ಲಿದ್ದಾಗ ತಂಡದ ಗೆಳೆಯರೂ ಆ ಹೆಸರು ಸೂಚಿಸಿದರು, ಟಗರು, ಪುಷ್ಪಕವಿಮಾನದ ಹಾಡುಗಳನ್ನು ನೆನಪಿಸಿದರು. ಅಲ್ಲಿಗೆ ನನ್ನ ತೀರ್ಮಾನವನ್ನು ಗಟ್ಟಿಮಾಡಿಕೊಂಡೆ. ಹಾಡನ್ನು ಹಾಡಿಸಲು ಇನ್ನು ಒಂದು ಗಂಟೆ ಇದೇ ಅನ್ನುವವರೆಗೂ ಸಿದ್ಧಾರ್ಥ್ ಬಂದು ಎರಡು ಸಾಲು ಹಾಡುವವರೆಗೂ ನನಗೆ ಕೊಂಚ ದಿಗಿಲಿತ್ತು. ನಮ್ಮ ಸೌಂಡ್ ಇಂಜಿನಿಯರ್ ವಾಸುದೇವನ್ ಹಾಗೂ ಹೃದಯ ಶಿವ 👍 ಹೀಗಂದ ಮೇಲೆ ಅರ್ಧ ಜೀವ ಬಂದಿದ್ದು.
ಈ ಹಾಡಿನ ಲಿರಿಕಲ್ ವೀಡಿಯೋ ಇಲ್ಲಿದೆ, ನೋಡಿ ಅನಿಸಿಕೆ ತಿಳಿಸಿ.
-ರತೀಶ್ ರತ್ನಾಕರ್ (ಹರಿವು ಕ್ರೀಯೆಷನ್ಸ್)
-ರತೀಶ್ ರತ್ನಾಕರ್ (ಹರಿವು ಕ್ರೀಯೆಷನ್ಸ್)
#ಡಬ್ಬಿಂಗ್_ಇದು_ಕನ್ನಡಪರ
#ಜಗಮಲ್ಲ # JagaMalla
#ಜಗಮಲ್ಲ # JagaMalla
Best keep up your work....Kannada intaha saparde yalli uliyabekandre..Dubbing beku illandre hosaki hogi bidutte
ಪ್ರತ್ಯುತ್ತರಅಳಿಸಿ