ರಾಜಕೀಯ ಪ್ರೇರಿತ ಐಟಿ ದಾಳಿ ಅಂದ್ರೇನು? ಚುನಾವಣೆಗೆ ಮುನ್ನ ಈ ಐಟಿ ದಾಳಿಗಳು ಹೇಗೆ ಮತದಾರರನ್ನು ಪ್ರಭಾವಿಸಬಹುದು? ಮುಂದೆ ಓದಿ


ರಾಜಕೀಯ ಪ್ರೇರಿತ ಐಟಿ ದಾಳಿ ಅಂದ್ರೇನು? ಅವರು ಮೂರು ತಿಂಗಳು ಮಾಹಿತಿ ಸಂಗ್ರಹಿಸಿ ದಾಳಿ ಮಾಡ್ತಾರೆ.. ಅಷ್ಟಕ್ಕೂ ನೀವು ಪ್ರಾಮಾಣಿಕ ವ್ಯಕ್ತಿಯಾದರೆ ಯಾಕೆ ಭಯ ಪಡಬೇಕು? ಅಂತೆಲ್ಲಾ ಪ್ರಶ್ನೆ ಎತ್ತುತ್ತಿದ್ದಾರೆ.. ಜನ ಸಾಮಾನ್ಯರಿಗೆ ಹೌದಲ್ವಾ ಅನ್ನಿಸೋದು ಸಹಜ..

ವಾಸ್ತವ ಏನೆಂದರೆ...
ಜನಸಾಮಾನ್ಯರಲ್ಲಿ ಯಾರದ್ದೇ ಮನೆಗೆ ಐಟಿ ದಾಳಿ ನಡೆದಿದೆ ಎಂದೊಡನೆ ಅಂತಹ ವ್ಯಕ್ತಿಯ ಬಗ್ಗೆ "ಅವನು ಕಳ್ಳ" ಅನ್ನುವ ಭಾವನೆ ಹುಟ್ಟಿಕೊಳ್ಳುತ್ತದೆ.. ಇದು ಮತದಾರನ ಮನಸ್ಸಿನ ಮೇಲೆ ಆಗುವ ಅತಿದೊಡ್ಡ ಪರಿಣಾಮ..
ಇದಕ್ಕೆ ನೀರು ಎರೆಯುವಂತೆ ಸುವರ್ಣ ನ್ಯೂಸ್ ತರಹದ ವಾಹಿನಿಗಳು ಒಂದಷ್ಟು ದುಡ್ಡಿನ ಬಂಡಲ್ ವೀಡಿಯೋ ತೋರಿಸಿ, ಇದು ಐಟಿ ದಾಳಿಯಲ್ಲಿ ವಶಪಡಿಸಿಕೊಂಡ ಹಣ ಅಂತಾ ಸುಳ್ಳು ಪ್ರಚಾರ ಮಾಡುತ್ತವೆ. ಯಾವ ಐಟಿ ದಾಳಿಯಲ್ಲೂ ಹೀಗೆ ಮಾಧ್ಯಮಗಳಿಗೆ ವಶಪಡಿಸಿಕೊಂಡ ಸ್ವತ್ತನ್ನು ಪ್ರದರ್ಶನ ಮಾಡುವ ಹಾಗಿಲ್ಲ.. ಮತ್ತು ಅಧಿಕಾರಿಗಳು ಹಾಗೆ ಮಾಡುವುದೂ ಇಲ್ಲ.. ಆದರೆ ಮತದಾರರ ಮನಸ್ಸಿನ ಮೇಲೆ ಈ ಅಭ್ಯರ್ಥಿ ಕಳ್ಳ ಎನ್ನುವ ಅಭಿಪ್ರಾಯವನ್ನು ಢಾಳಾಗಿ ಮೂಡಿಸಲಾಗುತ್ತದೆ.
ಇನ್ನು ಆಗುವ ತೊಂದರೆ ಏನೆಂದರೆ ದಾಳಿಗೆ ಒಳಗಾದವರು ವಿವರಣೆ ಕೊಡಬೇಕಾದ ಕಾರಣಕ್ಕಾಗಿ ಐಟಿ ಇಲಾಖೆಗೆ ಅಲೆದಾಡಬೇಕಾಗುತ್ತದೆ.. ಹಾಗಾಗಿ ಮಾನಸಿಕ ಒತ್ತಡ ಮತ್ತು ಓಡಾಟದ ಕಾರಣದಿಂದ ಕ್ಷೇತ್ರದಲ್ಲಿ ಪ್ರಚಾರದ ಕೆಲಸಕ್ಕೆ ಗಮನ ಕೊಡಲು ಆಗಲ್ಲ..
ಇದೇ ಐಟಿ ದಾಳಿ ಮಾಡಿಸುವವರ ಉದ್ದೇಶ.. ರಾಜಕೀಯ ಪ್ರೇರಿತ ಹಾಗಾಗಿ ರಾಜಕೀಯವಾಗಿ ಎದುರಿಸಿದರೆ ಮಾತ್ರಾ ಉಳಿಗಾಲ.
– ಆನಂದ್ ಗುರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States