ನಮ್ಮ ನಾಡಿನ ತುಳು ನುಡಿಯ ಲಿಪಿ ಮತ್ತು ತಿಗಳಾರಿ ಲಿಪಿಯ ಬಗ್ಗೆ ತಿಳಿಯಬೇಕಿರುವ ಮಾಹಿತಿ

ತುಳು ಲಿಪಿ ಕರ್ನಾಟಕದ ಪಶ್ಚಿಮ ಕರಾವಳಿಯ ದಕ್ಷಿಣಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡಿನ ವರೆಗೆ ಇರುವ ಪ್ರದೇಶದಲ್ಲಿ ತುಳುವರು ವಾಸಿಸುತ್ತಾರೆ . ತುಳು ಭಾಷೆಯಲ್ಲಿ ಮೊದಲು ಸಿಕ್ಕಿರುವ ತುಳು ವರ್ಣಮಾಲೆ ಕೃತಿಯು ಕ್ರಿ . ಶ . ಸು . ೧೬೩೦ರಲ್ಲಿ ಬರೆದ ' ಶ್ರೀ ಭಾಗವತೋ ' ಗ್ರಂಥವಾಗಿದೆ . ಇದನ್ನು ಬರೆದವನು ವಿಷ್ಣುತುಂಗ ಎಂಬುವವನು . ಸಾಮಾನ್ಯವಾಗಿ ಈ ಪ್ರದೇಶದಲ್ಲಿ ರಚಿತವಾಗಿರುವ ಕೃತಿಗಳ ಭಾಷೆ ಯಾವುದಾದರೂ ಲಿಪಿ ಸಾಮಾನ್ಯವಾಗಿ ಕನ್ನಡ ಅಥವಾ ತಿಗಳಾರಿ ಬಳಕೆಯಾಗಿದೆ . ಆದರೆ ವಿಮತುಂಗನು ಬರೆದಿರುವ ಭಾಗವತದ ಹಸ್ತಪ್ರತಿ ತುಳು ಭಾಷೆ ಮತ್ತು ಲಿಪಿಯಲ್ಲಿದೆಯೆಂದು ಹಾಗೂ ಈ ಕೃತಿಯನ್ನು ಪ್ರತಿ ಮಾಡಿದ ಕಾಲ ಕ್ರಿ . ಶ . ೧೮೭೦ ಇರಬಹುದೆಂದು ಕೃತಿಯ ಸಂಪಾದಕರು ಊಹಿಸಿರುತ್ತಾರೆ . ಲೇಖಕರು ಈ ಲಿಪಿಯನ್ನು ತುಳು ಲಿಪಿ ಎಂದು ಕರೆದಿದ್ದರೂ ಈ ಲಿಪಿಯು ತಮಿಳುನಾಡಿನಲ್ಲಿ ಬಳಕೆಯಲ್ಲಿದ್ದ ಗ್ರಂಥಲಿಪಿಯ ಇನ್ನೊಂದು ರೂಪವಾದ ಆರ್ಯಎಳುತ್ತು ' ಲಿಪಿಯು ಅಲ್ಪ ಸ್ವಲ್ಪ ಬದಲಾವಣೆಯೇ ಆಗಿದೆ . ಕ್ರಿ . ಶ . ೧೩೮೯ರಲ್ಲಿ ಬರೆದ ದೂತವಾಕ್ಯವೇ ಆರಎಳುತ್ತಿನ ಪ್ರಾಚೀನ ತಾಳೆಗರಿ ಗ್ರಂಥ . ಮುಂದೆ ಕ್ರಿ . ಶ . ೧೬೭೮ ರಿಂದ ೧೭೦೩ರ ಮಧ್ಯ ಹಾಲೆಂಡ್‌ನಲ್ಲಿ ಆರ್ಯ ಎತ್ತಿನಲ್ಲಿ ಪುಸ್ತಕವನ್ನು ಮುದ್ರಿಸಲಾಯಿತು . ಮುಂದೆ ಕೇರಳದಲ್ಲಿ ೧೯ನೆಯ ಶತಮಾನದಲ್ಲಿ ಸಾರ್ವತ್ರಿಕವಾಗಿ ಈ ಲಿಪಿಯ ಬಳಕೆಯಾಗಿ ಉಳಿದ ಲಿಪಿಗಳನ್ನು ಬಿಡಲಾಯಿತು . ಕೇ...