ಭಾರತವೆಂದರೆ ಹಿಂದಿ , ಇಂಗ್ಲಿಶ್ ಎರಡೇ ಅಲ್ಲ : ಭಾಷಾ ನೀತಿ ಬದಲಾಗಲಿ
ಭಾರತಕ್ಕೆ ಬ್ರಿಟಿಷರಿಂದ ಬಿಡುಗಡೆ ಸಿಕ್ಕಿದ ಹೊತ್ತಿನಲ್ಲಿ ಮತ್ತು ತದನಂತರವೂ ಅತ್ಯಂತ ಕಾವಿನ ಚರ್ಚೆಗೊಳಗಾದ ವಿಷಯ ಭಾರತದಂತಹ ಹಲನುಡಿಗಳ ಒಕ್ಕೂಟಕ್ಕೆ ಎಂತಹ ಭಾಷಾನೀತಿ ಇರಬೇಕು ಎಂಬುದು . ಇಷ್ಟೊಂದು ವೈವಿಧ್ಯತೆ ಇರುವ ಈ ದೇಶಕ್ಕೆ ಒಂದು ಸಾಮಾನ್ಯ ನುಡಿ ಬೇಕು ಮತ್ತದು ದಾಸ್ಯದ ಸಂಕೇತವಾದ ಇಂಗ್ಲಿಶ್ ಆಗಿರಬಾರದು ಅನ್ನುವ ನಿಲುವಿನಿಂದಾಗಿ ಇಂಗ್ಲಿಶ್ ಮತ್ತು ದೇಶದ ಇತರೆಲ್ಲ ಭಾಷೆಗಳನ್ನು ಕೈಬಿಟ್ಟು ಕೇವಲ ಹಿಂದಿಗೆ ಮನ್ನಣೆ ನೀಡುವ ಪ್ರಯತ್ನ 60ರ ದಶಕದಲ್ಲಿ ನಡೆಯಿತು . ಇದರಿಂದ ಆಡಳಿತ , ಉದ್ಯೋಗ , ಕಲಿಕೆಯ ಅವಕಾಶಗಳಲ್ಲಿ ಹಿಂದಿ ಭಾಷಿಕರಿಗೆ ಹೆಚ್ಚಿನ ಅನುಕೂಲ ದೊರೆತು ಇತರರು ವಂಚಿತರಾಗುವ ಸಂದರ್ಭ ಕಾಣಿಸಿದಾಗ ದೊಡ್ಡ ಮಟ್ಟದಲ್ಲಿ ಹಿಂದಿಯೇತರ ಭಾಷಿಕರ ವಿರೋಧದಿಂದಾಗಿ ಇಂಗ್ಲಿಶ್ ಅನ್ನು ಹಿಂದಿಯ ಜೊತೆ ಇರಿಸಿಕೊಂಡ ನೀತಿ ಕೇಂದ್ರ ಸರ್ಕಾರದ ಅಧಿಕೃತ ಭಾಷಾ ನೀತಿಯಾಯಿತು . ಆದರೆ ಈ ನೀತಿ ನಿಜಕ್ಕೂ ಪ್ರಜಾಪ್ರಭುತ್ವದ ಪರವಾಗಿದೆಯೇ ? ವ್ಯವಸ್ಥೆಗೂ ಜನರಿಗೂ ಇರುವ ಅಂತರವನ್ನು ಕಡಿಮೆ ಮಾಡುವುದೇ ಪ್ರಜಾಪ್ರಭುತ್ವದ ಗೆಲುವಿಗೆ ಇರುವ ಹಾದಿ ಅಂತಾದರೆ ಈಗಿರುವ ಭಾಷಾನೀತಿ ಆ ಕೆಲಸ ಮಾಡಲಾಗುವಂತದ್ದೇ ಎಂದು ಗಮನಿಸಿದಾಗ ಭಾರತದ ಭಾಷಾ ನೀತಿ ಬದಲಾಗಬೇಕಾದ ಅಗತ್ಯ ಮನವರಿಕೆಯಾಗುತ್ತದೆ . - - : : . :
ಕೇಂದಕ್ಕೆ ಇಂಗ್ಲಿಶ್ , ಹಿಂದಿ ಸಾಕಾಗಲ್ವಾ ?
ಆಯಾ ರಾಜ್ಯಗಳಿಗೆ ಅವರ ಭಾಷೆಯಲ್ಲಿ ಆಡಳಿತದ ಅವಕಾಶವಿದೆ ಹಾಗೆ ಕೇಂದ್ರ ಇಂಗ್ಲಿಶ್ , ಹಿಂದಿಯಲ್ಲಿ ಆಡಳಿತ ನಡೆಸುತ್ತೆ . ಇದರಿಂದ ಯಾರಿಗೆ ತೊಂದರೆ ಆ ಅನುವ ವಾದ ಒಂದು ಸರಿಯೆನಿಸುವ ತಪ್ಪು ವಾದ , ಯಾಕೆ ಅನ್ನುವುದನ್ನು ಆರ್ಗ ಮಾಡಿಕೊಳ್ಳಲು ಭಾರತದ ಆಡಳಿತ ವ್ಯವಸ್ಥೆಯನ್ನು ನಮ್ಮ ಸಂವಿಧಾನ ಹೇಗೆ ಕೇಂದ ಮತ್ತು ರಾಜ್ಯಗಳ ನಡುವೆ ಹೇಗೆ ಹಂಚಿದೆ ಅನ್ನುವುದನ್ನು ತಿಳಿದುಕೊಳ್ಳಬೇಕು . ನಮ್ಮ ಸಂವಿಧಾನದಲ್ಲಿ ಆಡಳಿತದ ವಿಷಯಗಳನ್ನು ಕೇಂದ್ರ , ರಾಜ್ಯ ಮತ್ತು ಜಂಟಿ ಹೀಗೆ ಮೂರು ಪಟ್ಟಿಗಳಲ್ಲಿ ವಿಂಗಡಿಸಲಾಗಿದೆ . ಇಲ್ಲಿ ಕೇಂದ್ರ ಮತ್ತು ರಾಜ್ಯದ ಪಟ್ಟಿಯಲ್ಲಿರುವ ವಿಷಯಗಳ ಬಗ್ಗೆ ಕಾನೂನು ರೂಪಿಸುವ ಅಧಿಕಾರ ಕ್ರಮವಾಗಿ ಕೇಂದ್ರ ಮತ್ತು ರಾಜ್ಯದ ಸರ್ಕಾರಗಳಿಗಿದ್ದರೆ , ಜಂಟಿ ಪಟ್ಟಿಯಲ್ಲಿರುವ ವಿಷಯಗಳ ಮೇಲೆ ಕಾನೂನು ರೂಪಿಸುವ ಅಧಿಕಾರ ಕೇಂದ್ರ ಮತ್ತು ರಾಜ್ಯ ಇಬ್ಬರಿಗೂ ಕಲ್ಪಿಸಲಾಗಿದೆ . ಒಂದು ವೇಳೆ ಕೇಂದ್ರ ಮತ್ತು ರಾಜ್ಯದ ನಡುವೆ ಜಂಟಿ ಪಟ್ಟಿಯಲ್ಲಿರುವ ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದಂತ ಭಿನ್ನಾಭಿಪ್ರಾಯ ಬಂದಲ್ಲಿ ಕೇಂದ್ರದ ಮಾತೇ ಅಂತಿಮ ಅನ್ನುವ ಮಾತನ್ನು ಹೇಳಲಾಗಿದೆ . ಅಷ್ಟಲ್ಲದೇ ರಾಜ್ಯದ ಪಟ್ಟಿಯಲ್ಲಿರುವ ಯಾವುದೇ ವಿಷಯವನ್ನು ಜಂಟಿ ಪಟ್ಟಿಗೆ ಸೇರಿಸಿ ಕೇಂದ್ರದ ವ್ಯಾಪ್ತಿಗೆ ತೆಗೆದುಕೊಳ್ಳುವ ಅಧಿಕಾರವೂ ಕೇಂದ್ರಕ್ಕಿದೆ . ಹೀಗಿರುವ ಅಧಿಕಾರ ಹಂಚಿಕೆಯಿಂದಾಗಿ ಭಾರತದ ವ್ಯವಸ್ಥೆ ಅತಿಯಾಗಿ ಕೇಂದ್ರ ಸರ್ಕಾರದ - ಪರ ವಾಲಿದೆ . ಇದರ ಜೊತೆಯಲ್ಲೇ ಆದಾಯ ತೆರಿಗೆ , ಕಾರ್ಪೊರೇಶನ್ ತೆರಿಗೆ ಹೀಗೆ ಹೆಚ್ಚಿನ ದೊಡ್ಡ ಆರ್ಥಿಕ ಸಂಪನ್ಮೂಲಗಳೆಲ್ಲವೂ ಕೇಂದ್ರದ ತೆಕ್ಕೆಯಲ್ಲಿವೆ . ಇದರಿಂದಾಗಿ ಜನರ ಜೀವನದ ಮೇಲೆ ರಾಜ್ಯಕ್ಕಿಂತ ಕೇಂದ್ರದ ಪ್ರಭಾವ ಮತ್ತು ಶಕ್ತಿ ವ್ಯಾಪಕವಾಗಿದೆ . ಈ ಕಾರಣದಿಂದಲೇ ಕೇಂದ್ರ ಸರ್ಕಾರದ ಭಾಷಾ ನೀತಿ ಮಹತ್ವ ಪಡೆದುಕೊಳ್ಳುತ್ತ . ಇವತ್ತಿನ ದಿನ ಹತ್ತಾರು ಬ್ಯಾಂಕುಗಳು , ವಿಮೆ , ಅಂಚೆ , ರೈಲು , ರಸ್ತೆ ಸಂಪರ್ಕ , ಏಮಾನಸೇವೆ , ತೆರಿಗೆ , ಪಿಂಚಣಿ ಹೀಗೆ ಜನಸಾಮಾನ್ಯರು ದಿನನಿತ್ಯ ಬಳಸುವ ಹತ್ತಾರು ನಾಗರೀಕ ಸೇವೆಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ , ಆದರೆ ಕೇಂದ್ರದ ಭಾಷಾ ನೀತಿ ಕೇವಲ ಹಿಂದಿ ಮತ್ತು ಇಂಗ್ಲಿಶಿಗೆ ಮನ್ನಣೆ ನೀಡುರುವುದರಿಂದ ಈ ಎಲ್ಲ ಸೇವೆಗಳಲ್ಲಿ ಇತರೆ ಭಾಷೆಗಳು ಕಡೆಗಣನೆಗೆ ಒಳಗಾಗುತ್ತಿವೆ . ಕರ್ನಾಟಕದ ಹೆಚ್ಚಿನ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಣ್ಮರೆಯಾಗುತ್ತಿರುವುದಕ್ಕೆ ಈ ಭಾಷಾ ನೀತಿಯೇ ಕಾರಣವಾಗಿದೆ .
ಸಂಸತ್ತು ಎಲ್ಲರದಾಗಲಿ:
ಇನ್ನು ಇದೆಲ್ಲ ಒಂದು ತರವಾದರೆ ಭಾರತದ ಸಂಸತ್ತು ಅನ್ನುವ ಎಲ್ಲ ನುಡಿ ಜನರ ಸೇರುವ ವೇದಿಕೆಯಲ್ಲಿ ಹಿಂದಿ / ಇಂಗ್ಲಿಶೇತರ ನುಡಿಗಳ ಪರಿಸ್ಥಿತಿ ಹೇಗಿದೆ ಎಂದು ನೋಡಿದ ವೈವಿಧ್ಯತೆಯನ್ನು ವರದಂತೆ ಕಾಣದೇ ಶಾಪದಂತೆ ನೋಡಲಾಗುತ್ತಿದೆಯೇ ಅನ್ನು ಭಾವನೆ ಹುಟ್ಟಬಹುದು . ಸಂವಿಧಾನದ ಆರ್ಟಿಕಲ್ 129 ( 1 ) ರ ಪ್ರಕಾರ ಸಂಸತ್ತಿನಲ್ಲಿ ಬಳಕಯ ಮನ್ನಣೆ ಇರುವುದು ಕೇವಲ ಇಂಗ್ಲಿಶ್ ಮತ್ತು ಹಿಂದಿ ಎರಡೇ ನುಡಿಗಳಿಗೆ , ಇನ್ನಾವುದೇ ನುಡಿಯಾಡುವವರು ತಮ್ಮ ನುಡಿ ಬಳಸಲು ಸಂಸತ್ತಿನ ಸ್ಪೀಕರ್ ಅನುಮತಿ ಪಡೆಯಬೇಕು ಅನ್ನುವ ಕಟ್ಟಲೆ ಮಾಡಲಾಗಿದೆ . ಇತ್ತೀಚೆಗೆ ಆಂಧ್ರದ ರಾಜ್ಯಸಭೆ ಸದಸ್ಯ - ನಂದಮೂರಿ ಹರಿಕೃಷ್ಣ ರಾಜ್ಯಸಭೆಯಲ್ಲಿ ತೆಲಂಗಾಣದ ವಿಷಯದಲ್ಲಿ ತೆಲುಗಿನಲ್ಲಿ ಮಾತನಾಡಿದಾಗ ತೆಲುಗು ಅನುವಾದಕರಿಲ್ಲ , ತೆಲುಗು ಅನುವಾದಕರು ಬೇಕೆಂದು ಮೊದಲೇ ತಿಳಿಸಬೇಕಿತ್ತು ಎಂದು ಅವರ ಮಾತನ್ನು ಸ್ಪೀಕರ್ ತಡೆದಿದ್ದಲ್ಲದೇ ಇತರ ಸದಸ್ಯರು ಅವರನ್ನು ತಮಾಷೆ ಮಾಡಿದ ಪ್ರಸಂಗ ನಡೆಯಿತು . ಒಬ್ಬ ಸದಸ್ಯನಾಗಿ ತೆಲುಗು ನಾಡಿನ ಭಾವನಾತ್ಮಕ ವಿಷಯವೊಂದನ್ನು ತೆಲುಗಿನಲ್ಲಿ ಪ್ರಸ್ತಾಪಿಸಲು ಭಾರತದ ಸಂಸತ್ತು ಅವಕಾಶ ಕೊಡಲ್ಲ ಅಂದರೆ ತೆಲುಗನಾದವನಿಗೆ ಸಿಗುವ ಗೌರವ ಇದೇನಾ ? ಎಂದು ಅವರು ಖಾರವಾಗಿ ಕೇಳಿದ್ದನ್ನು ಇಲ್ಲಿ ನೆನೆಯಬಹುದು . ಒಮ್ಮೆ ಯೋಚಿಸಿ . ಸಂಸತ್ತಿನಲ್ಲಿ ಒಂದು ಗಹನವಾದ ಚರ್ಚೆ ನಡೆಯುವಾಗ ಒಬ್ಬ ಸದಸ್ಯನಿಗೆ ಆ ಕ್ಷಣದಲ್ಲಿ ತನ್ನ ಮುಡಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಬೇಕು ಎಂದೆನಿಸಿದರೂ ಅನುವಾದಕರು ಬೇಕು ಎಂದು ಮೊದಲೇ ತಿಳಿಸಿಲ್ಲ ಅನ್ನುವ ಕಾರಣಕ್ಕೆ ಆತ ಹಾಗೆ ಮಾಡುವಂತಿಲ್ಲ ಅನ್ನುವುದು ಒಂದು ರೀತಿಯಲ್ಲಿ ಪ್ರಜಾಪ್ರಭುತ್ವವನ್ನೇ ಅಣಕವಾಡಿದಂತೆ ಅನ್ನಿಸುವುದಿಲ್ಲವೇ ? ತಂತ್ರಜ್ಞಾನ ಇಷ್ಟು ಮುಂದುವರೆದಿರುವ ಕಾಲದಲ್ಲಿ ಯುರೋಪಿನ ಸಂಸತ್ತಿನಲ್ಲಿದ್ದಂತೆ ಮಾತನಾಡಿದ ತಕ್ಷಣವೇ ಒಕ್ಕೂಟದ ಎಲ್ಲ ಭಾಷೆಗಳಲ್ಲೂ ಮರುನುಡಿಯುವ ವ್ಯವಸ್ಥೆ ನಮ್ಮ ಸಂಸತ್ತಿನಲ್ಲಿ ಕಲ್ಪಿಸಲು ಅಸಾಧ್ಯವೇ ? ಸಾಧ್ಯವಿದೆ , ಆದರೆ ಅದಕ್ಕೆ ಮೊದಲು ಭಾಷಾ ನೀತಿ ಬದಲಾಗಬೇಕು .
ಬದಲಾಗಬೇಕು ಭಾರತದ ಭಾಷಾ ನೀತಿಯ
ಯುರೋಪಿನಲ್ಲಿ ಭಾಷೆಯ ಸುತ್ತಲಿನ ಹಗೆ ಎರಡನೆಯ ಮಹಾಯುದ್ಧದಲ್ಲಿ ಕಂಡು ಕೇಳರಿಯದ ವಿನಾಶ ತಂದಿತು . ಅದರಿಂದ ಎಚ್ಚೆತ್ತ ಯುರೋಪ್ ಯುರೋಪಿಯನ್ ಒಕ್ಕೂಟ ಕಟ್ಟಿ ಅದಕ್ಕೊಂದು ಭಾಷಾ ನೀತಿ ರೂಪಿಸಿದಾಗ ಯುರೋಪಿನ ಎಲ್ಲ 23 ನುಡಿಗಳಿಗೂ ಅಧಿಕೃತ ಸ್ಥಾನಮಾನ ಕಲ್ಪಿಸಿತು . ಅದರ ಹಿಂದಿದ್ದದ್ದು ಸಮಾನತೆಯ ನೆಲೆಗಟೊಂದೇ ಯುರೋಪಿಯನ್ನರಲ್ಲಿ ಎಂದೂ ಒಡೆಯದ ಒಗ್ಗಟ್ಟು ತರಲು ಸಾಧ್ಯ ಅನ್ನುವ ತಿಳುವಳಿಕೆ , ಭಾರತದಲ್ಲಿ ಯುರೋಪಿಗಿಂತಲೂ ಹೆಚ್ಚು ವೈವಿಧ್ಯತೆ ಇದೆ . ಈ ವೈವಿಧ್ಯತೆ ಉಳಿಯಬೇಕು , ಬೆಳೆಯಬೇಕು ಮತ್ತು ಅದನ್ನು ಸಾಧ್ಯವಾಗಿಸುವಂತಹ ಭಾಷಾ ನೀತಿ ಭಾರತಕ್ಕೆ ಬೇಕು , ಆ ದಿಕ್ಕಿನಲ್ಲಿ ಯೋಚಿಸಿದಾಗ ಕಾಣುವ ಮೊದಲ ಕೆಲಸವೇ ಭಾರತದ ಭಾಷಾ ನೀತಿಗೆ ತಿದ್ದುಪಡಿ ತಂದು ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲ 22 ನುಡಿಗಳಿಗೂ ಅಧಿಕೃತ ಭಾಷೆಯ ಸ್ಥಾನಮಾನ ಕಲ್ಪಿಸುವುದು . ಆ ಮೂಲಕ ' ಆಡಳಿತ , ಕಲಿಕೆ , ಮಾರುಕಟ್ಟೆ ಉದ್ಯೋಗ ಹೀಗೆ ಎಲ್ಲ ವಿಷಯಗಳಲ್ಲೂ ಎಲ್ಲ ಭಾಷಿಕರಿಗೂ ಸಮಾನ ಅವಕಾಶ , ಸಮಾನ ಗೌರವ ಕಲ್ಪಿಸುವ ಕೆಲಸ ಆದ್ಯತೆಯ ಮೇಲಾಗಬೇಕು . ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ರಾಜಕೀಯ ಪಕ್ಷಗಳು ಈ - ತಿದ್ದುಪಡಿಗೆ ಒತ್ತಾಯಿಸುವ ಕೆಲಸವನ್ನು ತಮ್ಮ ಪ್ರಣಾಳಿಕೆಯ ಮೂಲಕ ಮಾಡುವಂತಾಗಲಿ .
-ವಸಂತ್ ಶೆಟ್ಟಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ