ಕುಡಿತವನ್ನು ನಮಗೆ ಅರಿವಿಲ್ಲದೆ "ಪರವಾಗಿಲ್ಲ ಬಿಡಿ, ಈಗೆಲ್ಲ ನಡಿಯುತ್ತೆ" ಅನ್ನಿಸುವಂತೆ ಮಾಡುವ ಕನ್ನಡ ಸಿನಿಮಾ ಹಾಡುಗಳು
ಕನ್ನಡ ಸಿನೆಮಾಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕುಡಿತವನ್ನು ನಾರ್ಮಲೈಸ್ ಮಾಡುವ ಎಷ್ಟೊಂದು ಹಾಡುಗಳು ಬರುತ್ತಿವೆ. ಕೆಲವು ಜನಪ್ರಿಯ ಹಾಡುಗಳು:
೧> ಎಣ್ಣೆ ನಮ್ಮದು ಊಟ ನಿಮ್ಮದು
೨> ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ಎಣ್ಣೆ ಹೊಡೆದವು ಉಳಿತಾವ
೩> ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
೪> ನಾವು ಮನೆಗೆ ಹೋಗೊದಿಲ್ಲ.
೫> ಒಪನ್ ದಿ ಬಾಟಲ್
೬> ಎಣ್ಣೆನೂ ಸೋಡಾನೂ ಎಂತಹ ಒಳ್ಳೆ ಫ್ರೆಂಡು
ಯುಟ್ಯೂಬ್ ಅಲ್ಲಿ ಈ ಎಲ್ಲ ಹಾಡುಗಳಿಗೂ ಲಕ್ಷಗಟ್ಟಲೇ ನೋಟಗಳಿವೆ. ಚಿಕ್ಕ ಚಿಕ್ಕ ಮಕ್ಕಳಿಗೂ ಈ ಹಾಡುಗಳು ಪರಿಚಿತವಾಗಿವೆ. ಆದರೆ ಆಳದಲ್ಲಿ ಇವೆಲ್ಲವೂ ಕುಡಿಯುವುದು very desirable, very normal ಅನ್ನುವ ಸಂದೇಶವನ್ನು ಬಹಳ subtle ಆಗಿ ತುಂಬುತ್ತಿವೆ ಅಂತ ನನಗೆ ಅನ್ನಿಸುತ್ತೆ.
ಕುಡಿತ ನಿಷೇಧಿಸಬೇಕು ಅನ್ನುವ ನಿಲುವು ನನ್ನದಲ್ಲ. ಅದನ್ನು ಮಾಡಿದ ತಕ್ಷಣ ಅದು ಕಳ್ಳಭಟ್ಟಿ ಮಾಡುವುದಕ್ಕೂ, ಹೊರ ರಾಜ್ಯಗಳಿಂದ ಕದ್ದು ಮಾರಾಟಕ್ಕೂ, ಕಳ್ಳಭಟ್ಟಿಯ ದುರಂತಗಳಿಗೂ ಕಾರಣವಾಗುತ್ತೆ. ಸರ್ಕಾರಕ್ಕೆ ಅಬಕಾರಿಯಿಂದ ಬರುವ ಹದಿನೆಂಟು ಸಾವಿರ ಕೋಟಿ ಆದಾಯಕ್ಕೂ ಹೊಡೆತ ಬೀಳುತ್ತೆ. ರಾಜ್ಯ ಸರ್ಕಾರದ ಕೈಯಲ್ಲಿ ತನ್ನದೇ ಆದಾಯಕ್ಕೆ ಅಂತ ಇರುವ ಮೂಲಗಳೇ ಕಡಿಮೆ, ಇರುವ ಕೆಲವು ಮೂಲಗಳು ಜಿ.ಎಸ್.ಟಿ ಹೆಸರಲ್ಲಿ ಕಿತ್ತುಕೊಳ್ಳಲಾಗಿದೆ. ಅದರಲ್ಲಿ ಅಬಕಾರಿಯ ಆದಾಯವೂ ಹೊರಟರೆ ಸರ್ಕಾರ ನಡೆಸುವುದೇ ಕಷ್ಟವಾಗುತ್ತೆ. ಕುಡಿತದ ಕೆಡುಕುಗಳ ಬಗ್ಗೆ ಏನಿದ್ದರೂ ಜಾಗೃತಿ ಮೂಡಿಸುವ ಹಾದಿಯೊಂದೇ ಹೆಚ್ಚು ಸೂಕ್ತವಾದದ್ದು. ಆಕಸ್ಮಿಕ ಚಿತ್ರದಲ್ಲಿ ಅಣ್ಣಾವ್ರು "ಬಾಳುವಂತ ಹೂವೆ ಬಾಡುವಾಸೆ ಏಕೆ?" ಅಂತ ಕುಡಿತದ ಕೆಡಕುಗಳ ಬಗ್ಗೆ ಹಾಡಿದರೆ ಎಷ್ಟೋ ಜನ ಕುಡಿತ ಬಿಡುವ ಬದಲಾವಣೆ ಆಯ್ತು ಅಂತ ಒಮ್ಮೆ ಓದಿದ್ದೆ. ನಮ್ಮ ಸಿನೆಮಾದವರಿಗೆ ಅಲ್ಕೋಹಾಲಿಿಸಂ ಪ್ರೋತ್ಸಾಹಿಸುವ ಹಾಡುಗಳನ್ನು ಕಡಿಮೆ ಮಾಡ್ರಪ್ಪ ಅಂತ ಯಾರಾದ್ರೂ ಹೇಳಬೇಕು.
- ವಸಂತ್ ಶೆಟ್ಟಿ

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ