ನಮ್ಮ ನಾಡಿನ ತುಳು ನುಡಿಯ ಲಿಪಿ ಮತ್ತು ತಿಗಳಾರಿ ಲಿಪಿಯ ಬಗ್ಗೆ ತಿಳಿಯಬೇಕಿರುವ ಮಾಹಿತಿ

ತುಳು ಲಿಪಿ 

ಕರ್ನಾಟಕದ ಪಶ್ಚಿಮ ಕರಾವಳಿಯ ದಕ್ಷಿಣಕನ್ನಡ ಜಿಲ್ಲೆ ಮತ್ತು ಕೇರಳದ ಕಾಸರಗೋಡಿನ ವರೆಗೆ ಇರುವ ಪ್ರದೇಶದಲ್ಲಿ ತುಳುವರು ವಾಸಿಸುತ್ತಾರೆ . ತುಳು ಭಾಷೆಯಲ್ಲಿ ಮೊದಲು ಸಿಕ್ಕಿರುವ
ತುಳು ವರ್ಣಮಾಲೆ

ಕೃತಿಯು ಕ್ರಿ . ಶ . ಸು . ೧೬೩೦ರಲ್ಲಿ ಬರೆದ ' ಶ್ರೀ ಭಾಗವತೋ ' ಗ್ರಂಥವಾಗಿದೆ . ಇದನ್ನು ಬರೆದವನು ವಿಷ್ಣುತುಂಗ ಎಂಬುವವನು . ಸಾಮಾನ್ಯವಾಗಿ ಈ ಪ್ರದೇಶದಲ್ಲಿ ರಚಿತವಾಗಿರುವ ಕೃತಿಗಳ ಭಾಷೆ ಯಾವುದಾದರೂ ಲಿಪಿ ಸಾಮಾನ್ಯವಾಗಿ ಕನ್ನಡ ಅಥವಾ ತಿಗಳಾರಿ ಬಳಕೆಯಾಗಿದೆ . ಆದರೆ ವಿಮತುಂಗನು ಬರೆದಿರುವ ಭಾಗವತದ ಹಸ್ತಪ್ರತಿ ತುಳು ಭಾಷೆ ಮತ್ತು ಲಿಪಿಯಲ್ಲಿದೆಯೆಂದು ಹಾಗೂ ಈ ಕೃತಿಯನ್ನು ಪ್ರತಿ ಮಾಡಿದ ಕಾಲ ಕ್ರಿ . ಶ . ೧೮೭೦ ಇರಬಹುದೆಂದು ಕೃತಿಯ ಸಂಪಾದಕರು ಊಹಿಸಿರುತ್ತಾರೆ . ಲೇಖಕರು ಈ ಲಿಪಿಯನ್ನು ತುಳು ಲಿಪಿ ಎಂದು ಕರೆದಿದ್ದರೂ ಈ ಲಿಪಿಯು ತಮಿಳುನಾಡಿನಲ್ಲಿ ಬಳಕೆಯಲ್ಲಿದ್ದ ಗ್ರಂಥಲಿಪಿಯ ಇನ್ನೊಂದು ರೂಪವಾದ ಆರ್ಯಎಳುತ್ತು ' ಲಿಪಿಯು ಅಲ್ಪ ಸ್ವಲ್ಪ ಬದಲಾವಣೆಯೇ ಆಗಿದೆ . ಕ್ರಿ . ಶ . ೧೩೮೯ರಲ್ಲಿ ಬರೆದ ದೂತವಾಕ್ಯವೇ ಆರಎಳುತ್ತಿನ ಪ್ರಾಚೀನ ತಾಳೆಗರಿ ಗ್ರಂಥ . ಮುಂದೆ ಕ್ರಿ . ಶ . ೧೬೭೮ ರಿಂದ ೧೭೦೩ರ ಮಧ್ಯ ಹಾಲೆಂಡ್‌ನಲ್ಲಿ ಆರ್ಯ ಎತ್ತಿನಲ್ಲಿ ಪುಸ್ತಕವನ್ನು ಮುದ್ರಿಸಲಾಯಿತು . ಮುಂದೆ ಕೇರಳದಲ್ಲಿ ೧೯ನೆಯ ಶತಮಾನದಲ್ಲಿ ಸಾರ್ವತ್ರಿಕವಾಗಿ ಈ ಲಿಪಿಯ ಬಳಕೆಯಾಗಿ ಉಳಿದ ಲಿಪಿಗಳನ್ನು ಬಿಡಲಾಯಿತು .

ಕೇರಳದ ಸತತ ಸಂಪರ್ಕ ಹೊಂದಿದ ತುಳು ಜನರು ತಮ್ಮ ಭಾಷೆಗೆ ಈ ಆರ್ಯಎಳುತ್ತನ್ನು ಅಲ್ಪ ಸ್ವಲ್ಪ ಬದಲಾವಣೆಗಳೊಂದಿಗೆ ಸ್ವೀಕರಿಸಿದರು . ಬರೊಲ್ಲನ ಪ್ರಕಾರ ಮಲೆಯಾಳ ಮತ್ತು ತುಳು ಲಿಪಿಗಳು ಒಂದೇ ತರಹ ಇದ್ದರೂ ಕೈ ಬರೆವಣಿಗೆಯಿಂದ ಭಿನ್ನವೆಂಬಂತೆ ಕಾಣುತ್ತವೆ . ಆದರೆ ಸರಿಯಾಗಿ ಗಮನಿಸಿದಾಗ ತಿಗಳಾರಿಯ ಅಲ್ಪ ಬೇಧದಿಂದ ಈ ತುಳು ಲಿಪಿ ಉದಿಸಿದೆ . ಏಕೆಂದರೆ ಈ ಪ್ರದೇಶದಲ್ಲಿ ತಿಗಳಾರಿ ಲಿಪಿಯು ವ್ಯಾಪಕ ಪ್ರಚಾರದಲ್ಲಿತ್ತು . 

ತಿಗಳಾರಿ ಲಿಪಿ

ಈ ಲಿಪಿಯು ಬಹು ಹಿಂದಿನಿಂದಲೂ ಕರ್ನಾಟಕದಲ್ಲಿ ಬಳಕೆಯಲ್ಲಿದೆ . ತಡಮಾಲಂಗಿ ಶಾಸನದಲ್ಲಿ ತಿಗುಳಾರ' ಲಿಪಿಯನ್ನು ಬಾಲಬೋಧನೆಯಲ್ಲಿ ಕಲಿಸುತ್ತಿದ್ದ ಸಂಗತಿ ಇದೆ . ಬಹುಶಃ ಇದು ಗ್ರಂಥಲಿಪಿಯಿರಬಹುದು . ತಿಗುಳ ಎಂದರೆ ತಮಿಳರು ಎಂದರ್ಥ . ಈ ಭಾಷೆಯ ಬ್ರಾಹ್ಮಣರು ಬಳಸುವುದೇ ತಿಗುಳಾರ , ( ಆರ = ಬ್ರಾಹ್ಮಣ ) ಇದೇ ತಿಗಳಾರಿ ಎಂದು ನಾಮಕರಣಗೊಂಡಿದೆ . ಮಲಬಾರಿನಲ್ಲಿ ಆರ್ಯಎಳುತ್ತು ಬಳಕೆಯಲ್ಲಿತ್ತು . ಆರಎಳುತ್ತು ಎಂದರೆ ಸಂಸ್ಕೃತ ಗ್ರಂಥಗಳಿಗೆ ಬಳಸುವ ಗ್ರಂಥಲಿಪಿ ( ಅರ್ಥಾತ್ ತಮಿಳುನಾಡಿನ ಲಿಪಿ ) , ಕರ್ನಾಟಕದ ಮಲೆನಾಡಿನ ಪ್ರದೇಶದಲ್ಲಿ ಇದರ ಬಳಕೆ ಹೆಚ್ಚಾಗಿತ್ತು . ಇದೇ ಮುಂದೆ ಬಳಕೆ ಹೆಚ್ಚಾಗಿ ತಿಗಳಾರಿ , ಮಲೆಯಾಳ ಮತ್ತು ತುಳು ಲಿಪಿಗೆ ಮೂಲವಾಯಿತು . 

ತುಳು ಲಿಪಿಗೂ ತಿಗಳಾರಿಗೂ ಇರುವ ವ್ಯತ್ಯಾಸ ತೀರಾ ಕಡಿಮೆ . ತಿಗಳಾರಿಯು ತುಳು ಲಿಪಿಗಿಂತ ಸ್ವಲ್ಪ ವೃತ್ತಾಕಾರವಾಗಿದೆ . ತುಳು ಲಿಪಿಯನ್ನು ಬಲ್ಲವನು ತಿಗಳಾರಿಯನ್ನೂ ತಿಗಳಾರಿಯನ್ನು ಬಲ್ಲವನು ತುಳುಲಿಪಿಯನ್ನೂ ಸರಾಗವಾಗಿ ಓದಬಲ್ಲ , 
ತಿಗಳಾರಿ ಲಿಪಿ ಮಧ್ಯೆ ಬಳಸಿರುವ ಅಂಕೆಗಳು ಕನ್ನಡದಿಂದ ಪಡೆದವು . ಒಟ್ಟಿನಲ್ಲಿ ಈ ಲಿಪಿಯು ಕನ್ನಡದ ಪ್ರಭಾವಕ್ಕೆ ಸಿಕ್ಕಿ ಅಕ್ಷರಗಳನ್ನು ಗುಂಡಾಗಿಸಿಕೊಂಡಿರಬೇಕು . ಈ ಲಿಪಿಯನ್ನು ಮುಖ್ಯವಾಗಿ ಸಂಸ್ಕೃತ ಗ್ರಂಥಗಳನ್ನು ಬರೆಸಬೇಕೆಂಬ ಉದ್ದೇಶದಿಂದ ಬಳಸಿರುವುದು . ಹೀಗಾಗಿ ಸಂಸ್ಕೃತ ವರ್ಣಮಾಲೆಯಲ್ಲಿರುವ ಅಕ್ಷರಗಳೆಲ್ಲಾ ಇದರಲ್ಲಿವೆ . 
ಸ್ವರಗಳು                      ೧೨ 
ಅನುಸ್ವಾರ , ವಿಸರ್ಗ         ೨ 
ವರ್ಗೀಯ ವ್ಯಂಜನ        ೨೫ 
ಅವರ್ಗೀಯ ವ್ಯಂಜನ     ೧೧
ಒಟ್ಟು                            ೫೦ ಅಕ್ಷರಗಳು 

ಅವರ್ಗಿಯಲ್ಲಿ ಕ್ಷ ಮತ್ತು ಜ್ಞ ಸೇರಿವೆ . 

೧೮೦೭ರಲ್ಲಿ ಮುಂಬಯಿಯಲ್ಲಿ ತಿಗಳಾರಿಯಲ್ಲಿ ಪುಸ್ತಕವೊಂದು ಮುದ್ರಿತವಾಗಿದೆ . ಇದು ತಿಗಳಾರಿ ವ್ಯಾಪಕ ಪ್ರಚಾರದಲ್ಲಿತ್ತೆಂಬುದನ್ನು ತಿಳಿಸುತ್ತದೆ . ತಿಗಳಾರಿ ಲಿಪಿಯಲ್ಲಿ ಧಾರ್ಮಿಕ ಗ್ರಂಥಗಳೇ ಅಲ್ಲದೆ ಅನೇಕ ನಿರೂಪಗಳನ್ನು ಬರೆಯಲಾಗಿದೆ . ಇತ್ತೀಚೆಗೆ ಈ ಲಿಪಿಯನ್ನು ಓದುವವರ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States