ದೇಶಕ್ಕೊಂದು ಭಾಷೆ ಬೇಕು ಮತ್ತದು ಹಿಂದಿಯೇ ಆಗಬೇಕು ಅಂತೆಲ್ಲ ಹಾರಡುವ ಮೂರ್ಖ ಮಠ್ಠಾಳರಿಗೆ ಕಿವಿ ಮಾತು!
"ಭಾರತದ ನಾಗರೀಕತೆ ಐದು ಸಾವಿರ ವರ್ಷ ಹಳೆಯದಾದದ್ದು ಅಂತ ಅಂದಾಗ ಆ ಐದು ಸಾವಿರ ವರ್ಷಗಳ ಕಾಲವೂ ಅದು ಯಾವುದೇ ಲಿಂಕ್ ಲ್ಯಾಂಗ್ವೇಜ್ ಇರದೇ, ಯಾವುದೋ ಒಂದು ಭಾಷೆಯ ಮೂಲಕ ಬೆಳೆದು ಬಂದ ನಾಗರೀಕತೆ ಅಲ್ಲ ಅನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಇಷ್ಟು ನೆನಪಿಟ್ಟುಕೊಂಡರೆ ದೇಶಕ್ಕೊಂದು ಭಾಷೆ ಬೇಕು ಮತ್ತದು ಹಿಂದಿಯೇ ಆಗಬೇಕು ಅಂತೆಲ್ಲ ಹೊರಡುವುದು ಮೂರ್ಖತನ ಅಂತ ಅರ್ಥ ಆಗಬಹುದು.
ದೇಶಕ್ಕೊಂದು ಭಾಷೆ ಬೇಕು ಅಂತಲೇ ಆದರೆ ಅದು ಎಲ್ಲ ಭಾಷಿಕರಿಗೂ ಸಮಾನ ದೂರವಿರುವ, ಸಮಾನ ಅನುಕೂಲ ಮತ್ತು ಅನಾನುಕೂಲ ಕಲ್ಪಿಸುವ ಭಾಷೆಯೇ ಆಗಬೇಕು. ಆಗ ಮಾತ್ರ ಯಾವುದೋ ಒಂದು ಭಾಷಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿ ಉಳಿದವರಿಗೆ ಅನ್ಯಾಯ ಮಾಡುವಂತಹ ಆಡಳಿತ, ಉದ್ಯೋಗ ಮತ್ತು ಕಲಿಕೆಯ ವ್ಯವಸ್ಥೆ ಏರ್ಪಡುವುದಿಲ್ಲ. ಇವತ್ತಿನ ದಿನ ಅಂತಹ ಯೋಗ್ಯತೆ ಯಾರು ಒಪ್ಪಲಿ, ಬಿಡಲಿ ಇಂಗ್ಲಿಷೇ ಪಡೆದುಕೊಳ್ಳುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಾ ಅಂತ ಕೇಳಿದರೆ ಇಲ್ಲ ಅಂತಲೇ ನನ್ನ ಉತ್ತರ. ಇಂಗ್ಲಿಷ್ ಪಡೆಯುವ ಸ್ಥಾನವನ್ನು ಭಾರತದ ಭಾಷೆಗಳು ಪಡೆದುಕೊಳ್ಳುವಂತಹ ಬೆಳವಣಿಗೆ ಆಗಬೇಕು, ಆದರೆ ಅದಕ್ಕೆ ಬೇಕಾದ ಕೆಲಸವನ್ನು ಮಾಡದೇ ಬರೀ ಹಾರೈಸುವುದರಿಂದ ಅದು ಸಾಧ್ಯವಾಗದು.
https://m.facebook.com/story.php?story_fbid=2311953505564363&id=1313513028741754
ಎಲ್ಲ ಭಾರತದ ಭಾಷೆಗಳಿಗೂ ಕೇಂದ್ರದ ಅಧಿಕೃತ ಭಾಷೆಯ ಸ್ಥಾನಮಾನ ಕೊಟ್ಟು, ಆಯಾ ರಾಜ್ಯದಲ್ಲಿ ಜನರಿಗಾಗಿ ಕೇಂದ್ರ ಸರ್ಕಾರ ಕಲ್ಪಿಸುವ ಎಲ್ಲ ಸೇವೆಗಳು ಅಲ್ಲಿನ ಸ್ಥಳೀಯ ಭಾಷೆಯಲ್ಲಿ ಇರುವಂತೆ ನೋಡಿಕೊಂಡು, ಆಯಾ ರಾಜ್ಯದಲ್ಲಿ ಕೊನೆಯ ಪಕ್ಷ 75% ಕೇಂದ್ರ ಸರ್ಕಾರಿ ಉದ್ಯೋಗಗಳು ಅಲ್ಲಿನ ಸ್ಥಳೀಯ ಪ್ರತಿಭೆಗಳಿಗೆ ಸಿಗುವಂತೆ ಮಾಡಿ, ಸಾವಿರಾರು ವರ್ಷಗಳಿಂದ ಭಾಷೆಗಳ ಜೊತೆಯಲ್ಲೇ ಬೆಳೆದು ನಿಂತಿರುವ ನಮ್ಮ ನಮ್ಮ ಗುರುತುಗಳನ್ನು ಎತ್ತಿ ಹಿಡಿಯುವ, ಆದರಿಸುವ ಭಾಷಾ ನೀತಿ ಬಂದಾಗ ಭಾಷೆಗಳ ನಡುವಿನ ಈ ಎಲ್ಲ ಮನಸ್ತಾಪಗಳು ಬಗೆಹರಿಯುತ್ತವೆ. ಹಿಂದಿಯವನು, ಕನ್ನಡಿಗನು, ತಮಿಳನು, ಗುಜರಾತಿಯು, ಬೆಂಗಾಲಿಯೂ, ಮಿಜೊ ಭಾಷಿಕನು ಎಲ್ಲರೂ ಸಮಾನರು, ಸಮಾನ ಅವಕಾಶಗಳನ್ನು ಪಡೆದವರು ಅಂತ ಆದಾಗ ಅವರ ನಡುವಿನ ಒಗ್ಗಟ್ಟು, ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಬಹುದು. ಈ ರೀತಿ ಮಾಡದೇ ಉದ್ಯೋಗದಲ್ಲಿ, ಕಲಿಕೆಯಲ್ಲಿ, ಆಡಳಿತದಲ್ಲಿ ನಿಮ್ಮ ಭಾಷೆಯ ಸ್ಥಾನವನ್ನು ಹಿಂದಿ ಪಡೆಯಲಿ ಅಂತ ಹೊರಟರೆ ಅದರಿಂದ ತೊಂದರೆಯೇ ಹೆಚ್ಚು ಅನ್ನುವುದು ಮನವರಿಕೆಯಾಗಲಿ.
ಭಾರತದ ಭಾಷೆಗಳನ್ನು ಹೇಗೆ ನಿಭಾಯಿಸಬೇಕು ಅನ್ನುವ ಬಗ್ಗೆ ಒಂದು ಸಮಗ್ರವಾದ ಲೋಕದೃಷ್ಟಿ ಬೆಳೆಸಿಕೊಳ್ಳದೇ ಹೋದಲ್ಲಿ ಭಾಷಾ ನೀತಿಯ ವಿವಾದ ಇನ್ನೂ ಐವತ್ತು ವರ್ಷ ಹೋದರೂ ಬಗೆಹರಿಯದು. ಇದರ ನಡುವೆ ಹೆಚ್ಚುತ್ತಿರುವ ಉತ್ತರದ ಜನಸಂಖ್ಯೆಯ ಬೆಳವಣಿಗೆ ದರ, ಕುಸಿಯುತ್ತಿರುವ ದಕ್ಷಿಣದ ಜನಸಂಖ್ಯೆಯ ದರ, ಆರ್ಥಿಕ ಮತ್ತು ರಾಜಕೀಯದ ಅಧಿಕಾರದ ಕೇಂದ್ರಿಕರಣ, ಲೋಕಸಭೆಯ ಪ್ರತಿನಿಧಿತ್ವ ಜನಸಂಖ್ಯೆಗೆ ಅನುಗುಣವಾಗಿ ಬದಲಾದಲ್ಲಿ ದಕ್ಷಿಣ ಭಾರತಕ್ಕೆ ಆಗಲಿರುವ ಹಾನಿ ಇದೆಲ್ಲವನ್ನೂ ಗಮನಿಸಿದಾಗ ಈ ಸಮಗ್ರ ದೃಷ್ಟಿಯ ಭಾಷಾ ನೀತಿ ತುರ್ತಾಗಿಯೇ ಆಗಬೇಕು. ಇಲ್ಲದಿದ್ದಲ್ಲಿ ಇನ್ನೂ ಹತ್ತು ವರ್ಷದಲ್ಲಿ ಈ ಸಮಸ್ಯೆ ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆದು ತೊಂದರೆಗಳು ಹೆಚ್ಚಾಗುತ್ತೆ. ಇವತ್ತಿನ ಕ್ಲೈಮೇಟ್ ಕ್ರೈಸಿಸ್, international world order ಅಲ್ಲಿ ಆಗುತ್ತಿರುವ ಪಲ್ಲಟಗಳು, Deglobalisation ಇತ್ಯಾದಿ ಬೆಳವಣಿಗೆಗಳು ಒಡ್ಡುವ ಅಪಾರ ಒತ್ತಡ ಎದುರಿಸಲು ಭಾರತ ಸಜ್ಜಾಗಲು ನಮ್ಮೊಳಗಿನ ಇಂತಹ ವ್ಯತ್ಯಾಸಗಳು ಶಾಂತಿಯುತವಾಗಿ, ಸಮಾನತೆಯ ನೆಲೆಯಲ್ಲಿ ಬಗೆಹರಿಯಬೇಕಾದದ್ದು ಬಹಳ ಮುಖ್ಯ.
#SundayThoughts
- ವಸಂತ ಶೆಟ್ಟಿ (ಬನವಾಸಿ ಬಳಗ)

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ