ತಮ್ಮ ಉದ್ಯೋಗವನ್ನು ಬೇರೆಯವರಿಗೆ ಬಿಟ್ಟುಕೊಟ್ಟು! ಬೀದಿಗೆ ಬರಲು ತಯಾರಾಗಿರುವ ಕನ್ನಡಿಗರು!

ಕನ್ನಡಿಗರ ಕೈ ತಪ್ಪುತ್ತಿವೆ ಬ್ಯಾಂಕ್ ಉದ್ಯೋಗಗಳು....... ಅರವತ್ತು ಮತ್ತು ಎಪ್ಪತ್ತರ ದಶಕಗಳಲ್ಲಿ, ಎಲ್ಲಿ ನೋಡಿದರೂ ಬ್ಯಾಂಕ್‍ಗ¼ಲ್ಲಿ ಕನ್ನಡಿಗರದೇ ಪಾರುಪತ್ಯ. ಒಂದೆರಡು ದಶಕಗಳ ಕಾಲ ಇದು ಮುಂದುವರಿಯಿತು. ದಕ್ಷಿಣ ಭಾರತದ ತುದಿಯಿಂದ ಭಾರತದ ಉದ್ದಗಲಕ್ಕೂ ವಿವಿಧ ಬ್ಯಾಂಕ್‍ಗಳಲ್ಲಿ ಕನ್ನಡಿಗರು ಕಾಣಸಿಗುತ್ತಿದ್ದರು. ಕರ್ನಾಟಕದಲ್ಲೇ ಹುಟ್ಟಿ ಬೆಳೆದ ಬ್ಯಾಂಕ್‍ಗಳು ದೇಶದ ಮೂಲೆ ಮೂಲೆಯಲ್ಲೂ ತಮ್ಮ ಶಾಖೆಗಳನ್ನು ತೆರೆದು ವಿಸ್ತರಣೆಗೆ ಮುಂದಾದಾಗ ಸೇವಾ ಜೇಷ್ಠತೆಯ ಆಧಾರದ ಮೇಲೆ ಹಲವೆಡೆ ಕನ್ನಡಿಗ ಸಿಬ್ಬಂದಿಗಳನ್ನೇ ವರ್ಗಾವಣೆ ಮಾಡಲಾಗಿತ್ತು. ಬ್ಯಾಂಕ್ ರಾಷ್ಟ್ರೀಕರಣದ ಉದ್ದೇಶಗಳಲ್ಲಿ ದೇಶದ ಮೂಲೆ ಮೂಲೆಗೂ ಬ್ಯಾಂಕಿಂಗ್ ಸೌಲಭ್ಯ ವಿಸ್ತರಿಸುವುದು ಪ್ರಮುಖವಾಗಿತ್ತು. ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‍ಗಳು ತಮ್ಮ ಪ್ರಾದೇಶಿಕ ವ್ಯಾಪ್ತಿಯನ್ನು ಮೀರಿ ಶಾಖಾ ವಿಸ್ತರಣೆಗೆ ಮುಂದಾದವು. ಸೀಮಿತ ವರ್ಗದವರಿಗೆ ಸಿಗುತ್ತಿದ್ದ ಬ್ಯಾಂಕ್ ಸೌಲಭ್ಯವನ್ನು ಬಳಸಲು ಜನಸಾಮಾನ್ಯರೂ ಮುಂದಾದಾಗ ಸ್ಥಳೀಯರ ಭಾಷೆಯಲ್ಲಿ ವ್ಯವಹರಿಸುವುದು ಬ್ಯಾಂಕ್‍ಗಳಿಗೆ ಅನಿವಾರ್ಯವಾಯಿತು. ಹೀಗಾಗಿ ರಾಜ್ಯವಾರು ನೇಮಕಾತಿ ಪ್ರಕ್ರಿಯೆಗೆ ಚಾಲನೆ ಸಿ...