ಬೆಂಗಳೂರು ಯಾಕೆ ಸಿಂಗಾಪುರ ಆಗಲ್ಲ ಅಂತಂದ್ರೆ....

ಸಿಂಗಾಪುರಕ್ಕೆ ಒಮ್ಮೆ ಹೋಗಿದ್ದಾಗ ಅಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಚ್ಚುಕಟ್ಟುತನ, ಸಮಯಪಾಲನೆ, ಒಂದು ಮಗುವಿನಿಂದ ಹಿಡಿದು ಒಬ್ಬ ವಯಸ್ಸಾದವರೆಗೆ ಎಲ್ಲರಿಗೂ ಅನುಕೂಲ ಕಲ್ಪಿಸುವ ಯೋಚನೆ ಕಂಡು ಬೆರಗಾಗಿದ್ದೆ. ಅಲ್ಲಿನ ರಸ್ತೆಗಳಲ್ಲಿ ಖಾಸಗಿ ವಾಹನಗಳನ್ನು ಓಡಿಸುವುದು ಬಹು ಖರ್ಚಿನ ಬಾಬತ್ತಾಗಿಸಿದ್ದ ಸರ್ಕಾರ ಪ್ರತಿಯೊಬ್ಬರು ಸಾರ್ವಜನಿಕ ಸಾರಿಗೆಯನ್ನು ಬಯಸಿ ಬಳಸುವಂತೆ ಏರ್ಪಾಡುಗಳನ್ನು ಕಟ್ಟಿದೆ. ಅಲ್ಲಿ ವರ್ಷಕ್ಕೆ ಸಾವಿರ ಖಾಸಗಿ ವಾಹನಗಳನ್ನು ರಸ್ತೆಗೆ ಇಳಿಸಬಹುದು, ಕಾರೆನೋ ಕೊಳ್ಳಬಹುದು, ಆದರೆ ಅದರ ರೆಜಿಸ್ಟ್ರೇಶನ್ ಮಾಡಿಸಲು ಪರ್ಮಿಟ್ ಅನ್ನು ಹರಾಜಿನಲ್ಲಿ ಕೊಳ್ಳಬೇಕು. ಅಲ್ಲಿಗೆ ಹತ್ತು ಲಕ್ಷದ ಕಾರು ಕೊಂಡು ರಸ್ತೆಗೆ ತರಲು ಒಂದು ಕೋಟಿ ಖರ್ಚು ಅಂತ ಕೇಳ್ಪಟ್ಟೆ. ಒಟ್ಟಾರೆ ಜನರನ್ನು ಖಾಸಗಿ ವಾಹನದ ಮಾಲಿಕತ್ವದಿಂದ ದೂರ ಇಡಬೇಕು ಅನ್ನುವುದು ಅಲ್ಲಿನ ಸರ್ಕಾರದ ಆಲೋಚನೆ. ಬೆಂಗಳೂರಲ್ಲಿ ರಸ್ತೆಯ ಕ್ಯಾಪಾಸಿಟಿ ಇರೋದು 7.5 ಲಕ್ಷ ವಾಹನಗಳಿಗೆ, ಆದರೆ ರಸ್ತೆಯ ಮೇಲಿರೋದು 70 ಲಕ್ಷಕ್ಕೂ ಹೆಚ್ಚು ವಾಹನಗಳು. ಸಾರ್ವಜನಿಕ ಸಾರಿಗೆಯನ್ನು ಅತ್ಯದ್ಭುತವಾಗಿ ಕಟ್ಟಬೇಕು, ಖಾಸಗಿ ವಾಹನಗಳ ಬಳಕೆ ಕಡಿಮೆಯಾಗಿಸಬೇಕು, ಆ ಮೂಲಕ ಮಾಲಿನ್ಯ, ಟ್ರಾಫಿಕ್ ಕಡಿಮೆ ಮಾಡಬೇಕು ಅನ್ನುವ ಆಸಕ್ತಿ ಹಿಂದಿನಿಂದ ಇಂದಿನ ಯಾವ ಸರ್ಕಾರಗಳಿಗೂ ಇಲ್ಲ. ಅದಕ್ಕೆ ಒಂದು ಮುಖ್ಯ ಕಾರಣ ವಾಹನ ನೊಂದಾವಣೆಯಿಂದ ಸರ್ಕಾರಕ್ಕೆ ಬರುವ ತೆರಿಗೆ ಆದಾಯ. ಭಾರತದ ಒ...