ಮಾಲ್ಗುಡಿ ನಿವಾಸಿಗಳು ಕನ್ನಡದಲ್ಲಿ ಮಾತಾಡ್ತಾಯಿದ್ದ 8 ಸಂಚಿಕೆಗಳನ್ನ ನೋಡಿ ಸಂತಸದಿಂದ ಎದೆ ತುಂಬಿ ಬಂತು ! - ಮಹೇಂದ್ರ
ಮೂವತ್ತು ವರ್ಷಗಳನಂತರ ಮತ್ತೆ ಮಾಲ್ಗುಡಿ ಡೇಸ್ ಧಾರಾವಾಹಿಯ season 4 ಅಲ್ಲಿ ಬಂದ Vendor of sweets ಅನ್ನು ಅಮೆಜಾನ್ ಪ್ರೈಮಲ್ಲಿ ಮನೆಯವರ ಜೊತೆ ನೋಡಿದೆ. ಮಾಲ್ಗುಡಿ ನಿವಾಸಿಗಳು ಮತ್ತೆ ಕನ್ನಡದಲ್ಲಿ ಮಾತಾಡ್ತಾಯಿದ್ದ 8 ಸಂಚಿಕೆಗಳು ನೋಡಿ ಸಂತಸದಿಂದ ಎದೆ ತುಂಬಿ ಬಂತು !
ಹೌದು ಸ್ನೇಹಿತರೆ -ಅಮೆಜಾನ್ ಪ್ರೈಮಲ್ಲಿ ಆಡಿಯೋ ಸೆಟ್ಟಿಂಗ್ಸ್ ಅಲ್ಲಿ ಹಿಂದಿ ಜೊತೆ ಕನ್ನಡ ಆಯ್ಕೆ ಸಹ ಕಂಡು ಬರತ್ತೆ. ಆ ಆಯ್ಕೆಯನ್ನು ಸ್ವೀಕರಿಸಿ ಮಾಲ್ಗುಡಿ ಡೇಸ್ ಕನ್ನಡದಲ್ಲಿ ನೋಡಲು ಸಾದ್ಯ ! ಸದ್ಯಕ್ಕೆ ಬರಿ season 4 ಸಂಚಿಕೆಗಳು ಕನ್ನಡೀಕರಣ ಆಗಿ ಕನ್ನಡದಲ್ಲಿ ಬಂದಿವೆ. ಸೈರಾ ನರಸಿಂಹ ರೆಡ್ಡಿ ದೊಡ್ಡ ಮಟ್ಟದಲ್ಲಿ ಕನ್ನಡದಲ್ಲೂ ಬಿಡುಗಡೆ ಆದನಂತರ ಇದೆ ತಿಂಗಳಲ್ಲಿ ಮಾಲ್ಗುಡಿ ಡೇಸ್ ಕನ್ನಡದಲ್ಲಿ ನೋಡಲು ಅವಕಾಶ ಸಿಕ್ಕಿದ್ದು ಈ ಡಬ್ಬಿಂಗ್ ಹೋರಾಟದ ಪಯಣದಲ್ಲಿ ಒಂದು ದೊಡ್ದು ಮೈಲಿಗಲ್ಲು !
ಇವೆಲ್ಲರ ಬಿಡುಗಡೆ ನಮ್ಮ ನಾಡಹಬ್ಬ ದಸರಾ ಸಮಯದಲ್ಲಾಗಿದ್ದು ಹಾಗು ಕಂಡ ವಿಜಯ ನೋಡಿದಮೇಲೆ ಇದು ಕನ್ನಡೀಕರಣದ ಪಯಣದಲ್ಲಿ ಕಂಡ ಒಂದು ಶಾಶ್ವತವಾದ ಬೆಳ್ವಣಿಗೆ ! ಸೈರಾ ನರಸಿಂಹದಲ್ಲಿ ಸುದೀಪ್ ಅವರು ಕನ್ನಡದಲ್ಲಿ ಅವ್ರೆ ಡಬ್ ಮಾಡಿದ್ದು ಹಾಗು ಮಾಲ್ಗುಡಿ ಡೇಸ್ ಅಲ್ಲಿ ಅನಂತ್ ನಾಗ್ ಅವರ ಧ್ವನಿ ಮತ್ತೆ ಕನ್ನಡದಲ್ಲಿ ಕೇಳಿದ್ದು ಈ ಒಂದು ಬದ್ಲಾವಣೆಯ ಸಂಕೇತ.
ಮೂವತ್ತು ವರ್ಷಗಳ ಹಿಂದೆ ಈ ಮಾಲ್ಗುಡಿ ಡೇಸ್ ನಾನು ವಿಶಾಖಪಟ್ಟಣದಲ್ಲಿ ನಮ್ಮ ತೆಲುಗು ಸ್ನೇಹಿತರ ಮನೆಯಲ್ಲಿ ಕೂತು ಒಟ್ಟಿಗೆ ನೋಡ್ತಿದ್ವಿ ! ಅವಾಗ DD ಅಲ್ಲಿ ಹಿಂದಿಯಲ್ಲಿ ಪ್ರಸಾರ ಆಗ್ತಿದ್ದ ಕಾಲ. ಇದು ನಮ್ಮ ಕನ್ನಡಿಗರೇ ನಟಿಸಿದ ಹಾಗು ನಿರ್ದೇಶನೇ ಮಾಡಿದ್ದ ಧಾರಾವಾಹಿ ಅಂತ ಹೇಳ್ಕೊಂಡು ನಾವು ಹೆಮ್ಮೆ ಪಡ್ತಿದ್ವಿ. ಈಗ ಅದೇ ಮಾಲ್ಗುಡಿ ಡೇಸ್ ಮಕ್ಕಳ ಜೊತೆ ಮತ್ತೆ ಕನ್ನಡದಲ್ಲಿ ನೋಡಿದ್ದು ತುಂಬಾ ಸಂತೋಷ ಆಯ್ತು !
ಹಾಗೇಯೇ ಇದನ್ನ ಕನ್ನಡಿಗರ ಮುಂದೆ ತರುವಲ್ಲಿ ಹರಿವು ಕ್ರೀಯೆಶನ್ಸ್ ರವರ ಪಾತ್ರವೂ ತುಂಬಾ ಮಹತ್ವವಾದದ್ದು .
ನಮ್ಮ ಪಕ್ಕದ ಮನೆಯಲ್ಲಿ ಮಕ್ಕಳಿಗೂ ಸಹ ಈ ಸುದ್ದಿ ತಿಳ್ಸಿದ್ದು ಆಯ್ತು. ನೀವು ಕೂಡಲೇ ನೋಡಿ ಹಾಗು ಬೇರೆ ಕನ್ನಡಿಗರಿಗೂ ಸಹ ತಿಳಿಸಿ.
ಇಂತ ಒಂದು ದೊಡ್ಡ ಬದ್ಲಾವಣಿಗೆ ಕಾರಣವಾದ Ganesh Chetan, ಬನವಾಸಿ ಬಳಗದ ಗೆಳೆಯರು, ಕನ್ನಡ ಗ್ರಾಹಕ ಕೂಟದ ಗೆಳೆಯರು , ಡಬ್ಬಿಂಗ್ ಹೋರಾಟದಲ್ಲಿ ಪಾಲ್ಗೊಂಡಂತ ಎಲ್ಲ ಸ್ನೇಹಿತರಿಗೂ ಕೋಟಿ ಕೋಟಿ ನಮನಗಳು ! ಸಂವಿಧಾನದ ಚೌಕಟ್ಟಲ್ಲಿ ಹೋರಾಟ ಮಾಡಿ ಸಂಘಟಿತವಾಗಿ ನಮ್ಮ ಹಿತವನ್ನು ಕಾಪಾಡ್ಕೊಳ್ಬೇಕು. ನಿಜವಾದ ಬದ್ಲಾವಣೆ ಯಾವಾಗ ಅಂದ್ರೆ ಯಾರು ಮುಂಚೆ ತದ್ವಿರುದ್ದ ಇದ್ರೋ, ಅವರ ಆಲೋಚನೆಗಳು ಹಾಗು ವಿಚಾರಧಾರೆಯಲ್ಲೇ ಬದ್ಲಾವಣೆಯನ್ನು ತಂದು ಎಲ್ಲರು ಸ್ವೀಕರಿಸುವಂತೆ ವ್ಯವಸ್ಥಿತವಾಗಿ ಬದ್ಲಾವಣೆಯನ್ನು ತರುವುದು !
-ಮಹೇಂದ್ರ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ