ಗೋವೆಯ ಸರ್ಕಾರಿ ಸಾರಿಗೆ ಹೆಸರು ಕದಂಬ!

ರ್ನಾಟಕದ ಪ್ರಮುಖ ಕನ್ನಡಿಗ ರಾಜಮನೆತನಗಳಲ್ಲಿ ಒಂದಾದ ಕದಂಬ ರಾಜವಂಶವು ಗೋವೆಯನ್ನು ಆಳಿದ ಪ್ರಮುಖ ರಾಜವಂಶವಾಗಿದೆ . ಅವರ ಆಳ್ವಿಕೆಯಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು , ತದನಂತರದ ದಿನಗಳಲ್ಲಿ ಇತರರ ಆಳ್ವಿಕೆಗೆ ಒಳಪಟ್ಟಾಗ ಕನ್ನಡದ ಭಾಷೆಯ ಬಳಕೆ ಕ್ರಮೇಣ ಕಡಿಮೆಯಾಯಿತು , ಪೋರ್ಚುಗೀಸರು ಮತ್ತು ಮರಾಠರ ಪ್ರಭಾವದಿಂದಾಗಿ ಕನ್ನಡ ಭಾಷೆಯ ಬಳಕೆ ಕ್ರಮೇಣ ಕಡಿಮೆಯಾಗಿ , ಪೋರ್ಚುಗೀಸ್ ಮತ್ತು ಮರಾಠಿ ಭಾಷೆಗಳು ಆಡಳಿತೆಯಲ್ಲಿ ವ್ಯವಹಾರ ಭಾಷೆಗಳಾಗಿ ಪರಿಣಮಿಸಿದ್ದರೂ ಸುಮಾರು 19ನೇ ಶತಮಾನದ ಅಂತ್ಯದವರೆವಿಗೂ ಕನ್ನಡ ಲಿಪಿ ಗೋವೆಯಲ್ಲಿ ಬಳಕೆಯಲ್ಲಿದ್ದುದನ್ನು ಕಾಣಬಹುದು . ಕೊಂಕಣಿ ಲಿಪಿಯಿಲ್ಲದ ಒಂದು ಭಾಷೆ , ಮೆಹರ್‌ಚಂದ್ ಮಹಜನರು ಕೊಂಕಣಿ ಒಂದು ಸ್ವತಂತ್ರ ಭಾಷೆಯೆಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ . ಕೊಂಕಣಿ ಭಾಷೆಯಲ್ಲಿರುವ ಅನೇಕ ಕಾಗದ ಪತ್ರಗಳು ಕನ್ನಡ ಲಿಪಿಯಲ್ಲಿರುವುದು ಗೋವಾ ಪತ್ರಾಗಾರದಲ್ಲಿನ ಕೆಲವು ದಾಖಲೆಗಳಿಂದ ತಿಳಿಯುತ್ತದೆ . 1975ರಲ್ಲಿ ಸೂರಿಯಾಜಿ ಆನಂದರಾವ್ ಎಂಬುವರು ಮರಾಠಿ ಭಾಷೆಯನ್ನು ಬಾಲಭೋದ ಮತ್ತು ಮೋಡಿಲಿಪಿಯಲ್ಲಿ ಮಾತ್ರವಲ್ಲದೆ “ ಕನಡಿ ' ಅಥವಾ ಕಾಂದೇವಿ ಲಿಪಿಯಲ್ಲೂ ಬರೆಯಲಾಗುತ್ತಿತ್ತು ಎಂದು ಹೇಳಿದ್ದಾರೆ . ಕನ್ನಡ ಭಾಷೆ ಮತ್ತು ಕನ್ನಡ ಲಿಪಿಗಳು ಬಹುಕಾಲದಿಂದಲೂ ಆ ಭಾಗಗಳಲ್ಲಿ ಪ್ರಚಲಿತವಿದ್ದು , ಕ್ರಮೇಣ ಕೊಂಕಣಿ , ಮರಾಠಿ ಮತ್ತು ಪೋರ್ಚುಗೀಸ್ ಭಾಷೆಗಳ ಪ್ರಭಾವದಿಂದ ಕನ್ನಡ ಭಾಷೆ ಕಣ್ಮರೆ...