ಪರಭಾಷಿಕರ ಹೋಟ್ಲು, ಡಬ್ಬಿಂಗ್ ಮತ್ತು ಕನ್ನಡಿಗರ ಕಥೆ! ಏನಿದು ಅನ್ಕೊಂಡ್ರಾ ಮುಂದೆ ಓದೋಕೆ ಕೊಂಡಿ ಒತ್ತಿ |ಪ್ರದೀಪ್ ಕುಮಾರ್

ಕರ್ನಾಟಕದಲ್ಲಿ ಹೊರ ರಾಜ್ಯದವರೊಬ್ಬರು ಬಂದು ಒಂದು ಹೊಟೆಲ್ ತೆರೆದರು, ಒಳ್ಳೆಯ ರುಚಿಕರವಾದ ಅಹಾರವನ್ನು ನೀಡುತಿದ್ದರು, ಹೆಚ್ಚು ಹೆಚ್ಚು ಜನ ಆ ಹೊಟೆಲ್ಗೆ ಹೋಗುತಿದ್ದರು. ಆ ಹೊಟೆಲ್ನ ಬೋರ್ಡ್, ಮೆನು ಕಾರ್ಡ್, ಬಿಲ್ ಎಲ್ಲಾ ಕನ್ನಡದಲ್ಲೇ ಇತ್ತು ಮತ್ತು ಎಲ್ಲಾ ಕೆಲಸಗಾರರೂ(ಹೊರ ರಾಜ್ಯದವರು)ಕನ್ನಡದಲ್ಲೇ ವ್ಯವಹರಿಸುತಿದ್ದರು.


ಆಗ ನಮ್ಮ ಹೆಮ್ಮೆಯ ಕೆಲವು ಕನ್ನಡಿಗ ಹೊಟೆಲ್ ಮಾಲೀಕರು ಮತ್ತು ಕೆಲಸಗಾರರೆಲ್ಲಾ ಸೇರಿ ಇನ್ನು ಮುಂದೆ ಹೊರ ರಾಜ್ಯದವರು ಯಾರೇ ಬಂದು ಕರ್ನಾಟಕದಲ್ಲಿ ಹೋಟೆಲ್ ತೆಗೆದರೂ ಅವರ ಬೋರ್ಡ್, ಮೆನು ಕಾರ್ಡ್, ಬಿಲ್ ಇಲ್ಲೆಲ್ಲೂ ಕನ್ನಡವನ್ನು ಬಳಸುವ ಹಾಗಿಲ್ಲ ಮತ್ತು ಯಾವ ಕಾರಣಕ್ಕೂ ಗ್ರಾಹಕರ ಜೊತೆ ಕನ್ನಡದಲ್ಲಿ ವ್ಯವಹರಿಸುವ ಹಾಗಿಲ್ಲ ಎಂಬ ನಿಯಮ ಮಾಡಿಬಿಟ್ಟರು. 

ಪಾಪ ತಮ್ಮ ವ್ಯವಹಾರಕ್ಕೆ ತೊಂದರೆ ಆಗುತ್ತದೆ ಅನ್ನುವ ಕಾರಣಕ್ಕೆ ಅವರೆಲ್ಲಾ ಒಪ್ಪಿ ಕನ್ನಡವನ್ನು ತಮ್ಮ ಸೇವೆಯಿಂದ ತೆಗೆದರು. 

ಆದರೆ ಬಹಳ ರುಚಿಯಾದ ಸಮೋಸ ಕೊಡುತಿದ್ದ ಹೋಟೆಲ್ನವ ಹಿಂದಿಯಲ್ಲೇ ಸೇವೆ ಕೊಡುತಿದ್ದ ಕಾರಣ ಸಮೋಸ ಪ್ರಿಯ ಕನ್ನಡಿಗರೆಲ್ಲಾ ಹಿಂದಿ ಕಲಿತು ವ್ಯವಹರಿಸತೊಡಗಿದರು, ಇಡ್ಲಿ, ದೋಸೆ ಪ್ರಿಯರು ತಮಿಳು ಕಲಿತು ತಮಿಳರಾದರು, ಬಿರಿಯಾನಿ ಪ್ರಿಯರು ತೆಲುಗರಾದರು, ಪರೋಟ ಪ್ರಿಯರು ಮಲಯಾಳಿಗಳಾದರು, ಪಿಡ್ಜ, ಕೇ.ಎಫ್.ಸಿ ಪ್ರಿಯರು ಇಂಗ್ಲೀಷರಾದರು.ಒಟ್ಟಿನಲ್ಲಿ ಹೊಟೆಲ್ನಲ್ಲಿ ತಿನ್ನುವ ಸಲುವಾಗಿ ಪರಭಾಷೆ ಕಲಿತು ಕನ್ನಡದಿಂದ ದೂರವಾಗಿ ಹಾಯಾಗಿದ್ದಾರೆ.

ಆದರೆ ನಮ್ಮ ಕನ್ನಡದ ಹೋಟೆಲ್ ಮಾಲೀಕರು ಮಾತ್ರ ಕನ್ನಡಿಗರು ನಿರಭಿಮಾನಿಗಳು ನಮ್ಮ ಕನ್ನಡಿಗರ ಹೊಟೆಲ್ಗೆ ಬರದೆ,  ಬೇರೆ ಭಾಷೆಗಳನ್ನು ಕಲಿತು ಪರಕೀಯರ ಹೊಟೆಲ್ಗೆ ಹೋಗುತ್ತಾ ಇದ್ದಾರೆ ಎಂದು ಗೋಳಾಡುತಿದ್ದಾರೆ.....!
#ಡಬ್ಬಿಂಗ್_ಇದು_ಕನ್ನಡಪರ

- ಪ್ರದೀಪ್ ಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ

CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

Exploiting the South: How the Central Government Systematically Undermines South Indian States