ಈ ಚೈನಾದವರು ತಮಿಳು ಯಾಕೆ ಕಲಿತಿದಾರೆ ? ತಮಿಳು ಸಂಸ್ಕೃತಿ ಬಗ್ಗೆ ಯಾಕೆ ಅಧ್ಯಯನ ಮಾಡ್ತಿದ್ದಾರೆ 🤔, ಇವರಿಗೆ ಕನ್ನಡವನ್ನ ಹೇಗೆ ಕಲಿಸೋದು?
ಪ್ರಬಲ ಕರ್ನಾಟಕ ಸಂಗೀತ ವಿದ್ವಾನ್ ಕವಿತಾ ರಮನನ್ ರವರಿಂದ ಚೈನೀಸ್ ಭಾಷೆಯವರಿಗಾಗಿ ನೀಡಲ್ಪಟ್ಟ ಕರ್ನಾಟಕ ಸಂಗೀತ ಕುರಿತಾದ ಒಂದು ಸೆಮಿನಾರ್. ಬೀಜಿಂಗ್ ನಲ್ಲಿನ ಅಂತಾರಾಷ್ಟ್ರೀಯ ಭಾಷಾ ವಿಶ್ವವಿದ್ಯಾನಿಲಯದ ತಮಿಳ್ ಡೆಪಾರ್ಟ್ಮೆಂಟಲ್ಲಿ ನಡೆದದ್ದು.
ಈ ಚೈನಾದವರು ತಮೀಳು ಯಾಕೆ ಕಲಿತಿದಾರೆ ? ತಮಿಳು ಸಂಸ್ಕೃತಿ ಬಗ್ಗೆ ಯಾಕೆ ಅಧ್ಯಯನ ಮಾಡ್ತಿದ್ದಾರೆ 🤔
ಸಂಸ್ಕೃತ ಕಡಿಮೆ, ಹಿಂದಿ ಮತ್ತು ತಮಿಳ್ ಕಲೀತಿದ್ದಾರೆ. ಅಂದ್ರೆ ಅವರ ಬಿಸಿನೆಸ್ ಪರ್ಪಸ್ ಗೆ. ಹಿಂದಿ ಉತ್ತರ ಭಾರತಕ್ಕೆ ಬಳಕೆಯಾದ್ರೆ ತಮಿಳ್ ತಮಿಳ್ನಾಡು, ಶ್ರೀಲಂಕಾ, ಹಾಗೂ ಸಿಂಗಪುರ್ ಮಲೇಷಿಯಾ ದಲ್ಲಿ ಮುಂದೆ ವ್ಯಾಪಾರಕ್ಕೆ ಬಳಕೆಯಾಗಬಹುದು. ಚೈನಾದ ವಸ್ತುಗಳನ್ನು ಇವರಿಗೆಲ್ಲಾ ಮಾರಬೇಕಲ್ವಾ, ಅದ್ಕೆ. ಟೋಟಲಿ ಅವರ ಉದ್ಯಮವನ್ನು ವಿಸ್ತರಿಸಲು. ಯಾಕೆಂದ್ರೆ ಚೈನಾ ವಿಶ್ವದಲ್ಲೇ ಅತೀ ದೊಡ್ಡ ಉತ್ಪಾದನಾ ದೇಶ.
ಆ ಬೀಜಿಂಗ್ ಅಂತಾರಾಷ್ಟ್ರೀಯ ಭಾಷಾ ವಿಶ್ವವಿದ್ಯಾಲಯದಲ್ಲಿ ಭಾರತದ ಭಾಷೆಗಳಾದ ಹಿಂದಿ, ಬಂಗಾಳಿ, ತಮಿಳ್, ಉರ್ದು ಮುಂತಾದ ಭಾಷೆಗಳನ್ನು ಕಲಿಸಲಾಗುತ್ತಿದೆ. ಉರ್ದು ಪಾಕಿಸ್ತಾನಕ್ಕೆ, ಬಂಗಾಳಿ ಬಾಂಗ್ಲಾದೇಶಕ್ಕೆ.
ಹೆಂಗಾದ್ರೂ ಮಾಡಿ ಈ ಚೈನೀಸ್ ಗಳಿಗೆ ಕನ್ನಡ ಕೂಡ ಕಲಿಸ್ಬೇಕು🙂!
ಕಲಿಸಬಹುದು, ಆದ್ರೆ ನಮ್ ಜನರು ಸರಿಲ್ಲ. ನಮ್ಮವರಿಗೆ ಕರ್ನಾಟಕದ ಏಳಿಗೆ ಬಗ್ಗೆನೇ ಗೊತ್ತಿಲ್ಲ, ಮತ್ತೆಲ್ಲಿ ಕನ್ನಡದ ಏಳಿಗೆ ಬಗ್ಗೆ ಮಾತಾಡೋದು. ನಾವು/ಕನ್ನಡಿಗರು ಪ್ರತಿಯೊಂದರಲ್ಲೂ ತುಂಬಾ ಲೇಟ್. ಅದ್ಕೇನೆ ನಮ್ಮ ಬಗ್ಗೆ ನಮ್ಮ ನುಡಿಯ ಬಗ್ಗೆ ಬೇರೆ ರಾಜ್ಯದ ಜನರಿಗೆ ಸರಿಯಾಗಿ ರೀಚ್ ಆಗದೇ ಹೋಗಿದ್ದು. ಅದ್ಕೆ ಮೊದಲ ಕಾರಣ ನಾವು ಹಿಂದಿಯನ್ನು ಒಪ್ಪಿಕೊಂಡದ್ದು. ಸೋ ಅವರು ಡೈರೆಕ್ಟಾಗಿ ಹೇಳ್ತಾರೆ ನಿಮ್ಗೆ ಹಿಂದಿ ಗೊತ್ತಲ್ವಾ ಅಂತ. ಮತ್ತೆ ಇನ್ನೊಂದು ಕಾರಣ ನಮ್ಮ ಜನರು ರಾಷ್ಟ್ರ ಅಂತಾರಾಷ್ಟ್ರೀಯ ಲೆವೆಲಲ್ಲಿ ಕಾಣಿಸಿಕೊಳ್ಳಬೇಕು. ಅಲ್ಲೂ ನಾವು ಹಿಂದೆ ಬಿದ್ದಿದೆವೆ. ಮೊದ್ಲು ಕರ್ನಾಟಕ ಮಾತ್ರ ನಮ್ಮ ನಾಡು ಅನ್ನೋದನ್ನ ಬಿಡಬೇಕು. ವಿಶ್ವವೇ ನಮ್ಮದು ಎಂಬ ಮನೋಭಾವ ನಮ್ಮಲ್ಲಿ ಬರಬೇಕು. ಕನ್ನಡವನ್ನು ಬಹಳ ಕಡೆ ಉಪಯೋಗಕ್ಕೆ ತರಬೇಕು. ಮೊದ್ಲು ಕನ್ನಡ ಜಸ್ಟ್ ಒಂದು ಭಾಷೆ ಎನ್ನುವ ಮನಸ್ಥಿತಿಯನ್ನು ಬಿಡಬೇಕು. ಕನ್ನಡ ನಮ್ಮ ಶರೀರರ ಒಂದು ಅಂಗ ಅಂತ ಭಾವಿಸಬೇಕು.
ನಾನ್ಯಾಕೆ ತಮಿಳರ ತಮಿಳ್ನಾಡಿನ ಸುದ್ದಿಗಳನ್ನು ಜಾಸ್ತಿ ಕನ್ನಡಕ್ಕೆ ಭಾಷಾಂತರಿಸಿ ಕೊಡ್ತಿದ್ದೇನೆ ಗೊತ್ತಾ? ತಮಿಳ್ನಾಡಿಗೆ/ತಮಿಳರಿಗೆ ಸಪೋರ್ಟ್ ಅಂತ ಅಲ್ವೇ ಅಲ್ಲ. ಆದ್ರೆ ಅವರು ಅಷ್ಟು ಮುಂದಕ್ಕೆ ಹೋಗ್ತಿದ್ದಾರೆ, ಅವರ ಪಕ್ಕದ ರಾಜ್ಯ ಅವರಿಗಿಂತ ತುಂಬಾ ನೈಸರ್ಗಿಕ ಸಂಪತ್ತನ್ನು ಹೊಂದಿರುವ ರಾಜ್ಯ, ನಾವು ಯಾಕೆ ಹೀಗಿದ್ದೇವೆ ಅಂತ ನಮ್ಮ ಕನ್ನಡಿಗರಿಗೆ ತಿಳಿಸಲು ನಾನು ಇದನ್ನು ಮಾಡುತ್ತಿದ್ದೇನೆ. ಆವಾಗವಾದ್ರೂ ಇವರಿಗೆ ತಿಳಿಯುತ್ತೆ ಅಂತ.
ಇನ್ನೊಂದು ವಿಷಯ ಏನೆಂದ್ರೆ ನಾವು ನಮ್ಮ ವ್ಯಾಪಾರವನ್ನು ಜಾಗತೀಕರಿಸಬೇಕು, CCD ಸಿದ್ದಾರ್ಥ ತರ. ಆದ್ರೆ ಸಿದ್ದಾರ್ಥ ವ್ಯಾಪಾರವನ್ನು ಮಾತ್ರ ತಗೊಂಡು ಹೋದ್ರೆ ಹೊರತು ಕನ್ನಡವನ್ನ ತಗೊಂಡು ಹೋಗಿಲ್ಲ. ಅಲ್ಲೂ ಎಡವಟ್ಟು ಮಾಡ್ಕೊಂಡಿದ್ದೀವಿ. ಈ ತರ ಕೆಲವು ಹಲವು ಲೋಪದೋಷಗಳಿವೆ. ಇವನ್ನೆಲ್ಲಾ ಸರಿಪಡಿಸಬೇಕು. ಈ ಡಿಜಿಟಲ್ ಯುಗದಲ್ಲಿ ಸರಿಪಡಿಸೋದು ಮೊದಲಿಗಿಂತ ಸುಲಭ. ಆದ್ರೆ ನಮ್ ಜನ ಮನಸ್ಸು ಮಾಡಬೇಕು. ಮನಸ್ಸಿದ್ದಲ್ಲಿ ಮಾರ್ಗವಿದೆ. ಈ ಕಾಲದಲ್ಲಿ ಮೊದಲಿಗಿಂತ ಎಲ್ಲವೂ ಸುಲಭ.
- ಮಂಜುನಾಥ್ ಎಸ್ ಮಾರನ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ