CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ | ಕನ್ನಡಿಗರಿಗೂ ಸಂಭಂದಿಸಿದೆ ಇದು|

#CAB ಬಗ್ಗೆ ರಾಜಾರಾಂ ತಲ್ಲೂರು ಅವರ ಬರಹವನ್ನು ದಯವಿಟ್ಟು ಓದಿ, ಹಂಚಿಕೊಳ್ಳಿ. ----------------- ಪೌರತ್ವ ಕಾಯಿದೆಯ ವಿರುದ್ಧ ಮೂವರು ಹಿರಿಯ ವಿಶ್ರಾಂತ ಅಧಿಕಾರಿಗಳು ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ಸಾರಾಂಶವನ್ನು ಇಲ್ಲಿ ಭಾಷಾಂತರಿಸಿದ್ದೇನೆ. ಸರಳ ಮಾತುಗಳಲ್ಲಿ ಏಕೆ ಈ ಕಾಯಿದೆ ಸರಿ ಇಲ್ಲ ಎಂದು ರಿಟ್ ಅರ್ಜಿಯಲ್ಲಿ ವಿವರಿಸಲಾಗಿದೆ. ಬಾಂಗ್ಲಾದೇಶದಲ್ಲಿ ಭಾರತದ ಹೈಕಮಿಷನರ್ ಆಗಿದ್ದ ದೇವ್ ಮುಖರ್ಜಿ, ಸೋಮಸುಂದರ್ ಬುರ್ರಾ, ಅಮಿತಾಭಾ ಪಾಂಡೆ ಎಂಬ ಇಬ್ಬರು ನಿವ್ರತ್ತ ಹಿರಿಯ ಐ ಎ ಎಸ್ ಅಧಿಕಾರಿಗಳು ಸಲ್ಲಿಸಿರುವ ರಿಟ್ ಅರ್ಜಿ ಇದು. ------------------------------- ಅನುವಾದ: ರಾಜಾರಾಂ ತಲ್ಲೂರು ಶತಮಾನಗಳಿಂದ ಮನುಷ್ಯ ಧರ್ಮ ಮತ್ತು ನಂಬಿಕೆಗಳ ಹೆಸರಿನಲ್ಲಿ ದೌರ್ಜನ್ಯ, ತಾರತಮ್ಯ ಮತ್ತು ಹಿಂಸೆಗಳಿಗೆ ಬಲಿಯಾಗುತ್ತಾ ಬಂದಿದ್ದಾನೆ. ಇದರಿಂದಾಗಿ ವ್ಯಕ್ತಿಗಳು, ಕುಟುಂಬಗಳು, ಜನಸಮುದಾಯಗಳು ತಮ್ಮ ತಾಯ್ನೆಲವನ್ನು ಬಿಟ್ಟು ಹೋಗಬೇಕಾದ ಮತ್ತು ಬೇರೆಲ್ಲೋ ಹೋಗಿ ಆಶ್ರಯ ಪಡೆಯುವ ದಾರುಣ ಪರಿಸ್ಥಿತಿ ಬಂದದ್ದಿದೆ. ಕೆಲವೊಮ್ಮೆ ಅವರಿಗೆ ಆಯ್ಕೆಗಳಿರುವುದಿಲ್ಲ. ಜಗತ್ತಿನ ಚರಿತ್ರೆ ಎಂದರೆ, ಗಂಡಸರು, ಹೆಂಗಸರು ಮತ್ತು ಮಕ್ಕಳು ತಮ್ಮದೇ ನೆಲದಲ್ಲಿ ಪರಕೀಯರಾಗುವುದರ ಮತ್ತು ಅವರ ಆ ಅಸಹಾಯಕ ಸ್ಥತಿಯಲ್ಲಿ ಸಮಾಜಗಳು, ದೇಶಗಳು ಅವರಿಗೆ ಆಶ್ರಯ ನೀಡಿದ್ದರ...