ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ
ಹೌದು ಹಿಂದಿ ನುಡಿಯ ದಾಸ್ಯ ಸ್ವೀಕರಿಸಿದ ರಾಜ್ಯ ಸರ್ಕಾರದಿಂದಲೇ ನಡೆಯುತ್ತಿದೆ ಕನ್ನಡದ ಕಡೆಗಣನೆ.
2-3 ದಿನದಲ್ಲಿ ಆಗಿರುವ ಕೆಲವು ವಿಚಾರಗಳನ್ನು ಗಮನಿಸಿ
1. ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ಹಿಂದಿ ರಾಷ್ಟ್ರಭಾಷೆ ಎಂದೂ, ಹಿಂದಿ ಜ್ಞಾನದ ಭಾಷೆ, ಹಿಂದಿ ಕಲಿಯಬೇಕೆನ್ನುವಂತೆ ಹೇಳಿಕೆ ನೀಡಿದ್ದಾರೆ, ಶಿಕ್ಷಣ ಸಚಿವರಾಗಿರುವುದರಿಂದ ಈ ಹೇಳಿಕೆ ಅತ್ಯಂತ ಆತಂಕಕಾರಿಯಾಗಿದೆ
2. ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸಿಟಿ ರವಿ ರವರು, ಹಿಂದಿ ಹೇರಿಕೆಯನ್ನು ವಿರೋಧಿಸುವ ಹೋರಾಟದ ಬಗ್ಗೆ ತೀರಾ ಕೇವಲವಾಗಿ ಮಾತನಾಡಿದ್ದಾರೆ....
ಇಂದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕನ್ನಡ ಅನ್ನದ ಭಾಷೆಯಾಗಬೇಕು ಎನ್ನುವುದೇ ಭ್ರಮೆ ಎಂದಿದ್ದಾರೆ
3. ಕೇಂದ್ರ ಸರಕಾರ ರಾಜ್ಯ ಸರಕಾರದ ಉದ್ಯೋಗ ನೇಮಕಾತಿಯನ್ನೂ ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಮುಂದಾಗುತ್ತಿದೆ..
Connecting the dots ಅಂತಾರಲ್ಲಾ.. ಹಾಗೆ ಈ ವಿಚಾರಗಳನ್ನು connect ಮಾಡಿದಾಗ ಮುಂದಿನ ದಿನದಲ್ಲಿ ಕನ್ನಡಿಗರ ಮೇಲೆ ಆಗಬಹುದಾದ ಭಾಷಾ ಹೇರಿಕೆ/ದಾಳಿ ದೊಡ್ಡದಾಗಿಯೇ ಇರುತ್ತದೆ ಎನ್ನುವುದನ್ನು ಊಹಿಸಬಹುದಾಗಿದೆ.
ಯಾವ ಕಾರಣಕ್ಕಾಗಿ ಶಿಕ್ಷಣ ಸಚಿವರು ಹಿಂದಿ ರಾಷ್ಟ್ರಭಾಷೆಯೆಂದು ಸುಳ್ಳು ಹೇಳಿದ್ದಾರೆ?
ಕನ್ನಡ ಮತ್ತು ಸಂಸ್ಕೃತಿ ಸಚಿವರು, ತಮ್ಮ ಮಕ್ಕಳನ್ನು ಇಂಗ್ಲೀಶ್ ಮಾಧ್ಯಮದಲ್ಲಿ ಓದಿಸಿ, ಆಡು ಭಾಷೆ ಕನ್ನಡ ಅರ್ಥವಾಗದಂತೆ ಮಾಡಿ, ಕೊನೆಗೆ ಕನ್ನಡಕ್ಕೆ ಅಪಾಯವಿರುವುದು ಇಂಗ್ಲೀಶ್ ನಿಂದ ಹಿಂದಿಯಿಂದಲ್ಲಾ ಎನ್ನುವ ತೀರ್ಪಿನ ಮಾತುಗಳನ್ನೇಕೆ ಅಡಿದರು? ಹಿಂದಿ ಹೇರಿಕೆಯ ವ್ಯಾಪ್ತಿ ಇವರಿಗೆ ಅರಿವಿಲ್ಲವೇ ಅಥವಾ ಈ ಮಾತುಗಳು ಕನ್ನಡ ನಾಡಿನಲ್ಲಿ ಆಗಬಹುದಾದ ಬದಲಾವಣೆಗಳ ಸೂಚನೆಗಳೇ? ಇಂದು ಕನ್ನಡ ಅನ್ನದ ಭಾಷೆಯಾಗಬೇಕು ಎನ್ನುವುದೇ ಭ್ರಮೆ ಎಂದು ಹೇಳಿಕೆ ನೀಡಲು ಹಿಂದಿರುವ ಕಾರಣಗಳೇನು?
ಕೇಂದ್ರದ ಉದ್ಯೋಗಗಳು ಕನ್ನಡಿಗರಿಗೆ ಸಿಗದಂತೆ ನಿಯಮಗಳನ್ನು ರೂಪಿಸಿಕೊಂಡಿರುವುದರ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ, ರಾಜ್ಯ ಸರಕಾರದ ಉದ್ಯೋಗ ನೇಮಕಾತಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವ ಈ ಸಮಯದಲ್ಲಿ ಶಿಕ್ಷಣ ಸಚಿವರ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರ ಹೇಳಿಕೆಗಳನ್ನು ಗಂಬೀರವಾಗಿಯೇ ತೆಗೆದುಕೊಳ್ಳಬೇಕಿದೆ..
ಕನ್ನಡಿಗರ ಮುಂದಿರುವ ಆಯ್ಕೆಗಳು - ಇವರು ಸುಳ್ಳುಗಳು/ಹೇರಿಕೆಗಳ ವಿರುದ್ದ ಪ್ರತಿಭಟಿಸೋದು ಅಥವಾ ಶರಣಾಗಿ ಕೈಚಲ್ಲುವುದು...
ನಾಳೆ ಈ ಸುಳ್ಳುಗಳ ವಿರುದ್ದ ಟ್ವಿಟರ್ ಅಭಿಯಾನವಿದೆ. ಇವರ ಹೇಳಿಕೆಗಳು ಎಷ್ಟು ಸುಳ್ಳು ಎನ್ನುವುದನ್ನು ತೋರಿಸೋಣ, ಹಿಂದಿ ಹೇರಿಕೆಯ ವ್ಯಾಪ್ತಿಯೇ ಅರಿಯದ ಸಚಿವರುಗಳಿಗೆ ಅರಿವು ಮೂಡಿಸಲು ಪ್ರಯತ್ನಿಸೋಣ..
- ಅರುಣ್ ಜಾವಗಲ್, ಬನವಾಸಿ ಬಳಗ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ